ಬದುಕಲು ಜೀವನ ಮೌಲ್ಯ ಅವಶ್ಯ : ಡಾ. ಜುನ್ನಾಯಕರ

0
46

ಮೂಡಲಗಿ 15: ಇಂದಿನ ವ್ಯವಹಾರಿಕ ದಿನದಲ್ಲಿ ಬದುಕಲು ಶಿಸ್ತು, ಜ್ಞಾನ, ಸಂವಹನ ಕೌಶಲ್ಯಗಳು ಅತ್ಯವಶ್ಯಕವಾಗಿದ್ದು ಅವುಗಳನ್ನು ರೂಢಿಸಿಕೊಳ್ಳಲು ಬನಹಟ್ಟಿಯ ಎಸ್.ಟಿ.ಸಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಜಿ. ಆರ್. ಜುನ್ನಾಯಕರ ವಿದ್ಯಾರ್ಥಿಗಳಿಗೆ ಕರೆ ನೀಡಿzರು ಸ್ಥಳೀಯ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಇಲ್ಲಿ ಅಸ್ತ್ರಾ-2016, ಒಂದು ದಿನದ ರಾಜ್ಯ ಮಟ್ಟದ ಬಿಸಿನೆಸ್ ಫೆಸ್ಟನ್ನು ಹಮ್ಮಿಕೊಳ್ಳಲಾಗಿತ್ತು ಈ ಸಂದರ್ಭದಲ್ಲಿ ಮಾತನಾಡಿದ ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಈ ಕಾರ್ಯ ಶ್ಲ್ಯಾಘನೀಯವಾಗಿದೆ. ವಿದ್ಯಾರ್ಥಿಗಳಿಗೆ ಗ್ರಾಮೀಣ ಮಟ್ಟದಲ್ಲಿ ಇಂತಹ ಕಾರ್ಯಕ್ರಮಗಳು ಅವಿಸ್ಮರಣೀಯವಾಗಿವೆ ಎಂದು ಪ್ರಶಂಸಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಶ್ರೀಪಾದಬೋಧ ಸ್ವಾಮಿಜಿಗಳು, ಕಾಲೇಜಿನಲ್ಲಿ ಅಸ್ತ್ರಾ-2016 ಕಾರ್ಯಕ್ರಮವು ತುಂಬಾ ಪ್ರಯೋಜನಕಾರಿಯಾಗಿದ್ದು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಲು ಕರೆ ನೀಡಿದರು.
ಪುರಸಭೆ ಸದಸ್ಯ ಶ್ರೀ ಸಂತೋಷ ಕೆ. ಸೋನವಾಲ್ಕರ ಕಾರ್ಯಕ್ರಮ ಉದ್ಘಾಟಸಿದರು. ಪ್ರಾಚಾರ್ಯ ಡಾ.ಪಿ.ಎ.ಘಂಟಿ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಮಾರಂಭದಲ್ಲಿ ಕಾಲೇಜು ಅಭಿವೃದ್ದಿ ಸಮಿತಿಯ ಹಿರಿಯರಾದ ರಮೇಶ ಪ್ಯಾಟಿಗೌಡರ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್ ಜಿ.ಢವಳೇಶ್ವರ ಗೊಡಚೆಪ್ಪಾ ಮುರಗೋಡ,ಆನಂದರಾವ್ ವೆಂ.ನಾಯ್ಕ, ಉಪನ್ಯಾಸಕರಾದ ಡಾ. ಪಿ. ಬಿ. ನರಗುಂದ, ಶೀವಲೀಲಾ, ಪ್ರಕಾಶ ಕುಂದರಗಿ, ಶುಮಿತ್ರಾ ಮಾಸ್ತಿ, ಯರಿಯಪ್ಪಾ ಬಿ ರಾ ವಡ್ಲಿ, ಎಸ್ ದೇಶಪಾಂಡೆ ಶಿವರಾಜ ಮುಗಳಖೊಡ ಮತ್ತು ಮಹಾಂತೇಶ ಘಟ್ಟಿಗನವರ ಉಪಸ್ಥಿತರಿದ್ದರು.
ಶ್ರೀ ಚಂದ್ರಶೇಖರ ಹಿರೇಮಠ ಪ್ರಾಸ್ತಾವಿಕ ನುಡಿ ನುಡಿದರು ಶ್ರೀ ರವಿ ಗಡದನ್ನವರ
ಸ್ವಾಗತಿಸಿದ ರುಸಲಾಮತ್‍ಅಲಿ ಫಣಿಬಂದ್ ವಂದಿಸಿದರು. ಕಾರ್ಯಕ್ರಮವನ್ನು ಕು.ರಫೀಕ್ ತರತರಿ, ಕು ವೀಣಾ ನಿರೂಪಿಸದರು. ಎಲ್ಲಾ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಹಾಜರಿದ್ದರು.

loading...

LEAVE A REPLY

Please enter your comment!
Please enter your name here