ಬಿಜೆಪಿ ನಾಯಕಿ ಪ್ರಿಯಾಂಕಾ ಶರ್ಮಾ ಬಿಡುಗಡೆ: ವಿಳಂಬಕ್ಕೆ ಕೋರ್ಟ್ ತರಾಟೆ

0
10

ನವದೆಹಲಿ:-ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರೂಪದ ಚಿತ್ರ ಪೋಸ್ಟ್‌ ಮಾಡಿದ ಆರೋಪದ ಮೇರೆಗೆ ಬಂಧನಕ್ಕೆ ಒಳಗಾಗಿದ್ದ ಬಿಜೆಪಿ ನಾಯಕಿ ಪ್ರಿಯಾಂಕಾ ಶರ್ಮಾ ಅವರನ್ನು ಪಶ್ಚಿಮ ಬಂಗಾಳ ಸರಕಾರವು ಬುಧವಾರ ಬಿಡುಗಡೆ ಮಾಡಿದೆ.
ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಸುಪ್ರಿಂಕೋರ್ಟ್ ಆದೇಶ ಮಾಡಿತ್ತು. ಆದರೆ ವಿಳಂಬ ಮಾಡಿದ ರಾಜ್ಯ ಸರ್ಕಾರದ ನಡೆಗೂ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು
ಶರ್ಮಾ ಅವರ ಪರ ವಕೀಲ ನೀರಜ್ ಕಿಶನ್ ಕೌಲ್ ಅವರು ಕೋರ್ಟ್ ಆದೇಶದಂತೆ ತಮ್ಮ ಕಕ್ಷಿದಾರರನ್ನು ಮಂಗಳವಾರ ಬಿಡುಗಡೆ ಮಾಡದೆ ವಿಳಂಬ ಮಾಡಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.ತಕ್ಷಣವೇ ಬಿಜೆಪಿ ಯುವ ನಾಯಕಿಯನ್ನು ಬಿಡುಗಡೆ ಮಾಡಿ ಎಂದು ನ್ಯಾಯಾಲಯ ಆದೇಶ ನೀಡಿತು. ಬಳಕ ಸರ್ಕಾರ ಇಂದು ಬೆಳಿಗ್ಗೆ ಅವರನ್ನು ಬಿಡುಗಡೆ ಮಾಡಿದೆ.
ಇದು ನ್ಯಾಯಾಲಯದ ಆದೇಶಕ್ಕೆ ಮಾಡಿದ ಅಗೌರವ, ಆದೇಶ ನೀಡಿದ 22 ಗಂಟೆಗಳ ನಂತರವೂ ಏಕೆ ಪಾಲನೆ ಮಾಡಿಲ್ಲ ಎಂದು ಶರ್ಮಾ ಪರ ವಕೀಲ ನ್ಯಾಯಪೀಠದ ಗಮನಕ್ಕೆ ತಂದರು.
ಇದು ಸರಿಯಲ್ಲ, ನಮ್ಮ ಆದೇಶದ ನಂತರವೂ ಜೈಲಿನಲ್ಲಿ ಅಕ್ರಮವಾಗಿ ಇಟ್ಟಿದ್ದು ತಪ್ಪು ಎಂದು ಹೇಳಿದ ನ್ಯಾಯಮೂರ್ತಿ ಬ್ಯಾನರ್ಜಿ, ರಾಜ್ಯ ಸರ್ಕಾರದ ನಡೆಯ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದರು.
ಶರ್ಮಾ ತನ್ನ ಬಿಡುಗಡೆಯ ನಂತರ ಕ್ಷಮೆ ಕೋರಬೇಕು ಎಂದು ಉನ್ನತ ನ್ಯಾಯಾಲಯದ ಆದೇಶವು ಹೇಳಿತ್ತುನ್ಯಾಯಮೂರ್ತಿ ಬ್ಯಾನರ್ಜಿ ನೇತೃತ್ವದ ಪೀಠ ಶರ್ಮಾ ಬಿಡುಗಡೆಯ ನಂತರ ಲಿಖಿತ ರೂಪದಲ್ಲಿ ಕ್ಷಮೆಯಾಚಿಸಬೇಕು ಎಂದು ಕಟ್ಟಪ್ಪಣೆ ಮಾಡಿತ್ತು.

loading...