ಬುದ್ದಿಶಕ್ತಿ ಮಟ್ಟದ ಅಗ್ರ ಬೆಳವಣಿಗೆಗೆ ಚೆಸ್‌ ಸಹಕಾರಿ: ಪ್ರಕಾಶ ಶೆಟ್ಟಿ

0
26

ಕನ್ನಡಮ್ಮ ಸುದ್ದಿ-ದಾಂಡೇಲಿ: ವಿಶ್ವದಾದ್ಯಂತ ಮನೆಮಾತಾಗಿರುವ ಚೆಸ್‌ ಕ್ರೀಡೆ ಮನುಷ್ಯನ ಬುದ್ದಿಮಟ್ಟದ ಅಗ್ರ ಬೆಳವಣಿಗೆಗೆ ಪರಿಣಾಮಕಾರಿಯಾದ ಕ್ರೀಡೆ. ಚೆಸ್‌ ಕ್ರೀಡೆಯನ್ನು ಪ್ರೋತ್ಸಾಹಿಸುವುದರ ಮೂಲಕ ಎಳೆಯ ಮಕ್ಕಳನ್ನು ಚೆಸ್‌ ಕ್ರೀಡೆಯತ್ತ ಆಕರ್ಷಿತರನ್ನಾಗಿಸುವ ಕೆಲಸ ಅಗತ್ಯ ಮಾಡಬೇಕಾಗಿದೆ ಎಂದು ನಗರದ ರೋಟರಿ ಕ್ಲಬ್‌ ಅಧ್ಯಕ್ಷ ಹಾಗೂ ಉದ್ಯಮಿ ಎಸ್‌.ಪ್ರಕಾಶ ಶೆಟ್ಟಿ ಹೇಳಿದರು.
ಅವರು ನಗರದ ಜೆವಿಡಿ ಶಿಕ್ಷಣ ಸಂಸ್ಥೆಯ ರಾಮರೆಡ್ಡಿ ಸಭಾಭವನದಲ್ಲಿ ನಗರದ ರೋಟರಿ ಕ್ಲಬ್‌ ಹಾಗೂ ಜಿಲ್ಲಾ ಚೆಸ್‌ ಅಸೊಶಿಯೇಶನ್‌ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಮುಕ್ತ ಹಾಗೂ ವಿವಿಧ ವಿಭಾಗ ಮಟ್ಟದ ಚೆಸ್‌ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಶೇಷವಾಗಿ ಎಳೆಯ ಪ್ರಾಯದಲ್ಲೆ ಮಕ್ಕಳಿಗೆ ಚೆಸ್‌ ಕ್ರೀಡೆಯ ಕಡೆಗೆ ಹೆಚ್ಚಿನ ಒಲವನ್ನು ಹರಿಸಬೇಕು. ಬುದ್ದಿಶಕ್ತಿಯ ಜೊತೆಗೆ ಮನೋವಿಕಾಸಕ್ಕೆ ಚೆಸ್‌ ಮಹತ್ವದ ವೇದಿಕೆ ಎಂದ ಅವರು ಇಂಥಹ ಕಾರ್ಯಕ್ರಮಗಳ ಬಗ್ಗೆ ರೋಟರಿ ಕ್ಲಬ್‌ ವಿಶೇಷ ಮುತುವರ್ಜಿ ವಹಿಸಲಿದೆ ಎಂದರಲ್ಲದೇ, ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ. ಭಾಗವಹಿಸಿದವರೆಲ್ಲರಿಗೂ ಬಹುಮಾನ ಗೆಲ್ಲಲು ಅಸಾಧ್ಯ. ಆದಾಗ್ಯೂ ಸೋಲೆ ಗೆಲುವಿನ ಮೆಟ್ಟಲೆಂದು ತಿಳಿದು ಮುಂದಡಿಯಿಡಬೇಕೆಂದು ಪ್ರಕಾಶ ಶೆಟ್ಟಿ ಕರೆ ನೀಡಿದರು. ಪಂದ್ಯಾವಳಿಯನ್ನು ವಿಶೇಷ ತಹಶೀಲ್ದಾರ್‌ ಶೈಲೇಶ ಪರಮಾನಂದ ಅವರು ಉದ್ಘಾಟಿಸಿ, ಚೆಸ್‌ ಪಂದ್ಯಾವಳಿಯನ್ನು ದಾಂಡೇಲಿಯಲ್ಲಿ ಹಮ್ಮಿಕೊಂಡಿರುವುದು ಸ್ವಾಗತಾರ್ಹ. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಅತ್ಯಗತ್ಯವಾಗಿ ಬೇಕಾದ ಚೆಸ್‌ ಕ್ರೀಡೆಗೆ ಉತ್ತೇಜನ ನೀಡುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿ, ಪಂದ್ಯಾವಳಿಗೆ ಶುಭ ಕೋರಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಚೆಸ್‌ ಅಸೋಶಿಯೇಶನ್‌ ಪ್ರಧಾನ ಕಾರ್ಯದರ್ಶಿ ವಿ.ಜಿ.ಬಂಡಿ, ರೋಟರಿ ಕ್ಲಬ್‌ ಇದರ ಇವೆಂಟ್‌ ಚೇರ್ಮೆನ್‌ ಹಾಗೂ ಉದ್ಯಮಿ ನವೀನ ಕಾಮತ್‌, ರೋಟರಿ ಕ್ಲಬ್‌ ಕಾರ್ಯದರ್ಶಿ ಸೋಮಕುಮಾರ್‌, ಖಜಾಂಚಿ ಹಾಗೂ ಉದ್ಯಮಿ ಅಶುತೋಷ್‌ ರಾಯ್‌, ರೋಟೆರಿಯನ್‌ಗಳಾದ ರವಿ ನಾಯ್ಕ, ರಾಜೇಶ ತಿವಾರಿ, ಸುದಾಕರ ಶೆಟ್ಟಿ, ಎಸ್‌.ಜಿ.ಬಿರದಾರ, ಮಿಥುನ್‌ ನಾಯ್ಕ, ಸಲೀಂ ಅಂಕೋಲೆಕರ, ಜೋಸೆಪ್‌ ಗೋನ್ಸಾಲಿಸ್‌ ರಾಹುಲ್‌ ಬಾವಾಜಿ, ದಾಂಡೇಲಿ ಚೆಸ್‌ ತರಬೇತುದಾರ ಸಂದೇಶ ಹೆಬ್ಬಾರ್‌ ಭಾಗವಹಿಸಿದ್ದರು. ಪಂದ್ಯಾವಳಿಯ ಕೊನೆಯಲ್ಲಿ ವಿಜೇತರಿಗೆ ಬಹುಮಾನ ಹಾಗೂ ಭಾಗವಹಿಸಿದ ಸ್ಪರ್ಧಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು. ಒಟ್ಟು 60 ಜನ ಭಾಗವಹಿಸಿದ ಈ ಕೂಟದ ಮುಕ್ತ ಪಂದ್ಯಾವಳಿಯಲ್ಲಿ ಒಂದರಿಂದ ಐದು ಸ್ಥಾನಗಳು ಶಿರಸಿ ಪಾಲಾದವು. ಪ್ರಥಮ ನಿತೀಶ ಭಟ್‌, ದ್ವಿತೀಯ ವಿ.ಜಿ.ಬಂಡಿ, ತೃತೀಯ ರವಿ ಹೆಗಡೆ, ನಾಲ್ಕನೇ ನವೀನ ಹೆಗಡೆ ಹಾಗೂ ಐದನೆ ಬಹುಮಾನವನ್ನು ಪ್ರಜ್ವಲ್‌ ಜೋಶಿ ತನ್ನದಾಗಿಸಿಕೊಂಡರು. 15 ವರ್ಷ ವಯೋಮಿತಿಯವರ ವಿಭಾಗದಲ್ಲಿ ಪ್ರಜ್ವಲ್‌ ಶೆಟ್ಟಿ, 13 ವರ್ಷ ವಯೋಮಿತಿಯಲ್ಲಿ ಸಾರ್ಥಕ ಘಸ್ತಿ, 11 ವರ್ಷ ವಯೋಮಿತಿಯಲ್ಲಿ ದಾಂಡೇಲಿಯ ನವನೀತ ಕಾಮತ್‌ ಬಹುಮಾನ ಪಡೆದುಕೊಂಡರು. ಬೆಸ್ಟ್‌ ಗರ್ಲ್‌ ಅವಾರ್ಡ್‌ ದಾಂಡೇಲಿಯ ನಿಕಿತಾ ಕಾಮತ್‌ ಅವರ ಪಾಲಾಯ್ತು. ರೋಟೆರಿಯನ್‌ ಹಾಗೂ ಕಲಾವಿದ ಜೋಸೆಪ್‌ ಗೋನ್ಸಾಲಿಸ್‌ ನಿರೂಪಿಸಿದ ಕಾರ್ಯಕ್ರಮಕ್ಕೆ, ರೋಟೆರಿಯನ್‌ ರಾಹುಲ್‌ ಬಾವಾಜಿ ವಂದಿಸಿದರು. ರೋಟರಿ ಕಾರ್ಯದರ್ಶಿ ಸೋಮಕುಮಾರ್‌ ಅತಿಥಿಗಳನ್ನು ಪರಿಚಯಿಸಿದರು.

loading...