ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ   ನಡ್ಡಾ ಜೊತೆ  ಪವನ್ ಕಲ್ಯಾಣ್ ಭೇಟಿ

0
0

ನವದೆಹಲಿ-  ಆಂಧ್ರಪ್ರದೇಶದ ಜನಸೇನಾ ಪಕ್ಷದ ಮುಖ್ಯಸ್ಥ  ಹಾಗೂ  ಚಲನ ಚಿತ್ರನಟ ಪವನ್ ಕಲ್ಯಾಣ್    ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ಅವರನ್ನು ಗುರುವಾರ  ಇಲ್ಲಿ  ಭೇಟಿ ಮಾಡಿ ಮಾತುಕತೆ ನಡೆಸಿದರು.
ಆಂಧ್ರಪ್ರದೇಶದಲ್ಲಿ  ಎರಡೂ  ಪಕ್ಷಗಳು    ವೈ.ಎಸ್. ಜಗನ್ ಮೋಹನ್ ರೆಡ್ಡಿ  ಸರ್ಕಾರ  ಕೈಗೊಂಡಿರುವ  ಕ್ರಮಗಳ ವಿರುದ್ದ   ಹೋರಾಟ ನಡೆಸುವ   ಸಂಬಂಧ  ಈ ಸಭೆಯಲ್ಲಿ ವಿವರವಾಗಿ  ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.
ಜನಸೇನಾ ಪ್ರಮುಖ ನಾಯಕ ನಾಂದೇಂಡ್ಲ  ಮನೋಹರ್, ಬಿಜೆಪಿ ರಾಜ್ಯಸಭಾ ಸದಸ್ಯ  ಜಿವಿಎಲ್  ನರಸಿಂಹರಾವ್, ಬಿಜೆಪಿ ನಾಯಕಿ ಪುರಂದೇಶ್ವರಿ ಈ ಸಭೆಯಲ್ಲಿ ಉಪಸ್ಥಿತರಿದ್ದರು.
ಪವನ್  ಕಲ್ಯಾಣ್,  ಜೆ.ಪಿ.  ನಡ್ಡಾ ಅವರನ್ನು ಭೇಟಿಯಾಗುತ್ತಿರುವುದು   ಇದು ಎರಡನೇ ಬಾರಿಯಾಗಿದೆ.  ಸಭೆಯ ನಂತರ  ಎರಡೂ ಪಕ್ಷಗಳು ಸಮನ್ವಯ ಸಮಿತಿ ಸದಸ್ಯರ  ಹೆಸರು  ಪ್ರಕಟಿಸುವ ನಿರೀಕ್ಷೆಯಿದೆ. ಆಂಧ್ರ ಪ್ರದೇಶ  ರಾಜಧಾನಿ ಅಮರಾವತಿ  ಸ್ಥಳಾಂತರ  ಸಂಬಂಧ  ರಾಜ್ಯ ವಿಧಾನಸಭೆ ಮತ್ತು ಶಾಸಕರ  ಸಮಿತಿ  ಕೈಗೊಂಡ  ನಿರ್ಧಾರದ   ಪರಿಣಾಮಗಳ ಬಗ್ಗೆ ಪವನ್ ಕಲ್ಯಾಣ್  ಹಾಗೂ  ಆಂಧ್ರ  ಬಿಜೆಪಿ ನಾಯಕರು ಬಿಜೆಪಿ ರಾಷ್ಟ್ರೀಯ  ಅಧ್ಯಕ್ಷರ  ಗಮನಕ್ಕೆ  ತರುವ ಸಾಧ್ಯತೆಯಿದೆ.

loading...