ಬಿಜೆಪಿ ಅಲ್ಪಸಂಖ್ಯಾತ ಮುಖಂಡರ ಪಾದಯಾತ್ರೆ

0
5
ವಿಜಯಪುರ : ವಿಜಯಪುರ ಹೊರವಲಯದ ಗಾಂಧಿನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮುಖಂಡ ಯಾಸೀನ್ ಜವಳಿ ಮೊದಲಾದವರು ಪಾದಯಾತ್ರೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯಾಸೀನ್ ಜವಳಿ, ಈ ಬಾರಿ ರಮೇಶ ಜಿಗಜಿಣಗಿ ಅವರ ಗೆಲುವು ಶತಸಿದ್ಧ. ಸರಳ, ಸಜ್ಜನಿಕೆಯ ರಾಜಕಾರಣಿಯಾಗಿರುವ ರಮೇಶ ಜಿಗಜಿಣಗಿ ಅವರು ಎಲ್ಲ ಸಮಾಜದವರೊಡನೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಎನ್‌ಟಿಪಿಸಿ ಸ್ಥಾಪನೆ, ರಾಷ್ಟಿçÃಯ ಹೆದ್ದಾರಿಗಳ ಮೇಲ್ದರ್ಜೇಗೇರಿಸಿರುವುದು, ವಿಜಯಪುರದಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರ ಸ್ಥಾಪನೆ ಹೀಗೆ ಅವರ ಸಾಧನೆಯ ಪಟ್ಟಿ ದೊಡ್ಡದಾಗುತ್ತಾ ಹೋಗುತ್ತದೆ. ಜನತೆ ರಮೇಶ ಜಿಗಜಿಣಗಿ ಅವರಿಗೆ ಇನ್ನೊಮ್ಮೆ ಆಶೀರ್ವದಿಸಿ ಸೇವೆ ಮಾಡುವ ಅವಕಾಶ ಕರುಣಿಸಬೇಕು ಎಂದು ಕೋರಿದರು.

ರೂಹ್ ಮುಲ್ಲಾ, ಅಸ್ಲಂ ಸೈಯ್ಯದ್ ಅಮೀನ್, ಟಿಪ್ಪು ರೋಜೆವಾಲೆ, ಭಾಷಾ ಅತ್ತಾರ, ಇಸ್ಮಾಯಿಲ್ ಶೇಖ, ಯಾಸೀನ ರುದ್ರವಾಡಿ ಮೊದಲಾದವರು ಪಾಲ್ಗೊಂಡಿದ್ದರು.

loading...