ಬುಡಾ: ನೂತನ ಯೋಜನೆಗಳ ಅಂಗೀಕಾರ ; ಹೆಸರು ನಾಮಕರಣ ಠರಾವು

0
41

ಬುಡಾ: ನೂತನ ಯೋಜನೆಗಳ ಅಂಗೀಕಾರ ; ಹೆಸರು ನಾಮಕರಣ ಠರಾವು
ಬೆಳಗಾವಿ: ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ)ದ ಸಾಮಾನ್ಯ ಸಭೆ ನ.೨೭ ರಂದು ಬೆಳಗ್ಗೆ ೧೧ ಗಂಟೆಗೆ ಬುಡಾ ಕಚೇರಿಯ ಸಭಾಂಗಣದಲ್ಲಿ ಬುಡಾ ಅಧ್ಯಕ್ಷ ಗೂಳಪ್ಪ ಹೊಸಮನಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಈ ಸಾಮಾನ್ಯ ಸಭೆಯಲ್ಲಿ ಆದಾಯ- ವೆಚ್ಚ ಅನುಮೋದನೆ ಪಡೆಯಲಾಯಿತು. ಇದೇ ವೇಳೆ ಕಣಬರ್ಗಿ ಕಲ್ಮೇಶ್ವರ ಸಮುದಾಯ ಭವನ ನಿರ್ಮಾಣ, ನಗರಾಭಿವೃದ್ಧಿ ಪ್ರಾಧಿಕಾರದ ಎಚ್ ಡಿ ಕುಮಾರಸ್ವಾಮಿ ೫೬ ಯೋಜನೆಯಡಿ ನಾಲಾ ನಿರ್ಮಾಣ, ಕುಮಾರಸ್ವಾಮಿ ಲೇಔಟ್ ನಲ್ಲಿ ಜನೋಪಯೋಗಿ ಅಂಗಡಿಗಳ ನಿರ್ಮಾಣ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.
ರಾಮತೀರ್ಥ ನಗರದಲ್ಲಿ ಹಾಳಾದ ಗಟಾರುಗಳ ಮರು ನಿರ್ಮಾಣ ಯೋಜನೆಗೆ ಅಂಗೀಕಾರ ನೀಡಲಾಯಿತು. ೩೦ ಮೀ ಮೀಟರ್ ಕಣಬರ್ಗಿ ರಸ್ತೆಯನ್ನು ಮರು ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಯಿತು.
ಪ್ರಾಧಿಕಾರದ ಯೋಜನೆ ೬೧ ಕಣಬರ್ಗಿ ಯೋಜನೆಗೆ ಬಿ.ಎಸ್.ಯಡಿಯೂರಪ್ಪ ಹೆಸರು, ಬಹುಮಹಡಿ ಕಟ್ಟಡಕ್ಕೆ ದಿವಂಗತ ಲೋಕಸಭಾ ಸದಸ್ಯ ಸುರೇಶ ಅಂಗಡಿ ಅವರ ಹೆಸರು, ಅಂತಾರಾಷ್ಟಿöçÃಯ ಎಸ್ಟೊöçà ಟ್ರö್ಯಪ್ ಹಾಕಿ ಮೈದಾನಕ್ಕೆ ಒಲಿಂಪಿಯನ್ ಬಂಡು ಪಾಟೀಲ ಹೆಸರು ನಾಮಕರಣ ಮಾಡಲು ಸರ್ವಾನುಮತದ ಠರಾವು ಪಾಸು ಮಾಡಲಾಯಿತು.
ಈ ಸಾಮಾನ್ಯ ಸಭೆಯಲ್ಲಿ ಶಾಸಕರಾದ ಅನಿಲ್ ಬೆನಕೆ, ಅಭಯ ಪಾಟೀಲ ಮಾತನಾಡಿ ನಗರದ ಅಭಿವೃದ್ಧಿಗೆ ನಾವು ಸದಾ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಬೆಂಬಲಾಗಿದ್ದುಕೊAಡು ಸಾರ್ವಜನಿಕ ಹಿತ ಕಾಪಾಡಲಾಗುವುದು ಎಂದರು.
ಅಧ್ಯಕ್ಷ ಘೂಳಪ್ಪ ಹೊಸಮನಿ ಮಾತನಾಡಿ, ಪ್ರಸ್ತುತ ಸಾಮಾನ್ಯ ಸಭೆಯಲ್ಲಿನ ಠರಾವು ಹಾಗೂ ನೂತನ ಯೋಜನೆಗಳನ್ನು ತ್ವರಿತಗತಿಯಲ್ಲಿ ಕೂಡಲೇ ಆರಂಭಿಸುವುದಾಗಿ ಹೇಳಿದರು.
ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದು ಸಲಹೆ ಸೂಚನೆಯನ್ನು ನೀಡಿದರು.

loading...