ಬೆಳಂ ಬೆಳಗ್ಗೆ ಬೆಳಗಾವಿಯಲ್ಲಿ ಜವರಾಯನ ಅಟ್ಟಹಾಸ: 7 ಜನರ ದುರ್ಮರಣ

0
11

ಬೆಳಗಾವಿ: ಟ್ರ್ಯಾಕ್ಟರ್ ಪಲ್ಟಿಯಾಗಿ 7 ಮಹಿಳೆಯರು ದುರ್ಮರಣಕ್ಕೀಡಾದ ಘಟನೆ ಖಾನಾಪುರ ತಾಲೂಕಿನ ಇಟಗಿ ಬಳಿಯ ಬೋಗುರ ಹಳ್ಳದಲ್ಲಿ ಸಂಭವಿಸಿದೆ.

ತಂಗ್ಯವ್ವ ಹುಂಚೇಕಟ್ಟಿ, ಅಶೋಕ ಕೇದಾರಿ, ಶಾಂತವ್ವ ಆಲಗೂಡಿ., ಗುಲಾಭಿ ಹುಂಚಿಕಟ್ಟಿ, ನಾಗವ್ವಾ ಮಾತೋಳೆ, ಶಾಂತವ್ವ ಜಿಂಝುರೇ, ನೀಲವ್ವಾ ಮುತ್ನಾಳ ಮೃತ ದುರ್ದೈವಿಗಳು. ಘಟನಾ ಸ್ಥಳದಲ್ಲಿಯೇ ನಾಲ್ವರು ಸಾವನ್ನಪ್ಪಿದರೆ, ಉಳಿದವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಕಬ್ಬು ಕಟಾವಿಗೆ 15 ಕ್ಕೂ ಹೆಚ್ಚು ಜನರಿದ್ದ ಗ್ಯಾಂಗ್ ಮುಂಜಾನೆ ಬೋಗುರ ಗ್ರಾಮದಿಂದ ಇಟಗಿಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬೋಗುರ ಸೇತುವೆ ಮೇಲಿಂದ ಟ್ರ್ಯಾಕ್ಟರ್ ಹಳ್ಳಕ್ಕೆ ಉರುಳಿ ಬಿದ್ದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಹಲವು ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಂದಗಡ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

loading...