ಬೆಳಕೂಡದಲ್ಲಿ ಸರಣಿ ಕಳ್ಳತನ: 10.65 ಲಕ್ಷ ದೋಚಿ ಫರಾರಿ

0
21


ಕನ್ನಡಮ್ಮ ಸುದ್ದಿ
ಚಿಕ್ಕೋಡಿ 27: ಸಹಕಾರಿ ಸಂಸ್ಥೆ ಮತ್ತು ಬಿಎಸ್‍ಎನ್‍ಎಲ್ ಕಚೇರಿಯ ಬೀಗ ಮುರಿದು ಸಹಕಾರಿ ಸಂಸ್ಥೆಯಲ್ಲಿ 10.65 ಲಕ್ಷ ರೂ.ನಗದು ಮತ್ತು ಸುಮಾರು 4 ಲಕ್ಷ ಮೊತ್ತದ ಬಂಗಾರ ಆಭರಗಳನ್ನು ಕಳ್ಳರು ದೋಚಿಕೊಂಡು ಹೋಗಿರುವ ಘಟನೆ ಗುರುವಾರ ತಡ ರಾತ್ರಿ ತಾಲೂಕಿನ ಬೆಳಕೂಡ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹೊರವಲಯದಲ್ಲಿರುವ ಸಿದ್ದೇಶ್ವರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿಯ ಸೇಟರ್ ಬಾಗೀಲು ಮುರಿದು ಸಹಕಾರಿ ಸಂಸ್ಥೆಯಲ್ಲಿಟ್ಟಿದ್ದ ಸುಮಾರು 10.65 ಲಕ್ಷ ರೂಗಳಷ್ಟು ನಗದು ಮತ್ತು ಗ್ರಾಹಕರು ಅಡವಿಟ್ಟು ಸಾಲ ಪಡೆದುಕೊಂಡಿರುವ ಬಂಗಾರ ಆಭರಣಗಳನ್ನು ದೋಚಿಕೊಂಡು ಹೋಗಿದ್ದಾರೆ. ಸಹಕಾರಿಯಲ್ಲಿರುವ ಪಿಗ್ಮಿ ಸಂಗ್ರಹಿಸಿದ್ದ ಹಣ ಮತ್ತು ಅಲ್ಲಿಯೇ ಒಂದು ಟೇಬಲ್ ಡ್ರಾದಲ್ಲಿದ್ದ 94 ಸಾವಿರ ರೂ.ಗಳನ್ನು ಬಿಟ್ಟು ಹೋಗಿದ್ದು, ಸಹಕಾರಿ ಸಂಸ್ಥೆಯ ಒಳಗೆ ಮಾಡಲಾಗಿರುವ ಲಾಕರ್‍ನ್ನು ಮುರಿದು ಲಾಕರ್‍ನಲ್ಲಿದ್ದ ಬಂಗಾರ ಮತ್ತು ನಗದು ಕಳ್ಳತನವಾಗಿದೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ ವರಿಷ್ಠಾಧಿಕಾರಿ ರವೀಂದ್ರ ಗಡಾದ, ಸಿಪಿಐ ಎಂ.ಎಸ್.ನಾಯ್ಕರ, ಪಿಎಸ್‍ಐ ಸಂಗಮೇಶ ಹೊಸಮನಿ ಹಾಗೂ ಪಿಂಗರ್ ಪ್ರೀಂಟರ್ಸ್, ಶ್ವಾನದಳ ಸಮೇತ ಘಟನಾ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಆದರೂ ಕಳ್ಳತನ ಯಾರು ಮಾಡಿದ್ದಾರೆ ಎಂಬುದರ ಬಗ್ಗೆ ಯಾವುದೇ ಸುಳಿವು ದೊರಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
..

loading...