ಬೆಳಗಾವಿ ಆರ್‌ಪಿಎಪ್‌ದಿಂದ ಅನ್ನ ಸಮರ್ಪಣೆ

0
15

ಬೆಳಗಾವಿ ಆರ್‌ಪಿಎಪ್‌ದಿಂದ ಅನ್ನ ಸಮರ್ಪಣೆ
ಬೆಳಗಾವಿ : ಬೆಳಗಾವಿ, ಘಟಪ್ರಭಾ, ಲೊಂಡಾ, ರೈಲ್ವೆ ವಲಯದ ವತಿಯಿಂದ ಆರ್‌ಪಿಎಪ್ ಸಿಬ್ಬಂದಿಗಳು ವೃದ್ಧರಿಗೆ, ನಿರ್ಗತಿಕರಿಗೆ ಅನ್ನ ಸಮರ್ಪಣೆ ಮಾಡುವ ರೈಲ್ವೆ ರಕ್ಷಣಾ ಪಡೆ ಸಾಮಾಜಿಕ ಕಳಕಳಿ ತೋರಿದೆ.
ಮಹಾಮಾರಿ ಕೊರೋನಾ ವಿರುದ್ಧ ಹೋರಾಡಲು ರೈಲ್ವೆ ಇಲಾಖೆ ಸನ್ನದ್ಧವಾಗಿದ್ದು ಏ.೧೪ ವರೆಗೆ ರೈಲ್ವೆ ವ್ಯಾಪ್ತಿಯಲ್ಲಿರುವ ಜನರಿಗೆ ಮುಂಜಾನೆ ಉಪಹಾರ, ಮದ್ಯಾಹ್ನ ಊಟ ಪೂರೈಸಲು ಪ್ರಯತ್ನದಲ್ಲಿದ್ದಾರೆ. ಲಾಕ್‌ಡೌನ್ ಆದೇಶವಾದ ದಿನದಿಂದ ಇಲ್ಲಿವರೆಗೆ ಸಾವಿರಾರೂ ಜನರಿಗೆ ರೈಲ್ವೆ ರೈಲ್ವೆ ರಕ್ಷಣಾ ದಳ ಅಧಿಕಾರಿ, ಸಿಬ್ಬಂದಿಗಳು ಸದ್ದಿಲ್ಲದೇ ಅನ್ನ ದಾಸೋಹ ಮಾಡಿದ್ದಾರೆ, ಇವರ ಸಾಮಾಜಿಕ ಕಾರ್ಯಕ್ಕೆ ಬೆಳಗಾವಿ ಆಯುಕ್ತರು ಶ್ಲಾಘಿಸಿ, ಅಭಿನಂದನೆ ಸಲ್ಲಿಸಿದ್ದಾರೆ.
ರೈಲ್ವೆ ನಿರೀಕ್ಷಕರು ದಿನೇಶಕುಮಾರ, ರೈಲ್ವೆ ಸಹಾಯಕ ಉಪನಿರೀಕ್ಷಕರು ಸಂಗಮೇಶ ಕಲಬುರಗಿ, ಘಟಪ್ರಭಾ ಎಎಸ್‌ಐ ವಾಲದವಾರ್ ಹಾಗೂ ಆರ್ ಪಿಎಪ್ ಸಿಬ್ಬಂದಿ ಇತರರು ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ.
೦೨
************-

loading...