ಬಿಸಿ ನೀರಿನ ತಾಪ ತಾಳಲಾರದೆ ನರಳಿ ಕಂದಮ್ಮ ಸಾವು

0
709

ಬಿಸಿ ನೀರಿನ ತಾಪ ತಾಳಲಾರದೆ ನರಳಿ ಕಂದಮ್ಮ ಸಾವು
ಬೆಳಗಾವಿ:
ಮೈ ಮೇಲೆ ಬಿಸಿ ನೀರು ಬಿದ್ದ ಪರಿಣಾಮ ನೋವನ್ನು ತಾಳಲಾರದೆ ಒಂದುವರೆ ವರ್ಷದ ಮಗು ನರಳಿ ಸಾನವನಪ್ಪಿರುವ ಹೃದಯ ವಿದ್ರಾವಕ ದುರ್ಘಟನೆ ಗುರುವಾರ ಮುಂಜಾನೆ ನಡೆದಿದೆ.
ಸವದತ್ತಿ ತಾಲ್ಲೂಕಿನ ಅಸುಂಡಿ ಗ್ರಾಮದ ಸವಿತಾ ಹಾಳಮನಿ (೧) ಮೃತ ದುರ್ದೈವಿ ಮಗು, ಮಗುವಿನ ತಂದೆ ಶ್ರೀಕಾಂತ ಶಿವಪ್ಪ ಹಾಳಮನಿ ನಗರದಲ್ಲಿ ಪೇದೆಯಾಗಿ ಕಾರ್ಯನಿರ್ವಸುತ್ತಿದ್ದಾರೆ.
ರಜೆ ಕಾರಣಕ್ಕೆ ಕುಟುಂಬಸ್ಥರು ಜತೆ ಗ್ರಾಮಕ್ಕೆ ತೆರಳಿದ್ದರು. ನಿತ್ಯದ ರೂಡಿಯಂತೆ ತಾಯಿ ಮಗುವಿಗೆ ಸ್ನಾನ ಮಾಡಿಸಲು ನೀರನ್ನು ಕಾಯಿಸಿ ಸ್ನಾನ ಕೋಣೆಯಲ್ಲಿ ಇರಿಸಿದ್ದಾರೆ. ದುರ್ದೈವ ನೀರು ವೀಪರಿತವಾಗಿ ಬಿಸಿಯಾಗಿದೆ. ಈ ವೇಳೆ ಮಗು ಆಟವಾಡುತ್ತಾ ಕೋಣೆಗೆ ತೆರಳಿದೆ. ಬಿಸಿ ನೀರು ತುಂಬಿದ ಬಕೆಟ್‌ನ್ನು ಏಳೆದಿದರಿಂದ ನೀರು ಮೈಮೇಲೆ ಬಿದ್ದಿದೆ, ಎಚ್ಚತ್ತ ಪೋಷಕರು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಗಂಭೀರ ಗಾಯಗೊಂಡ ಮಗುವಿನ ಸ್ಥಿತಿಗೆ ಚಿಕಿತ್ಸೆ ಫಲಿಸದೆ, ನೋವನ್ನು ತಾಳಲಾದರೆ ಕಂದಮ್ಮ ಅಸುನಿಗಿದೆ.

loading...