ಬರ್ಮಾ ದೇಶದ ಮುಸ್ಲಿಂ ಸಮುದಾಯದ ನರಮೇಧ ಖಂಡಿಸಿ: ಪ್ರತಿಭಟನೆ

0
40

ಬಸವನಬಾಗೇವಾಡಿ: ಬರ್ಮಾ ದೇಶದಲ್ಲಿ ಪ್ರತಿನಿತ್ಯ ಮುಸ್ಲಿಂ ಸಮುದಾಯದ ಮೇಲಿನ ದೌರ್ಜನ್ಯ ಹಾಗೂ ನರಮೇಧವನ್ನು ಖಂಡಿಸಿ ಟಿಪ್ಪು ಸುಲ್ತಾನ ಸಂಘರ್ಷ ಸಮಿತಿ ಹಾಗೂ ಟಿಪ್ಪು ಕ್ರಾಂತಿ ಸೇನೆ ನೇತೃತ್ವದಲ್ಲಿ ಮುಸ್ಲಿಂ ಸಮಾಜದವರು ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿ ಆಕ್ರೋಶವ್ಯಕ್ತಪಡಿಸಿದರು.
ಸ್ಥಳೀಯ ತೆಲಗಿ ರಸ್ತೆಯ ಜಾಮೀಯಾ ಮಸ್ಜೀದ್ ಮುಂಭಾಗದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಮುಸ್ಲಿಂ ಸಮಾದ ಮುಖಂಡರು ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಬರ್ಮಾ ದೇಶದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಬಸವೇಶ್ವರ ವೃತ್ತದಲ್ಲಿ ಹಾಯ್ದು ತಹಶೀಲ್ದಾರ ಕಛೇರಿ ಮುಂಭಾಗದಲ್ಲಿ ತೆರಳಿ ಸಾಂಕೇತಿಕ ಧರಣಿ ನಡೆಸಿದರು.
ಟಿಪ್ಪು ಕ್ರಾಂತಿ ಸೇನೆ ತಾಲೂಕ ಅಧ್ಯಕ್ಷ ಖಾಜಾಂಬರ ನಧಾಪ್, ಮುಲ್ಲಾಸಾಬ ಮೋಗಲಾಯಿ, ಸಾಹಿಬ್‍ಲಾಲ ನಧಾಪ್, ಎಂ.ಯು.ನಾಯ್ಕೋಡಿ, ರಾಜೇಸಾಬ ಚಳ್ಳಿಗಿಡದ, ನಸೀರ್ ತಾಂಬೋಳಿ, ಶರೀಪ್ ಉಳ್ಳಾಗಡ್ಡಿ, ಸದ್ದಾಂ ಮುಲ್ಲಾ ಸೇರಿದಂತೆ ಮುಂತಾದವರು ನೇತೃತ್ವವಹಿಸಿದ್ದರು, ಶಿರಸ್ತೇದಾರ ಅನ್ನಪೂರ್ಣ ಹಿರೇಮಠ ಅವರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

 

loading...