ಬಸ್ ಪ್ರಯಾಣಿಕರ ಮೇಲೆ ಗುಂಡಿನ ದಾಳಿ: 14 ಜನರ ಸಾವು

0
13

ಇಸ್ಲಾಮಾಬಾದ್:- ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಬಸ್ ಪ್ರಯಾಣಿಕರ ಮೇಲೆ ಅಪರಿಚಿತ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 14 ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಎಂದು ಮಾಧ್ಯಮಗಳು ವರದಿ ಮಾಡಿವೆ.

ಸಮವಸ್ತ್ರ ಧರಿಸಿದ್ದ ಸುಮಾರು 15-20 ಅಪರಿಚಿತ ಶಸ್ತ್ರಸಜ್ಜಿತ ಆಕ್ರಮಣಕಾರರು ಕರಾಚಿ ಮತ್ತು ಗ್ವಾಡಾರ್ ನಡುವೆ ಪ್ರಯಾಣಿಸುವ ಐದು ಅಥವಾ ಆರು ಬಸ್ಸುಗಳನ್ನು ನಿಲ್ಲಿಸಿ ಈ ಕೃತ್ಯ ಎಸಗಿದ್ದಾರೆ ಎಂದು ಬಲೂಚಿಸ್ತಾನ್ ಪೊಲೀಸ್‌ ಅಧಿಕಾರಿ ಮೊಹ್ಸಿನ್ ಹಾಸನ್ ಬಟ್ ತಿಳಿಸಿದ್ದಾರೆ ಎಂದು ಪ್ರಮುಖ ದಿನಪತ್ರಿಕೆ ಡಾನ್ ವರದಿ ಮಾಡಿದೆ.
ಈ ಗುಂಪು, ಮಕರಾನ್ ಕರಾವಳಿ ಹೆದ್ದಾರಿಯಲ್ಲಿ 14 ಜನ ಪ್ರಯಾಣಿಕರನ್ನು ಬಸ್ಸಿನಿಂದ ಕೆಳಗೆ ಇಳಿಸಿ ನಂತರ ಅವರು ಗುರುತು ಪತ್ತೆ ಮಾಡಿ ಗುಂಡು ಹಾರಿಸಿ ಮಾರಣ ಹೋಮ ನಡೆಸಿದೆ.
ಕೊಲೆಗಳ ಹಿಂದಿನ ಕಾರಣ ಏನೆಂಬುದು ಇನ್ನೂ ಗೊತ್ತಾಗಿಲ್ಲ ಮತ್ತು ಮೃತಪಟ್ಟವರ ಗುರುತು ಸಹ ಪತ್ತೆಹಚ್ಚಲಾಗಿಲ್ಲ. ಈ ಘಟನೆ ಬಗ್ಗೆ ತನಿಖೆ ಪ್ರಾರಂಭಿಸಲಾಗಿದೆ ಎಂದು ಮಾಧ್ಯಮ ವರದಿ ಮಾಡಿದೆ

loading...