ಬೆಳಗಾವಿಯ ಅಂತಾರಾಷ್ಟ್ರೀಯ ಪತಂಗೋತ್ಸವ ಭಾರತೀಯ ಸಂಸ್ಕೃತಿ ತೋರಿಸುತ್ತದೆ: ವಾಹಬ್

0
16

ಬೆಳಗಾವಿ

ಬೆಳಗಾವಿ ಪತಂಗೋತ್ಸವದಲ್ಲಿ ಎರಡನೇ ಬಾರಿ ಸ್ಪರ್ಧೆ ನಡೆಸುತ್ತಿದ್ದೇವೆ. ಭಾರತದಲ್ಲಿ ಹೊಸ‌ ಹೊಸ ವಿನ್ಯಾಸದೊಂದಿಗೆ ಪತಂಗಗಳನ್ನು ಹಾರಿಸುವುದರ ಜತೆಗೆ ಭಾರತೀಯ ಸಂಕೃತಿಯನ್ನು ಹೆಮ್ಮೆಯ ಪಡುವಂತಿದೆ ಎಂದು ಯು.ಕೆ ಸ್ಪರ್ಧಿ ವಾಹಬ್ ಹೇಳಿದರು.

ಶುಕ್ರವಾರ ಯಡಿಯೂರಪ್ಪ ಮಾರ್ಗದಲ್ಲಿನ‌‌‌ ಮಾಲಿನಿ ಕ್ರೀಡಾಂಗಣದಲ್ಲಿ 10ನೇ ಅಂತಾರಾಷ್ಟ್ರೀಯ ಪತಂಗೋತ್ಸವದ ಮಾಧ್ಯಮ ಕೇಂದ್ರ ಉದ್ಘಾಟನೆಯ ಬಳಿಕ ಪತಂಗೋತ್ಸವದಲ್ಲಿ ಭಾಗಿಯಾದ ಸ್ಪರ್ಧಿಗಳೊಂದಿಗೆ ಸವಾಂದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತೀಯ ಸಂಸ್ಕೃತಿಯನ್ನು ನಮ್ಮ ದೇಶದಲ್ಲಿ ತಿಳಿಸುವುದು ಬೆಳಗಾವಿ ಅಂತಾರಾಷ್ಟ್ರೀಯ ಪತಂಗೋತ್ಸವ ಸಹಕಾರಿಯಾಗಿದೆ. ದೇಶ ವಿದೇಶದ ಪತಂಗ ಪ್ರೀಯರು ಸಹೋದರತೆಯಿಂದ ಪಾಲ್ಗೊಂಡು ಜನರನ್ನು ಮನರಂಜಿಸುತ್ತಿರುವುದು ಶ್ಲಾಘನೀಯ ಎಂದರು.

ದೀಪಕ ವಾಡಾ ಮಾತನಾಡಿ, ಬೆಳಗಾವಿಯಲ್ಲಿ ಶಾಸಕ‌ ಅಭಯ ಪಾಟೀಲ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಪತಂಗೋತ್ಸವದಲ್ಲಿ ಪ್ರತಿ ವರ್ಷ ಭಾಗಿಯಾಗುತ್ತೇನೆ. ಪ್ರತಿ ವರ್ಷ ಹೊಸತನವನ್ನು ಬೆಳಗಾವಿಯಿಂದ ತೆಗೆದುಕೊಂಡು‌ ಹೋಗುತ್ತೇವೆ. ಹೊಸ‌‌ ಹೊಸ ಪತಂಗಗಳು ಡ್ರೈಗನ್, ಚೋಟಾ ಬಿಮ್ ಸೇರಿದಂತೆ ವಿವಿಧ ಬಗೆಯ ಪತಂಗಗಳು ಈ ಬಾರಿಯ ಪತಂಗೋತ್ಸವದಲ್ಲಿ ಸಾರ್ವಜನಿಕರನ್ನು ರಂಜಿಸಲಿದೆ ಎಂದರು.

ಶಾಸಕ ಅಭಯ ಪಾಟೀಲ, ಸಮಾಚಾ, ಆ್ಯಂಡ್ರಿಸ್, ಸುಹಾಸ್, ಪ್ರಸನ್ನ, ನಿತೇಶ, ವರುಣ‌ ಚಡ್ಡಾ, ಸಂದೇಶ ಕಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

loading...