ಬಿಜೆಪಿ ಪದಾಧಿಕಾರಿ ಪಟ್ಟಿಯಲ್ಲಿ ಉತ್ತರ ಕರ್ನಾಟಕ ಲಿಂಗಾಯತ ಸಮುದಾಯ ಕಡೆಗಣನೆ

0
121

ಬೆಳಗಾವಿ
ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾಗಿ ಒಂದು ವರ್ಷದ ಸಂಭ್ರಮಾಚರಣೆಯ ಬಳಿಕ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ 20 ನಿಗಮ ಮಂಡಳಿ ಅಧ್ಯಕ್ಷರ ನೇಮಕ ಮಾಡಿದ ಮೇಲೆ ಬಹು ನಿರೀಕ್ಷಿತ ರಾಜ್ಯ ಬಿಜೆಪಿ ಪದಾಧಿಕಾರಿಗಳ ಪಟ್ಟಿಯಲ್ಲಿ ಉತ್ತರ ಕರ್ನಾಟಕ ನಿರ್ಲಕ್ಷö್ಯ ಮಾಡಿ ದಕ್ಷಿಣ ಕರ್ನಾಟಕ್ಕೆ ಮಣೆ ಹಾಕಿರುವುದು ಉತ್ತರ ಕರ್ನಾಟಕ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
2018ರ ರಾಜ್ಯದಲ್ಲಿ ವಿಧಾನಸಭೆಯ ಚುನಾವಣೆಯಲ್ಲಿ ಉತ್ತರ ಕರ್ನಾಟಕದ ಯುವಕರು ಹಾಗೂ ಲಿಂಗಾಯತ ಸಮುದಾಯ ಬಿಜೆಪಿ ಅಧಿಕಾರಕ್ಕೆ ಬರಬೇಕು ಎನ್ನುವ ಉದ್ದೇಶದಿಂದ ಯಡಿಯೂರಪ್ಪನವರ ಸಿಎಂ ಆಗಬೇಕು ಎಂದು ಬಿಜೆಪಿಗೆ ಮತ ಹಾಕಿದರು. ಆದರೆ ಉತ್ತರ ಕರ್ನಾಟಕ ಭಾಗ ಬಿಜೆಪಿ ಮುಖಂಡರಿಗೆ ವರಿಷ್ಠರು ಸ್ಥಾನ ಮಾನ ನೀಡದೆ ಇರುವುದಕ್ಕೆ ಈ ಭಾಗದ ಲಿಂಗಾಯತ ಮುಖಂಡರು ಬಿಜೆಪಿ ವಿರುದ್ದ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಬಿಜೆಪಿ ರಾಜ್ಯ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿರುವುದು ಲಿಂಗಾಯತ ಸಮುದಾಯವನ್ನು ಕಡೆಗಣನೆ ಮಾಡಿದೆ. ಅಲ್ಲದೆ ನೂತನವಾಗಿ ನೇಮಕ ಮಾಡಲಾಗಿರುವ ಕೆಲ ಪದಾಧಿಕಾರಿಗಳಲ್ಲಿ ಪಕ್ಷ ಸಂಘಟಿಸುವ ಶಕ್ತಿ ಇಲ್ಲ. ಅವರು ಕೇವಲ ತಮ್ಮ ಕ್ಷೇತ್ರಗಳಿಗೆ ಮಾತ್ರ ಸಿಮೀತವಾಗಿ ಕೆಲಸ ಮಾಡುತ್ತಾರೆ. ಉತ್ತರ ಕರ್ನಾಟಕ ಭಾಗದ ಲಿಂಗಾಯತ ಸಮುದಾಯವನ್ನು ಸಂಪೂರ್ಣವಾಗಿ ಕಡೆಗಣಿಸಿ, ದಕ್ಷಿಣ ಕರ್ನಾಟಕಕ್ಕೆ ರಾಜ್ಯ ಪದಾಧಿಕಾರಿ ಪಟ್ಟಿಯಲ್ಲಿ ಸಿಂಹ ಪಾಲು ನೀಡಲಾಗಿರುವುದು ಉತ್ತರ ಕರ್ನಾಟಕ ಲಿಂಗಾಯತ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದೆ.
ಬಿ.ವೈ. ವಿಜಯೇಂದ್ರ, ಶೋಭಾ ಕರಂದ್ಲಾಜೆ, ರವಿಕುಮಾರ, ಅರವಿಂದ ಲಿಂಬಾವಳಿ, ಮಾಲೀಕಯ್ಯ ಗುತ್ತೇದಾರ, ಪ್ರತಾಸ ಸಿಂಹ, ತೇಜಸ್ವಿನಿ ಅನಂತಕುಮಾರ ಬಿಟ್ಟರೆ ಯಾವೊಬ್ಬ ಅನುಭವಿ ಹಾಗೂ ರಾಜ್ಯಕ್ಕೆ ಪರಿಷಚಯ ಇಲ್ಲದವರನ್ನು ಪದಾಧಿಕಾರಿಗಳ ನೇಮಕ ಮಾಡಿದ್ದಾರೆ. ಅಲ್ಲದೆ ದಕ್ಷಿಣ ಕರ್ನಾಟಕಕ್ಕೆ ಸಿಕ್ಕ ಪ್ರಾಶಸ್ತö್ಯ ಉತ್ತರ ಕರ್ನಾಟಕ್ಕೆ ನೀಡಿಲ್ಲ ಎನ್ನುವ ಅಸಮಾಧಾನ ಈ ಭಾಗದ ಬಿಜೆಪಿ ಕಾರ್ಯಕರ್ತರಲ್ಲಿ ಕಾಡತೋಡಗಿದೆ.
ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಡಾ. ಸಂದೀಪ ಪಕ್ಷ ಸಂಘಟನೆ ಕಟ್ಟುವ ಶಕ್ತಿ ಅವರಲ್ಲಿ ಇಲ್ಲ. ವಾಕ್ ಚಾತುರ್ಯವೂ ಇಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಟ್ರಂಪ್ ಕಾರ್ಡ್ ಆಗಿರುವ ಯುವಕರನ್ನು ಸೆಳೆಯುವ ಸಾಮರ್ಥ್ಯವೂ ಅವರಲ್ಲಿ ಇಲ್ಲ. ಯಾವ ಆಧಾರದ ಮೇಲೆ ಅವರಿಗೆ ಯುವಮೋರ್ಚಾ ಅಧ್ಯಕ್ಷ ಸ್ಥಾನ ನೀಡಲಾಗಿದೆ ಎನ್ನುವ ಪ್ರಶ್ನೆ ಕಾಡತೋಡಗಿದೆ. ಅಲ್ಲದೆ ಉತ್ತರ ಕರ್ನಾಟಕದ ಪ್ರಭಾವಿ ಲಿಂಗಾಯತ ಸಮುದಾದಯ ಭೀಮಾಶಂಕರ ಪಾಟೀಲ ಅವರ ಪರವಾಗಿ ಈ ಭಾಗದ ಶಾಸಕರು ಯುವ ಮೋರ್ಚಾ ಅಧ್ಯಕ್ಷ ಮಾಡುವಂತೆ ವರಿಷ್ಠರಿಗೆ ತಿಳಿಸಿದರೂ ಅವರನ್ನು ಕಡೆಗಣೆ ಮಾಡಿರುವುದು ಉತ್ತರ ಕರ್ನಾಟಕದಲ್ಲಿ ಬಿಜೆಪಿ ಲಿಂಗಾಯತ ಸಮುದಾಯವನ್ನು ಎದುರು ಹಾಕಿಕೊಂಡಿತ್ತಾ ಎನ್ನುವ ಅನುಮಾನ ಕಾಡತೋಡಗಿದೆ.
ಲಿಂಗಾಯತ ಸಮುದಾಯ ಹಿರಿಯರಿಂದ ಯುವ ಸಮುದಾಯದವರೆಗೂ ರಾಜ್ಯದ ರಾಜಕೀಯ ಪಕ್ಷಗಳನ್ನು ಸಂಘಟಿಸಿ ಬೆಳೆಸುವುದಲ್ಲದೆ ಸರಕಾರ ರಚನೆಯಲ್ಲಿಯೂ ಮಹತ್ವದ ಪಾತ್ರ ವಹಿಸಿದೆ. ಆದರೆ ಇದು ಉತ್ತರ ಕರ್ನಾಟಕ ಭಾಗದ ಲಿಂಗಾಯತ ಸಮುದಾಯದ ಯಾರನ್ನೂ ಪರಿಗಣಿಸದೆ ತಮ್ಮದೆಯಾದ ಗತ್ತಿನಲ್ಲಿ ಪಕ್ಷದ ವರಿಷ್ಠರು ನಡೆದುಕೊಳ್ಳುವ ರೀತಿ ನೋಡಿದರೆ ಈ ಭಾಗದ ಲಿಂಗಾಯತ ಸಮುದಾಯ ಸರಕಾರಕ್ಕೆ ಮತ್ತು ಅದರ ರಚನೆಗೆ ಯಾವುದೇ ಕೊಡುಗೆ ನೀಡಿಲ್ಲ ಎನ್ನುವ ಅರ್ಥ ಕಲ್ಪಿಸುವ ರೀತಿಯಲ್ಲಿ ಪಕ್ಷದ ವರಿಷ್ಟರು ನಡೆದುಕೊಳ್ಳುತ್ತಿರುವುದು ಈ ಭಾಗದ ಲಿಂಗಾಯತ ಸಮುದಾಯದ ದುರಂತವೆ ಹೌದು.
——————-
ಡಾ. ಸಂದೀಪ ಬಗ್ಗೆ ಅಪಸ್ವರ
ರಾಜ್ಯ ಯುವಮೋರ್ಚಾ ಅಧ್ಯಕ್ಷರಾಗಿ ಡಾ. ಸಂದೀಪ ಆಯ್ಕೆ ಮಾಡಿರುವುದು ಬಹುತೇಕ ಬಿಜೆಪಿ ಶಾಸಕರಿಂದಲೇ ಅಪಸ್ವರ ಕೇಳಿ ಬರುತ್ತಿದೆ. ಯಾರ ಜತೆಗೂ ಬೇರೆಯದ ಇವರನ್ನು ಯಾವ ಪುರುಷಾರ್ಥಕ್ಕಾಗಿ ವರಿಷ್ಠರು ಯುವಮೋರ್ಚಾ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ ಎನ್ನುವ ಆಕ್ರೋಶ ಕೇಳಿ ಬರುತ್ತಿವೆ. ಡಾ. ಸಂದೀಪ ಉತ್ತರ ಕರ್ನಾಟಕದ ಜನರ ಸಂಪರ್ಕ ಇಲ್ಲ. ಪಕ್ಷ ಸಂಘಟನೆ ಕೆಲಸವಂತೂ ಮಾಡಿಯೇ ಇಲ್ಲ. ಅವರಿಗೆ ಅವಕಾಶ ನೀಡಿದ್ದು ಎಷ್ಟು ಸರಿ ಎಂಬ ಮಾತುಗಳು ಉತ್ತರ ಕರ್ನಾಟಕದ ಶಾಸಕರದ್ದಾಗಿದೆ.

loading...