ಬಿಜೆಪಿ ಪ್ರಜಾಪ್ರಭುತ್ವದ ಮುಖವಾಡ ಧರಿಸಿದೆ : ಅಶೋಕ್ ಗೆಹ್ಲೋಟ್

0
0

ಮುಂಬೈ-ರಾಜಕೀಯ ಮಾಡುತ್ತಾ ಬಿಜೆಪಿ ಪ್ರಜಾಪ್ರಭುತ್ವದ ಮುಖವಾಡ ಧರಿಸಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ, ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ.
ಮುಂಬೈ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರೀಯ ತನಿಖಾ ತಂಡ ಸಿಬಿಐ ಗಳನ್ನು ದುರ್ಬಳಕೆ ಮಾಡಿ ವಿರೋಧ ಚುನಾವಣೆಗೆ ಮುನ್ನ ವಿರೋಧ ಪಕ್ಷಗಳ ವಿಚಾರಣೆ ನಡೆಸಿದೆ ಎಂದು ಅವರು ಕಿಡಿಕಾರಿದರು.
ಎನ್ ಸಿ ಪಿ ನಾಯಕ ಶರದ್ ಪವಾರ್ ಮತ್ತು ಪ್ರಫುಲ್ ಪಟೇಲ್ ವಿರುದ್ಧ ಕಳೆದ ಐದು ವರ್ಷಗಳಲ್ಲಿ ಯಾವುದೇ ಭ್ರಷ್ಟಾಚಾರ ಆರೋಪಗಳು ಕೇಳಿ ಬಂದಿರಲಿಲ್ಲ. ಆದರೆ ಮತದಾನಕ್ಕೆ ಕೆಲವೇ ದಿನ ಮುನ್ನ ಪ್ರಫುಲ್ ಪಟೇಲ್ ಅವರಿಗೆ ಇಡಿ ಮುನ್ನ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ. ಶರದ್ ಪವಾರ್ ಅವರ ಹೆಸರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದೊಂದಿಗೆ ತಳುಕು ಹಾಕಲಾಗಿದೆ ಎಂದು ಗೆಹ್ಲೋಟ್ ದೂರಿದರು.

loading...