ಬಿಜೆಪಿ ಅವಿರೋಧ ಆಯ್ಕೆ

0
51

ಅಂಕೋಲಾ : ‘ಎ.ಪಿ.ಎಂ.ಸಿ.ಚುನಾವಣೆಗೆ ತಾಲ್ಲೂಕಿನಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಕಣದಲ್ಲಿದ್ದು, ಬೆಳಸೆ ಕ್ಷೇತ್ರದಿಂದ ನಮ್ಮ ಬೆಂಬಲಿತ ಅಭ್ಯರ್ಥಿ ಸೀತೆ ಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನು ಮೂರು ಕ್ಷೇತ್ರದಲ್ಲಿಯೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ವಿಜಯ ಪತಾಕೆ ಹಾರಿಸಲಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಹಿಂದುಳಿದ ಮೋರ್ಚಾ ಅಧ್ಯಕ್ಷ ಜಗದೀಶ ನಾಯಕ ಮೊಗಟಾ ಹೇಳಿದರು.

ಪಟ್ಟಣದ ಖಾಸಗಿ ಹೊಟೇಲೊಂದರಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿ ಈ ಕುರಿತು ಅವರು ಮಾತನಾಡಿದರು. ‘ನಮ್ಮದೇ ಪಕ್ಷದ ಇಬ್ಬರು ಅಭ್ಯರ್ಥಿಗಳು ಬೆಳಸೆ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದರು. ಮತ್ತೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ಇನ್ನೋರ್ವ ಅಭ್ಯರ್ಥಿ ಪಾರ್ವತಿ ಗೌಡ ಅವರು ಸ್ವಖುಷಿಯಿಂದ ನಾಮಪತ್ರ ಹಿಂಪಡೆದ ಕಾರಣ ಅವಿರೋಧ ಆಯ್ಕೆ ನಡೆದಿದೆ’ ಎಂದರು.

ಅವಿರೋಧವಾಗಿ ಆಯ್ಕೆಯಾದ ಅಭ್ಯರ್ಥಿ ಸೀತೆ ಗೌಡ ಮಾತನಾಡಿ, ‘ಪಕ್ಷದ ಮುಖಂಡರ ಪರಿಶ್ರಮದಿಂದಾಗಿ ನನಗೆ ಈ ಗೆಲುವು ಲಭಿಸಿದೆ’ ಎಂದರು. ಈ ಸಂದರ್ಭದಲ್ಲಿ ಭಾಸ್ಕರ ನಾರ್ವೇಕರ, ಸಂಜಯ ನಾಯ್ಕ, ಗಣಪತಿ ನಾಯ್ಕ, ನಾಗೇಶ ಗೌಡ, ವೆಂಕಟೇಶ ಗೌಡ, ಮಾರುತಿ ಗೌಡ, ಗಣಪತಿ ಬೈಲಕೇರಿ, ದೇವು ಹೊನ್ನಳ್ಳಿ, ಮೋಹನ ನಾಯ್ಕ, ಲಕ್ಷ್ಮಣ ಗೌಡ, ಶಂಕರ ಗೌಡ, ಪರಮೇಶ್ವರ ಗೌಡ ಇತರರಿದ್ದರು.

ಇನ್ನುಳಿದ ಕ್ಷೇತ್ರಗಳಾದ ಅಗಸೂರು ಕ್ಷೇತ್ರದಿಂದ ಸುಬ್ರಾಯ ವಸಂತ ಸಿದ್ದಿ, ಪುಟ್ಟಾ ಸಿದ್ದಿ, ಅವರ್ಸಾ ಕ್ಷೇತ್ರ ದಿಂದ ಮಹೇಶ ಬಿ. ನಾಯ್ಕ ಹಾಗೂ ಪಾಂಡುರಂಗ ನಾಯಕ, ಅಂಕೋಲಾ ನಗರ ಕ್ಷೇತ್ರದಿಂದ ಗಣಪತಿ ನಾಯಕ ಶೀಳ್ಯ, ಚಂದ್ರಕಾಂತ ಗಣಪು ನಾಯ್ಕ ಸ್ಪರ್ಧೆಯಲ್ಲಿದ್ದಾರೆ.

loading...

LEAVE A REPLY

Please enter your comment!
Please enter your name here