ಕನ್ನಡಮ್ಮ ಸುದ್ದಿ-ಸವದತ್ತಿ : 30 ಶಂಕು ಸ್ಥಾಪನೆ ನೇರವೇರಿಸಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರಡ್ಡಿ ಯರಗಟ್ಟಿಯಲ್ಲಿ ಸಾರಿಗೆ ಘಟಕ ಮಾಡಲು ಶಾಸಕರು ಬೇಡಿಕೆ ಇಟ್ಟಿದ್ದಾರೆ ಆದರೆ ಘಟಕ ಮಾಡಲು 60 ಶೇಡ್ಯುಲಗಳು ಆಗಬೇಕು ಅದೇ ರೀತಿಯಾಗಿ ಶಾಸಕರು ಹೇಳಿದ ಪ್ರಕಾರ ಹಿರೇಕುಂಬಿ ಗ್ರಾಮದಲ್ಲಿ ಬಸ್ಸಸ್ಯಾಂಡ ಆವರಣದಲ್ಲಿ ಸಂಗೋಳ್ಳಿ ರಾಯಣ್ಣ ಮೂರ್ತಿ ಇರುವುದರಿಂದ ಅದಕ್ಕೆ ಯಾವುದೇ ರೀತಿಯ ದಕ್ಕೆ ಹಾನಿ ಆಗದಂತೆ ನೋಡಿಕೊಂಡು ಬಸ್ಸ ನಿಲ್ದಾಣ ಮಾಡುವಂತೆ ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡುವೆ ಶಾಸಕರು ಬಸ್ಸ ನಿಲ್ದಾಣ ಆವರಣದಲ್ಲಿ ತಮ್ಮ ಅನುದಾನದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿಸುವುದಾಗಿ ಮತ್ತು ಹಿರೇಕುಂಬಿ ಗ್ರಾಮದ ಬಸ್ಸ ನಿಲ್ದಾಣದ ಹಿಂದುಗಡೆ ಸ್ಥಳಾವಕಾಶ ಮಾಡಿಕೊಡುವುದಾಗಿ ಹೇಳಿದ ಶಾಸಕರಿಗೆ ಅಭಿನಂದಿಸುವೆ ಎಂದು ಹೇಳಿದರು.
 ಸರಕಾರಕ್ಕೆ ನಮ್ಮ ಸವದತ್ತಿ ಘಟಕದ ದುರಸ್ಥಿಗಾಗಿ ನಾನು ಶಾಸಕನಾಗಿ ಆಯ್ಕೆಯಾದ ಮೊದಲ ಬಾರಿಯಿಂದಲೂ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದೇವು ಅದರ ಪ್ರಕಾರ ಸರಕಾರ ನಮ್ಮ ಮನವಿಗೆ ಸ್ಪಂಧಿಸಿ  ಈಗ ಸಾರಿಗೆ ಘಟಕವನ್ನು 4 ಕೋಟಿ 38 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿ ಈಗಾಗಲೇ ಗುತ್ತಿಗೆದಾರರನ್ನು ಸಹ ನಿಗದಿಪಡಿಸಿ  ವಿವಿಧ ಕಾಮಗಾರಿಗಳನ್ನು ಮಾಡುತ್ತಿದೆ ಸರಕಾರಕ್ಕೆ ನಾನು ಅಭಿನಂದಿಸುವೆ ಎಂದು ಶಾಸಕ ಆನಂದ ಮಾಮನಿ ಅದ್ಯಕ್ಷತೆವಹಿಸಿ ಮಾತನಾಡಿದರು.  ಮಾತನಾಡಿ ಅವರು ನಂಜುಂಡಪ್ಪ ವರದಿ ಪ್ರಕಾರ ಈ ತಾಲೂಕು ಹಿಂದುಳಿದ ತಾಲೂಕು ಆಗಿರುವುದರಿಂದ ಸರಕಾರ ಬಹಳಷ್ಟು ಆಸಕ್ತಿವಹಿಸಿ ಈ  ಘಟಕವನ್ನು ಅಭಿವೃದ್ದಿಪಡಿಸುವುದು ಬಹಳ ಮುಖ್ಯವಾಗಿತ್ತು ಬಸ್ಸಸ್ಯಾಂಡ ಆವರಣದಲ್ಲಿ ತಗ್ಗು ಪ್ರದೇಶ ಇರುವುದರಿಂದ ನೀರು ನಿಲ್ಲುತ್ತಿತು ಮತ್ತು ಇತರೆ ಸೌಕರ್ಯಗಳಾದ ಕುಡಿಯುವ ನೀರು, ಬಸ್ಸುಗಳ ವ್ಯವಸ್ಥೆ ಅತಿ ಅವಶ್ಯವಾಗಿತ್ತು ಏಕೆಂದರ ಯಲ್ಲಮ್ಮ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದು ಇಲ್ಲಿ ಎಲ್ಲ ರೀತಿಯ ಸೌಲಭ್ಯಗಳು ಬೇಕಾಗಿರುತ್ತವೆ ಎಂದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಸಂದಾನದ ಢಂಗನವರ ಪ್ರಸ್ತಾವಿಕವಾಗಿ ಮಾತನಾಡಿದರು ಮುಖ್ಯ ಅತಿಥಿಗಳು ಜಿ.ಪಂ ಸದಸ್ಯರಾದ ಎಂ.ಎಸ್.ಹಿರೇಕುಂಬಿ, ಫಕ್ಕೀರಪ್ಪ ಹದ್ದನವರ, ಶಿವಗಂಗಾ ಗೋರವನಕೊಳ್ಳ, ತಾ.ಪಂ ಸದಸ್ಯ ವೀರಭದ್ರಪ್ಪ ಪಟ್ಟಣಶೆಟ್ಟಿ, ಧಾರವಾಡ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ನಾಗರಾಜ , ಬಿ.ಡಿ.ಜಾಧವ, ರಾಧಾಕೃಷ್ಣ , ಸವದತ್ತಿ ಘಟಕ ವ್ಯವಸ್ಥಾಪಕರಾದ ಅಲ್ತಾಫ ಭಾಷಾ, ಎಸ್.ಎ.ಹೊಸಕೋಟಿ, ಮತ್ತಿತ್ತರ ಅಧಿಕಾರಿಗಳು ಉಪಸ್ಥಿತರಿಂದ್ದರು.
loading...