ಬಿಳಗಿಯಲ್ಲಿ ಭೀಕರ ಅಪಘಾತ ಸ್ಥಳದಲ್ಲೆ ಮಹಿಳೆ ಸಾವು

0
54

ಕನ್ನಡಮ್ಮ ಸುದ್ದಿ-ಸಿದ್ದಾಪುರ : ತಾಲೂಕಿನ ಬಿಳಗಿಯ ಬಸ್ ನಿಲ್ದಾಣದ ಸಮೀಪ ಬುಧವಾರ ಸಂಜೆ ಪಿಕ್‍ಅಪ್ ವಾಹನವೊಂದು ಬೈಕ್‍ಗೆ ಬಡಿದ ಪರಿಣಾಮ ಮಹಿಳೆಯೋರ್ವಳು ಮೃತ ಮೃತಪಟ್ಟಿದ್ದು ಆಕೆಯ ಪತಿಯ ಪರಿಸ್ಥಿತಿ ಚಿಂತಾಜನಕವಾಗಿದೆ.
ಇಟಗಿಯ ಸುಧೀರ ಕಿಣಿ(39) ಬಿಳಗಿ ಕಡೆಯಿಂದ ಪತ್ನಿ ಸಂಗೀತಾ(32) ಹಾಗೂ ಮಗ ಉಪೇಂದ್ರ ಇವರುಗಳನ್ನು ಬೈಕಿನಲ್ಲಿ ಕೂಡ್ರಿಸಿಕೊಂಡು ಊರಿಗೆ ತೆರಳುತ್ತಿರುವಾಗ ಎದುರುಗಡೆಯಿಂದ ಬಂದ ಪಿಕ್‍ಅಪ್ ವಾಹನವು ವೇಗವಾಗಿ ಬಂದು ಬಡಿದ ಪರಿಣಾಮ ಪತ್ನಿ ಸಂಗೀತಾ ಸ್ಥಳದಲ್ಲೇ ಮೃತಪಟ್ಟರೆ ಸುಧೀರ ಕಿಣಿ ತಲೆಗೆ ವಿಪರೀತ ಹೊಡೆತ ತಗಲಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಾ ಆಸ್ಪತ್ರೆಗೆ ಕಳಿಸಲಾಗಿದೆ. ಬೈಕ್‍ನಲ್ಲಿ ಎದುರಿಗೆ ಕುಳಿತಿದ್ದ ಎರಡೂವರೆ ವರ್ಷದ ಮಗ ಉಪೇಂದ್ರನು ಗಾಡಿಯಿಂದ ಹಾರಿ ಬಿದ್ದಿದ್ದು ಮೂಗಿಗೆ ಕೊಂಚ ಹೊಡೆತ ತಗಲಿದ್ದು ಬಿಟ್ಟರೆ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾನೆ.
ಸಿಪಿಐ ಜಯರಾಮ ಗೌಡ ಸ್ಥಳಕ್ಕೆ ಭೇಟಿ ನೀಡಿ ಮಾರ್ಗದರ್ಶನ ಮಾಡಿದ್ದು ಪೊಲೀಸರು ಕೇಸು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಪಿಕ್‍ಅಪ್ ಗಾಡಿಯ ಚಾಲಕನನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಸಿಪಿಐ ಜಯರಾಮ ಗೌಡ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here