ಬೆಂಗಳೂರಿನಿಂದ ಹರಿದು ಬಂತು ಸಂತ್ರಸ್ತರಿಗೆ ನೆರವು

0
40

ಬೆಳಗಾವಿ

ಉದಯ ಟಿವಿ ಮುಖ್ಯಸ್ಥ ಭುವನ ಶಾಸ್ತ್ರೀ ನೇತೃತ್ವದಲ್ಲಿ ಸಂತ್ರಸ್ತರಿಗೆ ನೆರವು ಹರಿದು ಬಂತು ಬೆಳಗಾವಿಯ ಅಂಬೇಡ್ಕರ್ ಭವನ, ಧರ್ಮನಾಥ ಭವನ, ಹಿರೇಬಾಗೇವಾಡಿ, ಅರಳಿಕಟ್ಟಿಯಲ್ಲಿ ಸಂತ್ರಸ್ತರಿಗೆ ಬಟ್ಟೆ, ರಗ್ಗು ದಿನಿಸಿ ಸಾಮಗ್ರಿ, ಅಕ್ಕಿ, ಎಣ್ಣಿ ಸೇರಿದಂತೆ ಇನ್ನಿತರರು ಸಾಮಗ್ರಿಗಳನ್ನು ಬೆಳಗಾವಿ ಉತ್ತರ ಹಾಗೂ ಗ್ರಾಮೀಣ ಮತಕ್ಷೇತ್ರದ ಪರಿಹಾರ ಕೇಂದ್ರದಲ್ಲಿ ಸೋಮವಾರ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಭುವನ ಶಾಸ್ತ್ರೀ, ಉತ್ತರ ಕರ್ನಾಟಕದ ಜನ ಸ್ವಾಭಿಮಾನಿ ಜನ ಇಂದು ಅವರು ನಿರಾಶ್ರಿತರಾಗಿರುವುದು ನಮಗೆ ಅತೀವ ದುಃಖ ತಂದಿದೆ‌. ಹುಕ್ಕೇರಿ ಶ್ರೀಗಳ ನೇತೃತ್ವದಲ್ಲಿ ಈ ಭಾಗದಲ್ಲಿನ ನಿರಾಶ್ರಿತರಿಗೆ ನೆರವು ಸಿಕ್ಕಿದೆ. ನಮಗೆ ಸಾಧ್ಯವಾದಷ್ಟು ನೆರವು ನೀಡಿದ್ದೇವೆ ಎಂದರು.
ಅನಿಲ್ ಬೆನಕೆ ಮಾತನಾಡಿ, ಪರಿಸರ ಚನ್ನಾಗಿ ನೋಡಿಕೊಳ್ಳುವುದರ ಜತೆಗೆ ಆರೋಗ್ಯದ ಕಾಳಜಿಯನ್ನು ಮಾಡಿಕೊಳ್ಳುವುದು ಸಂತ್ರಸ್ತರಿಗೆ ಅವಶ್ಯಕತೆ ಇದೆ. ಇಂದು ಬೇರೆ ಬೇರೆ ಕಡೆಯಿಂದ ಬಂದು ಸಂತ್ರಸ್ತರಿಗೆ ನೆರವು ನೀಡುತ್ತಿರುವುದು ಅಭಿಮಾನದ ಸಂಗತಿ ಎಂದರು.

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಇಡೀ ಕರ್ನಾಟಕದ ತುಂಬ ಧಾರಾಕರ ಮಳೆ ಸುರಿಯುತ್ತಿದೆ‌. ಹೆಚ್ಚು ಹೆಚ್ಚಾಗಿ ಬೆಳಗಾವಿ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಜನ ನಿರಾಶ್ರಿತರಾಗಿದ್ದಾರೆ. ಇವರಿಗೆ ಇಂದು ಬೇರೆ ಬೇರೆ ಕಡೆಯಿಂದ ಬಂದು ಸಹಾಯ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬೆಂಗಳೂರು ನಗರದಲ್ಲಿರುವ ಜನ, ಮಾಧ್ಯಮ, ಚಿತ್ರೋದ್ಯಮ, ಸಂಘ ಸಂಸ್ಥೆಗಳು ನೆರವು ನೀಡುತ್ತಿರುವುದು ಸಂತಸ ತಂದಿದೆ. ಅವರ ಈ ನೆರವು ನಮ್ಮ ಜನ ಸದ್ಬಳಕೆ ಮಾಡಿಕೊಳ್ಳುತ್ತಾರೆ ಎಂದರು.

ಬೈಲಹೊಂಗಲ ‌ವೇದಮೂರ್ತಿ ಮಹಾಂತೇಶ ಶಾಸ್ತ್ರೀ, ಬೆಳಗಾವಿಯ ವಿದ್ವಾನ ಶಾಸ್ತ್ರೀ, ಕೆಎಲ್ಇ ಶಂಕರಯ್ಯ ಶಾಸ್ತ್ರೀ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

loading...