ಬಸನಗೌಡ ಯತ್ನಾಳ ಕೋಮು ಸಾಮರಸ್ಯ ಹಾಳು ಮಾಡುವ ಕೆಲಸ ಬಿಡಬೇಕು : ಪ್ರಕಾಶ

0
53

ಮುದ್ದೇಬಿಹಾಳ : ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ(ಯತ್ನಾಳ) ತಮ್ಮ ಸಾಧನೆ, ತಮ್ಮ ಪಕ್ಷದ ಸಿದ್ದಾಂತಗಳನ್ನು ಹೇಳಿ ಮತ ಕೇಳಲು ನಮ್ಮ ಅಭ್ಯಂತರವಿಲ್ಲ. ಆದರೆ ಮುಸಲ್ಮಾನರ ಓಟು ಬೇಕಿಲ್ಲ ಎಂಬಿತ್ಯಾದಿ ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ನಗರದ ಕೋಮು ಸಾಮರಸ್ಯವನ್ನು ಹಾಳು ಮಾಡುವ ಕೆಲಸ ಮಾಡಬಾರದು ಎಂದು ವಿಧಾನ ಪರಿಶತ್ತ ಸದಸ್ಯ ಪ್ರಕಾಶ ರಾಠೋಡ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯತ್ನಾಳರು ಜಿಲ್ಲೆಯ ಹಿರಿಯ ರಾಜಕಾರಣಿಗಳು, ಅನೇಕ ಜವಾಬ್ದಾರಿ ಸ್ಥಾನಗಳನ್ನು ಅಲಂಕರಿಸಿದವರು, ತಮ್ಮ ಸಾಧನೆ, ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಅವರು ಮತ ಕೇಳಬೇಕು ವಿನಃ ಒಂದು ಸಮುದಾಯದ ಬಗ್ಗೆ ಅವಹೇಳನಕಾರಿ ಮಾತನಾಡುವದು ಸರಿಯಲ್ಲ ಎಂದರು.
ನನಗೆ ಮುಸಲ್ಮಾನರ ವೋಟ ಬೇಕಿಲ್ಲ. ಅದರ ಅವಶ್ಯಕತೆ ನನಗಿಲ್ಲ ಎಂದು ಹೇಳಿಕೆ ನೀಡುತ್ತಾ ಕೋಮು ಸಾಮರಸ್ಯವನ್ನು ಹಾಳು ಮಾಡುವ ಪ್ರವೃತ್ತಿಯನ್ನು ಇಲ್ಲಿಗೆ ಕೈ ಬಿಡಬೇಕು. ಬಿಜಾಪುರ ನಗರ ಸೌಹಾರ್ದತೆಗೆ ಹೆಸರುವಾಸಿ, ನಗರದ ಸೌಹಾರ್ದತೆಯನ್ನು ಕೆಡಿಸುವ ಪ್ರಯತ್ನ ಸರಿಯಲ್ಲ ಎಂದು ಪ್ರಕಾಶ ರಾಠೋಡ ಆರೋಪಿಸಿದರು. ಇವರು ಮಿನಿ ಮೋದಿಯಾಗಲು ಹೊರಟ್ಟಿದ್ದಾರೆ. ಯತ್ನಾಳರು ಮಿನಿ ಮೋದಿಯಾಗಲು ಹೊರಟಿದ್ದಾರೆ. ಬಂಜಾರಾ ಸಮಾಜದ ಸಮಾವೇಶದಲ್ಲಿ ಬಂಜಾರಾ ಸಮಾಜದವರು ಸಂಸದರಾಗಬೇಕು ಎಂಬುದು ನನ್ನ ಭಾವನೆ ಎಂದು ಯತ್ನಾಳ ತಮ್ಮ ವಿಚಾರ ವ್ಯಕ್ತಪಡಿಸಿದರು. ಅವರು ಯಾವ ಪಕ್ಷದಲ್ಲಿದ್ದರು ಎಂಬುದು ನಾನು ವಿಚಾರ ಮಾಡುವುದಿಲ್ಲ ಅವರು ಈ ಮಾತನ್ನು ತಾವಾಗಿಯೇ ಹೇಳಿ ವಚನ ನೀಡಿದರು. ನಂತರ ಏನಾಯ್ತು, ಚುನಾವಣೆಯಲ್ಲಿ ನನ್ನ ಸೋಲಿಗೆ ಅವರೇ ಮುಂದಾಳತ್ವ ವಹಿಸಿದರು, ವಚನ ಭ್ರಷ್ಠರಾದರು. ಆ ಮೂಲಕ ಯತ್ನಾಳ ಸಹ ಮಿನಿ ಮೋದಿಯಾಗಲು ಹೋರಟಿದ್ದಾರೆ ಎಂದು ವ್ಯಂಗ್ಯವಾಡಿದರು. ಅವರು ಬಿಜೆಪಿಯಲ್ಲಿದ್ದುದ್ದು ನಿಜ, ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿದ್ದು ನಿಜ, ಅದನ್ನು ನಾನು ವಿರೋಧಿಸಲು ಹೋಗುವುದಿಲ್ಲ. ಆದರೆ ತಾವಾಗಿಯೇ ಏಕೆ ಮಾತು ಕೊಡಬೇಕು, ಕೊಟ್ಟ ನಂತರ ಅದರಿಂದ ಏಕೆ ತಪ್ಪಬೇಕು ಎಂಬುದು ಮಾತ್ರ ನನ್ನ ಪ್ರಶ್ನೆ ಎಂದು ಪ್ರಕಾಶ ರಾಠೋಡ ಹೇಳಿದರು. ಆ ಸಮುದಾಯದ ಮತ ಬೇಕಿಲ್ಲ, ಈ ಸಮುದಾಯದ ಮತ ಬೇಕಿಲ್ಲ ಎನ್ನುವುದು ಸರಿಯಲ್ಲ. ಈ ಹಿಂದೆ ನಗರ ಶಾಸಕರಾಗಿದ್ದ ಡಾ. ಬಾಗವಾನ ಅವರಿಗೂ ಎಲ್ಲ ಸಮಾಜದ ಮತಗಳು ಬಿದ್ದಿದ್ದವು. ಹೀಗಾಗಿ ಎಲ್ಲ ಸಮಾಜಗಳ ಮತಗಳು ಪ್ರತಿಯೊಬ್ಬರಿಗೂ ಅವಶ್ಯಕ ಎಂದರು.
ಸೋಮನಾಥ ಕಳ್ಳಿಮನಿ, ಅಶೋಕ ರಾಠೋಡ ಮೊದಲಾದವರು ಪ್ರತಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

loading...