ಬೆಳಗಾವಿ ಉಸ್ತುವಾರಿ ಸ್ಥಾನಕ್ಕೆ ಭಾರೀ ಪೈಪೋಟಿ…!

0
23

 

 

ಬೆಳಗಾವಿ

ಅಶ್ಲೀಲ ವಿಡಿಯೋ ಎನ್ನಲಾಗುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶಾಸಕ ರಮೇಶ ಜಾರಕಿಹೊಳಿ ಬದಲು ಈಗ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕೆ ಓರ್ವ ಡಿಸಿಎಂ ಸೇರಿ ನಾಲ್ವರು ಸಚಿವರ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ.

ಹೌದು. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಮೇಶ ಜಾರಕಿಹೊಳಿ‌‌ ಬೆನ್ನಲೆ ಜಿಲ್ಲಾ ಉಸ್ತುವಾರಿ ‌ಸಚಿವರಾಗಲು ಬೆಳಗಾವಿಯ ಪ್ರಭಾವಿ ನಾಲ್ವರು‌ ಸಚಿವರಲ್ಲಿ‌‌‌ ಭಾರೀ ಪೈಪೋಟಿ ಏರ್ಪಟ್ಟಿದೆ. ರಮೇಶ ಜಾರಕಿಹೊಳಿ ಪ್ರಕರಣದಲ್ಲಿ ಇನ್ನೂ ಸ್ಪಷ್ಟವಾದ ಮಾಹಿತಿ ಹೊರ ಬಂದಿಲ್ಲ. ಆದರೂ ಬೆಳಗಾವಿ ‌ಜಿಲ್ಲಾ ಉಸ್ತುವಾರಿಯಾಗಲು ಬೆಳಗಾವಿಯ ನಾಲ್ವರು ಸಚಿವರು ಉಸ್ತುವಾರಿ ‌ಸ್ಥಾನದ‌ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜ್ಯ ಬಿಜೆಪಿಯ ಸರಕಾರದಲ್ಲಿ ಬೆಂಗಳೂರು ಹೊರತು ಪಡೆಸಿದರೆ ಬೆಳಗಾವಿ ಜಿಲ್ಲೆಗೆ ಹಚ್ಚಿನ ಸಚಿವ ಸ್ಥಾನ ದೊರಕಿರುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಬೆಂಗಳೂರಿನ ವಿಚಾರದಲ್ಲಿ ಒಬ್ಬ ಡಿಸಿಎಂ ಸೇರಿದಂತೆ 8 ಸಚಿವ ಸ್ಥಾನ ದೊರಕಿರುವುದು ಬಿಟ್ಟರೆ ಬೆಳಗಾವಿಯಲ್ಲಿ ಐವರು ಸಚಿವರಿದ್ದಾರೆ. ಈಗ ನಾಲ್ವರು ಮಾತ್ರ ಉಳಿದುಕೊಂಡಿದ್ದಾರೆ.

ಸದ್ಯ ಬೆಳಗಾವಿಯಲ್ಲಿ ಒಬ್ಬ ಡಿಸಿಎಂ ಸೇರಿದಂತೆ ನಾಲ್ವರು ಸಚಿವರು ಬೆಳಗಾವಿಯಲ್ಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ‌ ಜೊಲ್ಲೆ, ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವ ಶ್ರೀಮಂತ ಪಾಟೀಲ, ಆಹಾರ ಮತ್ತು ನಾಗರಿಕ ಸಚಿವ ಉಮೇಶ ಕತ್ತಿ ಬೆಳಗಾವಿಯಿಂದ ರಾಜ್ಯ ಬಿಜೆಪಿ ಸರಕಾರದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಇಂದು ಸಚಿವ ಸ್ಥಾನಕ್ಕೆ ರಾಜೀನಾಮೆ ‌ನೀಡಿದ್ದಾರೆ. ಸದ್ಯ ಈ ನಾಲ್ವರು ಸಚಿವರಲ್ಲಿ ಬೆಳಗಾವಿ ‌ಜಿಲ್ಲಾ ಉಸ್ತುವಾರಿ ಸಚಿವರಾಗಲು ತೀವ್ರ ಪೈಪೋಟಿ ‌ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಸಮಗ್ರ ‌ತನಿಖೆಯಾಗಬೇಕು. ಪಕ್ಷಕ್ಕೆ ಮುಜುಗರವಾಗಬಾರದೆಂದು ಗೋಕಾಕ‌ ಶಾಸಕ‌ ರಮೇಶ ಜಾರಕಿಹೊಳಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ‌ನೀಡಿದ್ದಾರೆ. ಆದರೆ ಈಗ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕಾಗಿ ನಾಲ್ವರು ಸಚಿವರು ರಾಜ್ಯ ನಾಯಕರ ಮೂಲಕ ಹೈಕಮಾಂಡ್ ಗೆ ಜಿಲ್ಲಾ‌‌ ಉಸ್ತುವಾರಿ ಸ್ಥಾನ ನಮಗೆ ನೀಡಬೇಕೆಂದು ತೆರೆ ಮರೆಯಲ್ಲಿ ಕಸರತ್ತು ನಡೆಸಿದ್ದಾರೆ ಎನ್ನಲಾಗುತ್ತಿದೆ.

 

 

loading...