ಬಿಜೆಪಿಯಲ್ಲಿ ಯಡಿಯೂರಪ್ಪರನ್ನು ಕೆಳಗಿಸಲು ಪ್ಲಾö್ಯನ: ಶಾಸಕ ಯತ್ನಾಳ ಬಾಂಬ್

0
5

ಕನ್ನಡಮ್ಮ ಸುದ್ದಿ
ಅಥಣಿ ೦೩: ಯಡಿಯೂರಪ್ಪನವರ ವಿರುದ್ಧ ನಿರಂತವಾಗಿ ಒಂದು ಗುಂಪು ವ್ಯವಸ್ಥಿತವಾಗಿ ನಡದೇ ಇದೆ. ಫಲಿತಾಂಶದ ಬಳಿಕವೂ ಅವರ ತಂತ್ರ ನಡೆಯಬಹುದು. ಆದ್ರೆ ನಾವು ಯಾರೂ ಅದಕ್ಕೆ ಅವಕಾಶ ಕೊಡುವುದಿಲ್ಲ. ಮುಂದೆ ಮೂರುವರೆ ವರ್ಷದ ಅವಧಿಗೆ ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವ ಮೂರ್ಖತನ ಯಾರೂ ಮಾಡೋದಿಲ್ಲ ಎಂದು ಹೇಳುವ ಮೂಲಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್ ಸಿಡಿಸಿದ್ದಾರೆ.
ಉಪಚುನಾವಣೆ ಪ್ರಚಾರ ನಡೆಸುತ್ತಿರುವ ಬಿಜೆಪಿ ಶಾಸಕ ಬಸನಗೌಡ ಯತ್ನಾಳ ಅವರು ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿ ಅವರು, ಬಿಎಸ್‌ವೈರನ್ನು ಇಳಿಸುವ ಮೂರ್ಖತನ ಯಾರಾದ್ರೂ ಮಾಡಿದ್ರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನೆ ಅವರುಗಳ ಕ್ಷೇತ್ರಕ್ಕೆ ಹೋಗಿ ಅವರನ್ನೆಲ್ಲ ಸೊಲಿಸಿ ಬರ್ತಿನಿ ಅಂತಾ ಗುಡುಗಿದ್ದಾರೆ ಬಿಜೆಪಿ ಒಳ ಸಂಚು ರೂಪಿಸುತ್ತಿರುವ ಗುಂಪಿನ ವಿರುದ್ದ ಹರಿಹಾಯ್ದರು.
ಕಾಂಗ್ರೆಸ್ ಪಕ್ಷದಲ್ಲಿಯೂ ಕೂಡ ಸಿದ್ದರಾಮಯ್ಯರನ್ನು ರಾಜಕೀಯವಾಗಿ ಮುಗಿಸುವ ಕುತಂತ್ರ ನಡೆದಿದೆ ಅಂತಾ ಹೇಳಿರುವ ಯತ್ನಾಳ, ಡಿ.ಕೆ. ಶಿವಕುಮಾರ ಮತ್ತು ಕುಮಾರಸ್ವಾಮಿ ಸಿಂಗಲ್ ಅಜೆಂಡಾವೇ ಸಿದ್ದರಾಮಯ್ಯರನ್ನು ರಾಜಕೀಯವಾಗಿ ಮುಗಿಸೋದು ಆಗಿದೆ. ಅದಕ್ಕಾಗಿಯೇ ನಿನ್ನೆ ಅವರಿಬ್ಬರು ಸಭೆಯನ್ನು ಕೂಡ ಮಾಡಿದ್ದಾರೆ ಎಂದು ಯತ್ನಾಳ ಹೇಳಿದರು. ಇನ್ನು ಹೆಬ್ಬಾಳಕರ ವಿರುದ್ಧ ತಿರಗೇಟು ನೀಡಿದ್ದಕ್ಕೆ ಖುದ್ದು ಕಾಂಗ್ರೆಸ್ನಲ್ಲಿರೋ ಶಾಸಕರೇ ನಮಗೆ ಅಭಿನಂದನೆ ಸಲ್ಲಿಸಿದ್ದಾರೆ. ಯಾರೆ ರಾಜಕಾರಣಿಗಳು ಇನ್ನೊಬ್ಬ ರಾಜಕಾರಣಿ ಬಗ್ಗೆ ಹಗುರವಾಗಿ ಮಾತಾಡಬಾರದು. ಅದರಲ್ಲೂ ಅಥಣಿ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಅವರು ಸಜ್ಜನ ರಾಜಕಾರಣಿ ಅವರ ವಿರುದ್ದ ಹೆಬ್ಬಾಳಕರ ಮಾತು ಸರಿ ಅಲ್ಲ, ಅವರು ಬಸನಗೌಡ ಯತ್ನಾಳ ಅವರ ವಿರುದ್ಧ ಮಾತನಾಡಿದ್ರೆ ಅದಕ್ಕೆ ತಕ್ಕ ಉತ್ತರ ಕೊಡುತ್ತಿದ್ದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಪ್ರಚಾರ ನಡೆಸುತ್ತಿರುವ ಶಾಸಕಿ ಲಕ್ಷಿö್ಮÃ ಹೆಬ್ಬಾಳಕರ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಅವರನ್ನು ಈ ಬಾರಿ ಭಾರಿ ಮತಗಳ ಅಂತರದಿAದ ಗೆಲ್ಲಿಸಿ, ಮತ್ತೊಮ್ಮೆ ಈ ಬಾಗದ ಜನರು ಸ್ವಾಬಿಮಾನಿಗಳು, ಅನ್ನುವದನ್ನು ಸಾಬಿತು ಮಾಡಬೇಕಿದೆ ಎಂದು ಪ್ರಚಾರ ಸಭೆಯಲ್ಲಿ ಅಭ್ಯರ್ಥಿ ಮಹೇಶ ಕುಮಟಳ್ಳಿ ಪರ ಭಾರತೀಯ ಜನತಾ ಪಕ್ಷಕ್ಕೆ ತಮ್ಮ ಅಮೂಲ್ಯ ಮತವನ್ನು ನೀಡಬೇಕು ಎಂದು ಮತಯಾಚನೆ ಮಾಡಿದರು.
ಈ ವೇಳ ಮುಖಂಡರಾದ ಡಿ ಸಿ ನಾಯಕ, ಶ್ರೀಶೈಲ ನಾಯಿಕ, ದತ್ತಾ ವಾಸ್ಟರ್, ದೀಲೀಪ ಲೋನಾರೆ, ರಾಜೂ ಚೌಗಲಾ, ರಾಜೂ ಗುಡೊಡಗಿ, ಸೇರಿ ಹಲವು ನಾಯಕರು ಉಪಸ್ಥಿತರಿದ್ದರು
..

loading...