ಬಸವಜಯಂತಿ ಪ್ರಯುಕ್ತ ಪ್ರವಚನಕ್ಕೆ ಅನುಭವ ಮಂಟಪ ನಿರ್ಮಾಣ

0
16

 

ಕನ್ನಡಮ್ಮ ಸುದ್ದಿ-ಗಂಗಾವತಿ: ಬಸವರ ಜಯಂತಿ ಆಚರಣೆ ಪ್ರಯುಕ್ತ ಒಂದು ವಾರಗಳ ಕಾಲ ನಡೆಯಲಿರುವ ವಿರ್ಶಧರ್ಮ ಪ್ರವಚನಕ್ಕೆ ಅನುಭವ ಮಂಟಪ ವೇದಿಕೆ ನಿರ್ಮಿಸಿದ್ದು, ಮಾಜಿ ಸಂಸದ ಹೆಚ್.ಜಿ.ರಾಮುಲು ಉದ್ಘಾಟಿಸಿದರು.
ಬಸವ ಜಯಂತಿ ಆಚರಣೆ ಸಮಿತಿ ಹಾಗೂ ಬಸವ ಕೇಂದ್ರ ಸಹಯೋಗದಲ್ಲಿ ಮುಂಡಗೋಡ ತಾಲೂಕಿನ ಬಸವೇಶ್ವರಿ ಮಾತಾಜಿ ಅವರಿಂದ ನಗರದ ಪಬ್ಲಿಕ್ ಕ್ಲಬ್ ಆವರಣದಲ್ಲಿ ವಿಶ್ವ ಧರ್ಮ ಪ್ರವಚನ ಆಯೋಜಿಸಿದ್ದು, ಬುಧವಾರ ಪ್ರವಚನದ ಅನುಭವವನ್ನು ರಾಮುಲು ಉದ್ಘಾಟಿಸಿ ಮಾತನಾಡಿದರು.

ಸಮಾನತೆಯನ್ನು ವಿಶ್ವಕ್ಕೆ ಸಾರಿದ ಮಹಾನ್ ವ್ಯಕ್ತಿ ಬಸವಣ್ಣನವರು. ಅನುಭವ ಮಂಟಪದ ಮೂಲಕ ಅವರು ಜಾತಿ ಹೋಗಲಾಡಿಸಲು ಪ್ರಯತ್ನಿದವರು. ಅವರ ಆದರ್ಶಗಳು ಸದಾ ಪ್ರಸ್ತುತವಾಗಿರುತ್ತವೆ. ಆದರೆ ನಾವು ಅದನ್ನು ಅನುರಿಸುವ ಮನಸ್ಸು ಮಾಡಬೇಕು. ಧಾರ್ಮಿಕ ಕಾರ್ಯಗಳು ನಿರಂತರ ನಡೆಯಬೇಕು. ಮುಂದಿನ ಪಿಳಿಗೆಯ ಮನಸ್ಸಿನಲ್ಲಿ ಪ್ರಿÃತಿ, ಸೌಹಾರ್ದತೆ, ನಂಬಿಕೆ ತರಲು ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ನಿರ್ಮ ಕಾರ್ಯ ಯಶಸ್ವಿಯಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಸಂಚಾಲಕ ಡಾ|| ಶಿವಕುಮಾರ ಮಾಲೀಪಾಟೀಲ್, ಸುರೇಶ ಸಿಂಗನಾಳ, ಬಸವ ಕೇಂದ್ರದ ಅಧ್ಯಕ್ಷ ಕೆ.ಬಸವರಾಜ, ಮಾಜಿ ಶಾಸಕ ಎಚ್.ಎಸ್. ಮುರಳಿಧರ, ಡಾ|| ಶರಣಬಸಪ್ಪ ಕೋಲ್ಕಾರ, ಸಾಹಿತಿ ಜಾಜಿ ದೇವೇಂದ್ರಪ್ಪ, ಕಾರ್ಮಿಕ ಮುಖಂಡ ಜೆ.ಭರಧ್ವಾಜ, ಕರವೇ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ, ವೀರೇಶ ಸುಳೇಕಲ್, ಆನಂದ ಅಕ್ಕಿ, ನಾಗರಾಜ ಅಂಗಡಿ ಮತ್ತಿತರು ಇದ್ದರು.

loading...