ಬಸವೇಶ್ವರ ಭಾವಚಿತ್ರದ ಮೆರವಣಿಗೆಯೊಂದಿಗೆ ಬಸವ ಜಯಂತಿ ಆಚರಣೆ

0
37

ಧಾರವಾಡ : ಜಿಲ್ಲಾಡಳಿತ ವತಿಯಿಂದ ಏರ್ಪಡಿಸಿದ ಜಗಜ್ಯೋತಿ ಬಸವೇಶ್ವರ ಜಯಂತಿ ನಿಮಿತ್ಯ ಶಹರದ ಕಲಾಭವನದ ಆವರಣಲ್ಲಿಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹಾಗೂ ಜಿಲ್ಲಾಧಿಕಾರಿ ಪಿ.ರಾಜೇಂದ್ರ ಚೋಳನ್ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ಶ್ರೀ ಉಳವಿ ಚನ್ನಬಸವೇಶ್ವರಕ್ಕೆ ತೆರಳಿ ಅಲ್ಲಿಂದ ಬಸವೇಶ್ವರ ಭಾವಚಿತ್ರದೊಂದಿಗೆ ಬೃಹತ್ ಮೆರವಣಿಗೆಗೆ ಚಾಲನೆ ನೀಡಿದರು. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆಯಲ್ಲಿ ಕಲಾತಂಡಗಳ, ಸ್ಥಬ್ದಚಿತ್ರಗಳ, ಬಸವಾದಿ ಶರಣರ ವೇಷಭೂಷಣಗಳು ಕಂಡು ಬಂದವು. ಮಹಾಪೌರ ಮಂಜುಳಾ ಅಕ್ಕೂರ, ಬಾಲವಿಕಾಸ ಅಕಾಡೆಮಿ ಅಧ್ಯಕ್ಷೆ ದ್ರಾಕ್ಷಾಯಿಣಿ ಬಸವರಾಜ, ಅಕ್ಕನ ಬಳಗದ ಅಧ್ಯಕ್ಷೆ ಭಾರತದೇವಿ ರಾಜಗುರು ಹಾಗೂ ಶ್ರೀ ಉಳವಿ ಚನ್ನಬಸವೇಶ್ವರ ಧರ್ಮ ಫಂಟ ಸಂಸ್ಥೆ, ಬಸವಕೇಂದ್ರ, ಅಕ್ಕನ ಬಳಗ ಸೇರಿಂದಂತೆ ವಿವಿಧ ಬಸವ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here