ಬಸ್ ಸೌಲಭ್ಯ ಕಲ್ಪಿಸುವಂತೆ ಪ್ರತಿಭಟನೆ, ಸ್ಪಂಧಿಸಿದ ಅಧಿಕಾರಿ

0
14

ಬಸ್ ಸೌಲಭ್ಯ ಕಲ್ಪಿಸುವಂತೆ ಪ್ರತಿಭಟನೆ, ಸ್ಪಂಧಿಸಿದ ಅಧಿಕಾರಿ
ರಾಮದುರ್ಗ: ಕಟಕೋಳ ಆದರ್ಶ ವಿದ್ಯಾಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಹಾಗೂ ಪಾಲಕರು ಪ್ರತಿಭಟನೆ ನಡೆಸುವ ಮುನ್ನವೇ ಸಾರಿಗೆ ಇಲಾಖೆ ಅಧಿಕಾರಿಗಳು ಸೌಲಭ್ಯ ಕಲ್ಪಿಸಿದ್ದಾರೆ.
ಪಟ್ಟಣದಲ್ಲಿದ್ದ ಆದರ್ಶ ವಿದ್ಯಾಲಯವನ್ನು ಕಟಕೋಳಕ್ಕೆ ಸ್ಥಳಾಂತರಿಸಿದ್ದರಿಂದ ರಾಮದುರ್ಗ ಪಟ್ಟಣ, ಸುರೇಬಾನ, ಸಂಗಳ, ಕಲಹಾಳ, ಮುದೇನೂರ, ಬಟಕುರ್ಕಿ, ಮುದಕವಿ ಸೇರಿದಂತೆ ಇತರ ಭಾಗಗಳ ಸುಮಾರು ೧೮೦ ವಿದ್ಯಾರ್ಥಿಗಳು ಸಾರಿಗೆ ಸೌಲಭ್ಯ ಇಲ್ಲದೆ ತೊಂದರೆ ಅನುಭವಿಸುವಂತಾಗಿತ್ತು. ವಿದ್ಯಾರ್ಥಿಗಳಿಗೆ ಕಟಕೋಳಕ್ಕೆ ಹೋಗಲು ಸರಿಯಾಗಿ ಬಸ್ಸಿನ ವ್ಯವಸ್ಥೆ ಇಲ್ಲ. ಬೆಳಿಗ್ಗೆ ೮.೩೦ ಹಾಗೂ ೯ ಗಂಟೆ ಸಮಯಕ್ಕೆ ಹಾಗೂ ಮರಳಿ ಶಾಲೆ ಬಿಡುವ ಸಮಯ ೫ ಹಾಗೂ ೫.೩೦ಕ್ಕೆ ಬಸ್ಸಿನ ವ್ಯವಸ್ಥೆ ಮಾಡಬೇಕು. ಒಂದು ವೇಳೆ ಜು.೧೩ರೊಳಗಾಗಿ ಈ ವ್ಯವಸ್ಥೆ ಕಲ್ಪಿಸದೆ ಹೋದಲ್ಲಿ ಅಲ್ಲಿನ ಶಾಲೆಯ ಮಕ್ಕಳ ಜೊತೆಗೆ ಪಾಲಕರು ಸೇರಿಕೊಂಡು ರಾಮದುರ್ಗ ಸಾರಿಗೆ ಘಟಕದ ಮುಖ್ಯ ಗೇಟ್ ಬಂದ್ ಮಾಡಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಚ್ಚರಿಕೆ ನೀಡಿದ್ದರು.

loading...