ಬೆಳಗಾವಿಗೆ ಆಗಮಿಸಿದ ಕೊರೋನಾ ಸಂಜೀವಿನಿ

0
8

ಬೆಳಗಾವಿಗೆ ಆಗಮಿಸಿದ ಕೊರೋನಾ ಸಂಜೀವಿನಿ

ಬೆಳಗಾವಿ

ಕೊರೋನಾಗೆ ಸಂಜೀವಿನಿಯಾಗಿರುವ ಕೋವ್ಯಾಕ್ಸಿನ್ ಲಸಿಕೆ ಬುಧವಾರ ಬೆಳಗಿನ ಜಾವ 3.10ರ ಸುಮಾರಿಗೆ ಪುಣೆಯಿಂದ ಪೊಲೀಸ್ ಬಿಗಿ ಭದ್ರತೆಯಲ್ಲಿ ಲಸಿಕೆ ತುಂಬಿದ್ದ ಟ್ರಕ್​ ಬೆಳಗಾವಿಗೆ ಆಗಮಿಸಿದೆ.

ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಟೋಲ್ ಗೇಟ್ ಮೂಲಕ ಎಂ.ಎಚ್. 04 ಜೆ.ಕೆ .1669 ಸಂಖ್ಯೆಯ ವಾಹನದಲ್ಲಿ ಕೋವಿಶೀಲ್ಡ್ ಕೊರೊನಾ ಲಸಿಕೆ ಗಡಿ ಪ್ರವೇಶ ಮಾಡಿದೆ.ಇನ್ನು ಮಹಾರಾಷ್ಟ್ರದ ಗಡಿವರೆಗೂ ಈ ವಾಹನಕ್ಕೆ ಪೊಲೀಸರಿಂದ ಭದ್ರತೆ ನೀಡಲಾಗಿತ್ತು. ಬಳಿಕ ಕರ್ನಾಟಕ ಪೊಲೀಸರಿಂದ ಲಸಿಕೆ ಸಾಗಾಟ ವಾಹನಕ್ಕೆ ಎಸ್ಕಾರ್ಟ್ ವ್ಯವಸ್ಥೆ ಮಾಡಲಾಗಿದೆ.

ಒಟ್ಟು 13 ಬಾಕ್ಸ್ ಗಳಲ್ಲಿ ಅಂದಾಜು 1.40 ಲಕ್ಷ ಕೋವಿಶೀಲ್ಡ್ ಲಸಿಕೆಗಳನ್ನು ಬೆಳಗಾವಿ ವಿಭಾಗಕ್ಕೆ ತರಲಾಗಿದೆ. ಅದನ್ನು ಬೆಳಗಾವಿಯ ವ್ಯಾಕ್ಸಿನ್ ಡಿಪೋ ದಲ್ಲಿ ಇರಿಸಲು ಸಕಲ‌ ವ್ಯವಸ್ಥೆ ಮಾಡಲಾಗಿದೆ.

loading...