ಬದುಕನ್ನು ಶ್ರೀಮಂತಗೊಳಿಸುವ ಶಕ್ತಿ ಗ್ರಂಥಗಳಿಗಿದೆ: ಅಲ್ಲಮಪ್ರಭುಸ್ವಾಮಿ

0
5

ಬದುಕನ್ನು ಶ್ರೀಮಂತಗೊಳಿಸುವ ಶಕ್ತಿ ಗ್ರಂಥಗಳಿಗಿದೆ: ಅಲ್ಲಮಪ್ರಭುಸ್ವಾಮಿ
ಬೆಳಗಾವಿ:
ಗ್ರಂಥಗಳನ್ನು ಓದುವವರು ಸಂಖ್ಯೆ ಕಡಿಮೆ ಇದ್ದರೂ ಸಾಹಿತಿಗಳು ಗ್ರಂಥಗಳನ್ನು ಪ್ರಕಟಣೆ ಮಾಡುತ್ತಿರುವುದು ಸಂತಸ ತಂದಿದೆ. ಗ್ರಂಥಗಳಲ್ಲಿ ಮಾನವನ ವಿಕಾಸಕ್ಕೆ ಬೇಕಾಗುವ ಎಲ್ಲ ಧನಾತ್ಮಕ ಮಾರ್ಗದರ್ಶನಗಳಿರುತ್ತವೆ. ಹಾಗಾಗಿ ಬದುಕನ್ನು ಶ್ರೀಮಂಗೊಳಿಸುವ ಶಕ್ತಿ ಗ್ರಂಥಗಳಿಗೆ ಇದೆ ಎಂದು ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಎಸ್.ಜಿ.ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಸಭಾಂಗನದಲ್ಲಿ ನಡೆದ, ಗಂದಿಗವಾಡದ ಮೃತ್ಯುಂಜಯಸ್ವಾಮಿ ಹಿರೇಮಠ ಅವರ “ಸದ್ಯೋನ್ಮುಕ್ತೆ” ಎಂಬ ನಾಟಕ ಕೃತಿಯ ಲೋಕಾರ್ಪಣೆಯ ಸಮಾರಂಭದ ಸಾನಿಧ್ಯವಹಿಸಿ, ಇಂದು ನಾಟಕ ಕಲೆಯು ನಶಿಸಿ ಹೋಗುತ್ತಿರುವುದು ವಿಷಾದನೀಯಾಗಿದೆ. ಎಲ್ಲರೂ ನಾಟಕ ಕಲೆಗಳಿಂದ ವಿಮುಖರಾಗಿದ್ದಾರೆ. ಅದರಂತೆ ನಾಟಕ ಕೃತಿಕಾರರ ಸಂಖ್ಯೆಯೂ ವಿರಳವಾಗಿದೆ. ಆದರೆ ಪ್ರವಚನಕಾರರಾದ ಮೃತ್ಯುಂಜಯಸ್ವಾಮಿ ಹಿರೇಮಠರವರು ಭಕ್ತಿಪ್ರಧಾನ ನಾಟಕವನ್ನು ರಚನೆ ಮಾಡುವ ಮೂಲಕ ಸಮುದಾಯಕ್ಕೆ ಉಪಕಾರವನ್ನು ಮಾಡಿದ್ದಾರೆ. ಇವರಿಂದ ಇನ್ನಷ್ಟು ನಾಟಕ ಕೃತಿಗಳು ಸಾಹಿತ್ಯಲೋಕವನ್ನು ಸೇರಲಿ ಎಂದು ಆಶೀರ್ವಾಚನ ನೀಡಿದರು.  ನಾಟಕಗಳ ನೋಡುವ ಹಾಗೂ ಪ್ರೋತ್ಸಾಹಿರುವ ಪರಂಪರೆಯು ಇಂದು ಇಲ್ಲವಾಗಿದೆ. ರಂಗಭೂಮಿಯು ಒಂದು ವಿಶ್ವವಿದ್ಯಾಲಯದಂತೆ ಕಾರ್ಯನಿರ್ವಹಿಸುತ್ತದೆ.
ಸಮುದಾಯದ ಹಾಗೂ ವ್ಯಕ್ತಿಗಳ ಓರೆಕೋರೆಗಳನ್ನು ಮನರಂಜನೆಯ ಮೂಲಕ ತಿದ್ದುವ ಕಾರ್ಯವನ್ನು ಮಾಡುತ್ತದೆ. ನಾಟಕಗಳು ಸಮುದಾಯವನ್ನು ಬೆಸೆಯುವ ಕಾರ್ಯವನ್ನು ಮಾಡುವ ಮೂಲಕ ಸಾಮರಸ್ಯವನ್ನು ಬಿತುವ ಕೆಲಸ ಮಾಡುತ್ತದೆ. ಆ ನಿಟ್ಟಿನಲ್ಲಿ ಮೃತ್ಯುಂಜಯಸ್ವಾಮಿ ಹಿರೇಮಠ ಅವರ “ಸದ್ಯೋನ್ಮುಕ್ತೆ” ಎಂಬ ನಾಟಕ ಕೃತಿಯು ಕೂಡ ಇತಿಹಾಸದಲ್ಲಿ ಮೈಲುಗಲ್ಲು ಆಗುವುದರಲ್ಲಿ ಸಂದೇಹವಿಲ್ಲ ಎಂದು ಪ್ರೊ. ಶ್ರೀಕಾಂ ಶಾನವಾಡ ಅವರು ಅಭಿಪ್ರಾಯಪಟ್ಟರು.
ಯರಗಟ್ಟಯ ಪೃಥ್ವಿ ಇಂಟರ್‌ನ್ಯಾಶನಲ್ ಶಾಲೆಯ ಮಕ್ಕಳು ಪ್ರಾರ್ಥನೆಯನ್ನು ನಡೆಸಿಕೊಟ್ಟು. ಅದರಂತೆ ಮನೋಜ ಹೊಸವಾಳ ಹಾಗೂ ಬಸವರಾಜ ಗಜೇಂದ್ರಗಡ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಖ್ಯಾತ ಸಾಹಿತಿಗಳಾದ ಶ್ರೀಮತಿ ಸುನಂದಾ ಯಮ್ಮಿ ಹಾಗೂ ಶ್ರೀಮತಿ ಪ್ರತಿಭಾ ಕಳ್ಳಿಮಠ ಅವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು ನಗರದ ಬಹಳಷ್ಟು ಜನ ಈ ಕಾರ್ಯಕ್ರಮದ ಲಾಭವನ್ನು ಪಡೆದರು.

loading...