ಬೆಳಗಾವಿ ಅಕ್ರಮಿತ ಕರ್ನಾಟಕ ಎಂದ ಮಹಾ ಸಿಎಂ ಠಾಕ್ರೆ

0
11

ಬೆಳಗಾವಿ
ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಳಗಾವಿಯಲ್ಲಿ ಜನಸೇವಕ ಸಮಾರೋಪ ಸಮಾವೇಶ ನಡೆಸಿ ಹೋದ ಸಂದರ್ಭದಲ್ಲಿಯೇ ಮಹಾರಾಷ್ಟç ಸಿಎಂ ಉದ್ದವ್ ಠಾಕ್ರೆ ಮತ್ತೇ ಗಡಿ ವಿವಾದವನ್ನು ಕೆದಕಿದ್ದಾರೆ.
ಬೆಳಗಾವಿ ಸೇರಿದಂತೆ ಕರ್ನಾಟಕದ ಹಲವು ಕರ್ನಾಟಕ ಅಕ್ರಮಿತ ಗಡಿ ಪ್ರದೇಶಗಳನ್ನು ವಿಲೀನಗೊಳಿಸಲು ಬದ್ದರಾಗಿರುವುದಾಗಿ ಉದ್ದಟನ ಮೆರೆದಿದ್ದಾರೆ. ಅಷ್ಟೆ ಅಲ್ಲದೆ ಬೆಳಗಾವಿ ಗಡಿ ಹೋರಾಟಗಾರರನ್ನು ಹುತಾತ್ಮರು ಎಂದು ಕರೆದು ಬಾಲ ಬಿಚ್ಚಿದ್ದಾರೆ.
1956ರ ಜನೇವರಿ 17 ರಂದು ನಡೆದ ಗಡಿ ಹೋರಾಟದಲ್ಲಿ ಕೆಲವರು ಪ್ರಾಣ ಕಳೆದುಕೊಂಡಿದ್ದರು. ಈ ದಿನವನ್ನು ಬೆಳಗಾವಿಯ ಮಹಾರಾಷ್ಟç ಏಕೀಕರಣ ಸಮಿತಿ ( ಎಂಇಎಸ್) ಹುತಾತ್ಮರ ದಿನ ಎಂದು ಆಚರಿಸುತ್ತದೆ. ಈ ಹಿನ್ನೆಲೆಯಲ್ಲಿ ಮಹಾ ಸಿಎಂ ಟ್ವೀಟರ್ ಖಾತೆಯ ಮೂಲಕ ಟ್ವೀಟ್ ಮಾಡಿರುವ ಠಾಕ್ರೆ, ಗಡಿ ವಿಚಾರವನ್ನು ಕೆದಕಿದ್ದಾರೆ.
ಕರ್ನಾಟಕ ಅಕ್ರಮಿತ ಮರಾಠಿ ಭಾಷಿಕ ಹಾಗೂ ಸಂಸ್ಕೃತಿಯ ಪ್ರದೇಶಗಳನ್ನು ಮಹಾರಾಷ್ಟçದಲ್ಲಿ ವಿಲೀನಗೊಳಿಸಲು ನಾವು ಬದ್ದರಾಗಿದ್ದೇವೆ. ಇದು ಗಡಿ ಹೋರಾಟದಲ್ಲಿ ಭಾಗಿಯಾಗಿ ಪ್ರಾಣಾರ್ಪಣೆ ಮಾಡಿದ ಹುತಾತ್ಮರಿಗೆ ಅರ್ಪಿಸುವ ನಿಜವಾದ ಶ್ರದ್ದಾಂಜಲಿ. ಇದಕ್ಕಾಗಿ ನಾವು ಒಗ್ಗಟ್ಟಾಗಿದ್ದೇವೆ ಎಂದು ಟ್ವೀಟರ್‌ನಲ್ಲಿ ಉದ್ದಟನ ಮೆರೆದು ಕನ್ನಡಿಗರನ್ನು ಕರಳಿಸುವಂತೆ ಮಾಡಿದೆ.
ಬೆಳಗಾವಿಯನ್ನು ಅಂದಿನ ಮೈಸೂರು ರಾಜ್ಯಕ್ಕೆ ಸೇರಿಸಿದ್ದನ್ನು ವಿರೋಧಿಸಿ ಎಂಇಎಸ್ ಕಾರ್ಯಕರ್ತರು 1956ರ ಜ.17 ರಂದು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ 5 ಎಂಇಎಸ್ ಕಾರ್ಯಕರ್ತರು ಸಾವನಪ್ಪಿದ್ದರು.
——————-
ಕರ್ನಾಟಕ ಅಕ್ರಮಿತ ಮರಾಠಿ ಭಾಷಿಕ ಹಾಗೂ ಸಂಸ್ಕೃತಿಯ ಪ್ರದೇಶಗಳನ್ನು ಮಹಾರಾಷ್ಟçದಲ್ಲಿ ವಿಲೀನಗೊಳಿಸಲು ನಾವು ಬದ್ದರಾಗಿದ್ದೇವೆ. ಇದು ಗಡಿ ಹೋರಾಟದಲ್ಲಿ ಭಾಗಿಯಾಗಿ ಪ್ರಾಣಾರ್ಪಣೆ ಮಾಡಿದ ಹುತಾತ್ಮರಿಗೆ ಅರ್ಪಿಸುವ ನಿಜವಾದ ಶೃದ್ದಾಂಜಲಿ.
ಉದ್ದವ ಠಾಕ್ರೆ, ಮಹಾರಾಷ್ಟç ಸಿಎಂ

loading...