ಬಿಜೆಪಿಗೆ ಐತಿಹಾಸಿಕ ಗೆಲುವು: ಮೋದಿ ಕಾರ್ಯಗಳಿಗೆ ಮನ್ನಣೆ

0
0

ಗದಗ: ಇತ್ತಿÃಚೆಗೆ ಜರುಗಿದ ಲೋಕಸಭಾ ಹಾಗೂ ಉಪಚುನಾವಣೆಗಳ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರಿÃ ನರೇಂದ್ರ ಮೋದಿ ಯವರಿಗೆ ಏಕ ವಚನದಲ್ಲಿ ಮಾತನಾಡುವದರ ಜೊತೆಗೆ ಚೌಕಿದಾರ ಚೋರ ಹೈ, ಸರ್ವಾಧಿಕಾರಿ ಹಾಗೂ ಮಹಾ ಸುಳ್ಳುಗಾರ ಎಂಬ ಹಲವಾರು ಟೀಕೆಗಳಿಗೆ ದೇಶದ ೧೩೫ ಕೋಟಿ ಜನತೆ ಬಿಜೆಪಿ ಗೆ ಮತಹಾಕಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವಂತೆ ಮಾಡಿ ಸಮರ್ಪಕ ಉತ್ತರ ನೀಡಿದ್ದಾರೆಂದು ವಿಧಾನ ಪರಿಷತ್ ಸದಸ್ಯ ಎಸ್.ವ್ಹಿ. ಸಂಕನೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ನರೇಂದ್ರ ಮೋದಿಯವರ ಅಭಿವೃದ್ಧಿ ಯೋಜನೆಗಳಿಗೆ, ದೇಶದ ಆರ್ಥಿಕ ವ್ಯವಸ್ಥೆ ಸಉಧಾರಣೆ ಹಾಘೂ ಬಹುಮುಖವಯವಾಗಿ ದೇಶದ ರಕ್ಷಣೆ ಬಗ್ಗೆ ತೆಗೆದುಕೊಂಡ ದಿಟ್ಟ ನಿರ್ಧಾರಗಳಿಗೆ ಜನತೆ ಅಪಾರ ಬೆಂಬಲ ವ್ಯಕ್ತಪಡಿಸಿ ದೇಶದ ಇತಿಹಾಸದಲ್ಲಿ ಬಿಜೆಪಿ ಪಕ್ಷವು ಕೇಂದ್ರದಲ್ಲಿ ಸ್ವತಂತ್ರವಾಗಿ ಅಧಿಕಾರ ನಡೆಸುವಂತೆ ಮಾಡಿದ್ದು ಇದೊಂದು ಐತಿಹಾಸಿಕ ದಾಖಲೆ ಎಂದು ಎಸ್.ವ್ಹಿ. ಸಂಕನೂರ ಹೇಳಿದ್ದಾರೆ.

ಹಾವೇರಿ, ಗದಗ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಶಿವಕುಮಾರ ಉದಾಶಿಯವರು ಮತದಾರರೊಂದಿಗೆ ಹೊಂದಿದ ನಿರಂತರ ಜನಸಂಪರ್ಕ ಮತ್ತು ಕ್ಷೆÃತ್ರದ ಅಭಿವೃದ್ಧಿಯನ್ನು ಮೆಚ್ಚಿಕೊಂಡು, ಇದಲ್ಲದೇ ಮೋದಿಯವರ ಪ್ರಭಾವದಿಂದ ಹ್ಯಾಟ್ರಿಕ್ ಸಾಧನೆ ಮಾಡಲು ಸಾಧ್ಯವಾಗಿದೆ. ಈ ಫಲಿತಾಂಶದ ಹಿನ್ನಲೆಯಲ್ಲಿ ರಾಜ್ಯದ ಜನತೆಯ ವಿಶ್ವಾಸವನ್ನು ಕಳೆದುಕೊಂಡ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಶ್ರಿÃ ಹೆಚ್.ಡಿ.ಕುಮಾರಸ್ವಾಮಿಯವರು ಕೂಡಲೇ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕೆಂದು ವಿ.ಪ. ಸದಸ್ಯ ಎಸ್.ವ್ಹಿ. ಸಂಕನೂರ ಅವರು ಆಗ್ರಹಿಸಿದ್ದಾರೆ.

loading...