ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ದಾಖಲೆಯ ಶೇ 73.33 ಮತದಾನ

0
50

ಕನ್ನಡಮ್ಮ ಸುದ್ದಿ-ಬಸವನಬಾಗೇವಾಡಿ: ಮೇ 12ರಂದು ನಡೆದ ವಿಧಾನಸಭೆ ಸಾರ್ವತ್ರೀಕ ಚುನಾವಣೆಯಲ್ಲಿ ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ಒಟ್ಟು 2,01,089 ಮತದಾರ ಪೈಕಿ 76,354 ಪುರುಷ, 70,292 ಮಹಿಳೆ, ಒಂದು ತೃತೀಯ ಲಿಂಗ ಸೇರಿದಂತೆ ಒಟ್ಟಾರೆ 1,46,647 ಮತದಾರರು ಮತ ಚಲಾಯಿಸುವ ಮುಖಾಂತರ ದಾಖಲೆಯ ಶೇ. 73.33 ಮತದಾನವಾಗಿದೆ.
ಬಸವನಬಾಗೇವಾಡಿ ವಿಧಾನಸಭೆ ಮತಕ್ಷೇತ್ರದಲ್ಲಿ ತಾಲೂಕಿನ ಬಳೂತಿ ಆರ್.ಸಿ ಮತಗಟ್ಟೆ ಸಂಖ್ಯೆ 185ರಲ್ಲಿ 861ಮತದಾರರ ಪೈಕಿ 755ಮತ ಚಲಾಯಿಸಿದ್ದು ಶೇ 87.69ರಷ್ಟು ಮತದಾನವಾದ ಮತಗಟ್ಟೆಯಾದರೇ ಆಲಮಟ್ಟಿ ಡಿಎಸ್ ಮತಗಟ್ಟೆ ಸಂಖ್ಯೆ 229ರ 580ಮತದಾರರಲ್ಲಿ 290ಜನತೆ ಮತ ಚಲಾಯಿಸುವ ಮುಖಾಂತರ ಅತೀ ಕಡಿಮೆ ಮತದಾನವಾದ ಮತಗಟ್ಟೆಯಾಗಿದ್ದು 18ತೃತೀಯ ಲಿಂಗ ಮತದಾರ ಪೈಕಿ ಇಂಗಳೇಶ್ವರದ ಮತಗಟ್ಟೆ ಸಂಖ್ಯೆಯಲ್ಲಿ ಒರ್ವ ತೃತೀಯ ಲಿಂಗ ಮತದಾರ ಮತದಾನ ಮಾಡಿದ ಏಕೈಕ ಮತಗಟ್ಟೆಯಾಗಿದೆ.
ಅತೀ ಹೆಚ್ಚು ಮತದಾನವಾದ ಮತಗಟ್ಟೆಗಳಲ್ಲಿ ಬಳೂತಿ ಆರ್.ಸಿ ಮತಗಟ್ಟೆ ಸಂಖ್ಯೆ 185 ಪ್ರಥಮ ಸ್ಥಾನ ಪಡೆದರೇ ತಡಲಗಿ ಗ್ರಾಮದ 163ನೇ ಮತಗಟ್ಟೆ 736ಮತದಾರ ಪೈಕಿ 645ಮತ ಚಲಾಯಿಸಿ ದ್ವಿತೀಯ, ಬಳೂತಿ ಆರ್.ಸಿ ಗ್ರಾಮದ 184ನೇ ಮತಗಟ್ಟೆಯಲ್ಲಿ 956ಮತದಾರ ಪೈಕಿ 830ಮತ ಚಲಾಯಿಸಿ ತೃತೀಯ ಸ್ಥಾನ ಪಡೆದಿದೆ, ಅತೀ ಕಡಿಮೆ ಮತದಾನ ಮತಗಟ್ಟೆಯಲ್ಲಿ ಆಲಮಟ್ಟಿ ಡಿಎಸ್ ಮತಗಟ್ಟೆ ಸಂಖ್ಯೆ 229ರ 580ಮತದಾರರಲ್ಲಿ 290ಜನತೆ ಮತ ಚಲಾಯಿಸಿ ಶೇ 50ರಷ್ಟು ಮತದಾನವಾಗಿ ಕೊನೆಯ ಸ್ಥಾನ ಪಡೆದರೇ ಉಕ್ಕಲಿ ತಾಂಡಾ(ಬಸವೇಶ್ವರ ನಗರ) ಮತಗಟ್ಟೆ ನಂ 13ರಲ್ಲಿ 820ರ ಪೈಕಿ 418ಮತದಾರರು ಮತ ಚಲಾಯಿಸುವ ಮುಖಾಂತರ ಶೇ 50.98 ಹಾಗೂ ಉಪ್ಪಲದಿನ್ನಿ ತಾಂಡಾದ 131ಮತಗಟ್ಟೆಯಲ್ಲಿ 760ರ ಪೈಕಿ 388ಮತದಾರರು ತಮ್ಮ ಹಕ್ಕನ್ನು ಚಲಾಯಿಸುವ ಮುಖಾಂತರ ಶೇ 51.05ಮತದಾನವಾಗಿ ಅತೀ ಕಡಿಮೆ ಮತದಾನವಾದ ಮತಗಟ್ಟೆಯಾಗಿವೆ.

loading...