ಬಿಜೆಪಿ ೪೦ನೇ ಸಂಸ್ಥಾಪನಾ ದಿನ; ಪಕ್ಷ ನಾಯಕರು, ಕಾರ್ಯಕರ್ತರಿಗೆ ಪ್ರಧಾನಿ ಮೋದಿ ಶುಭಾಷಯ

0
8

ನವದೆಹಲಿ:- ಭಾರತೀಯ ಜನತಾ ಪಕ್ಷದ (ಬಿಜೆಪಿ) ಸ್ಥಾಪನೆಯಾಗಿ ಇಂದಿಗೆ ೪೦ ವರ್ಷಗಳು ತುಂಬಿದ್ದು, ಸಂಸ್ಥಾಪನಾ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಶುಭಾಶಯ ತಿಳಿಸಿದ್ದಾರೆ.
ಪಕ್ಷವನ್ನು ಕಟ್ಟಲು ಹಾಗೂ ಅದರ ಅಭಿವೃದ್ಧಿಗಾಗಿ ಶ್ರಮಿಸಿದ ನಾಯಕರ ಕೊಡುಗೆಯನ್ನು ಅವರು ಸ್ಮರಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಉತ್ತಮ ಆಡಳಿತ, ಬಡವರ ಅಭಿವೃದ್ದಿ ಯೋಜನೆಗಳಿಗೆ ಹೆಚ್ಚಿನ ಅದ್ಯತೆ ನೀಡಿದೆ ಎಂದು ಅವರು ಹೇಳಿದ್ದಾರೆ.
ಪಕ್ಷದ ಸಿದ್ಧಾಂತಗಳ ಅನುಗುಣವಾಗಿ ಬಿಜೆಪಿ ಕಾರ್ಯಕರ್ತರು ಹಲವರ ಜೀವನದಲ್ಲಿ ಬೆಳಕು ಮೂಡಿಸಿದ್ದಾರೆ. ಸಮಾಜ ಸೇವೆ ಮಾಡುತ್ತಿದ್ದಾರೆ, ಪಕ್ಷವನ್ನು ಬಲಪಡಿಸಲು ದಶಕಗಳಿಂದ ದುಡಿಯುತ್ತಿರುವ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ. ಕಾರ್ಯಕರ್ತರ ಕಠಿಣ ಪರಿಶ್ರಮದಿಂದಾಗಿ ಬಿಜೆಪಿ ದೇಶಾದ್ಯಂತ ಭಾರಿ ಯಶಸ್ಸು ಸಾಧಿಸಿದೆ ಎಂದು ಮೋದಿ ಹೇಳಿದ್ದಾರೆ.
ಭಾರತ, ಕೋವಿಡ್ -೧೯ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ಬಿಜೆಪಿಯ ೪೦ನೇ ಸಂಸ್ಥಾಪನಾ ದಿನ ಬಂದಿದೆ ಎಂದು ಹೇಳಿರುವ ಮೋದಿ, ದಯಮಾಡಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಮಾರ್ಗಸೂಚಿಗಳನ್ನು ಅನುಸರಿಸಿ ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡಿ, ಅದೇ ರೀತಿ ಸಾಮಾಜಿಕ ಅಂತರ ಪಾಲಿಸುವ ಅಗತ್ಯವನ್ನು ವಿವರಿಸಿ, ಭಾರತದಿಂದ ಕೊರೊನಾ ಓಡಿಸೋಣ ಎಂದು ಮೋದಿ ಸಂದರ್ಭದಲ್ಲಿ ಟ್ವೀಟ್ ಮಾಡಿದ್ದಾರೆ. ಭಾರತದಲ್ಲಿ ಈವರೆಗೆ ೪,೨೦೦ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಕಳೆದ ೨೪ ಗಂಟೆಗಳಲ್ಲಿ ೫೦೦ ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಏತನ್ಮಧ್ಯೆ, ವಿಶ್ವಾದ್ಯಂತ ಕೊರೊನಾ ಪ್ರಕರಣಗಳು ೧೨ ಲಕ್ಷ ದಾಟಿದ್ದು, ೭೦,೦೦೦ ಜನರನ್ನು ಬಲಿ ತೆಗೆದುಕೊಂಡಿವೆ.

loading...