ಬೆಳಗಾವಿ, ಚಿಕ್ಕೋಡಿ, ಗೋಕಾಕ ಜಿಲ್ಲೆಯಾಗಲಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಜಾರಕಿಹೊಳಿ

0
7

ಬೆಳಗಾವಿ
ನೂತನವಾಗಿ ಘೋಷಣೆಯಾದ ವಿಜಯನಗರ ಜಿಲ್ಲೆಯ ಕಿಚ್ಚು ರಾಜ್ಯಾದ್ಯಂತ ಪಸರಿಸಿದ್ದು, ಹಲವು ವರ್ಷಗಳಿಂದ ಹೋರಾಟ ಮಾಡಿದರು ಕುಂದಾನಗರಿ ಬೆಳಗಾವಿಯ ಗೋಕಾಕ, ಚಿಕ್ಕೋಡಿ, ಪ್ರತ್ಯೇಕ ಜಿಲ್ಲೆಗಳನ್ನು ವಿಭಜಿಸದ ಸರಕಾರದ ವಿರುದ್ಧ ಈ ಭಾಗದ ಹಲವು ಹೋರಾಟಗಾರರು ಹಾಗೂ ಶಾಸಕರು ಆಕ್ರೋಶಗೊಂಡಿದ್ದಾರೆ. ಅದರಲ್ಲಿ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಯವರು ಚಿಕ್ಕೋಡಿ ಮತ್ತು ಗೋಕಾಕ್ ಎರಡೂ ಜಿಲ್ಲೆ ರಚನೆ ಬಗ್ಗೆ ಸರಕಾರಕ್ಕೆ ಒತ್ತಾಯ ಮಾಡಿದ್ದಾರೆ.
ಗುರುವಾರ ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿಯ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆ ಆಗಬೇಕು ಎಂದು ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದೇವೆ, ೧೮ ಲೋಕಸಭಾ ಮತಕ್ಷೇತ್ರಗಳನ್ನು ಹೊಂದಿದ್ದ, ಧಾರವಾಡ ಜಿಲ್ಲೆ ಮೂರು ಜಿಲ್ಲೆಗಳಾಗಿ ವಿಭಜನೆ ಆಯ್ತು ಬೆಳಗಾವಿ ಇನ್ನೂ ವಿಭಜನೆ ಆಗಿಲ್ಲ ಎಂದು ಹೇಳಿದರು.
ಬೆಳಗಾವಿ ಜಿಲ್ಲೆ ಭೌಗೋಳಿಕವಾಗಿ ರಾಜ್ಯದಲ್ಲೇ ಅತೀ ದೊಡ್ಡ ಜಿಲ್ಲೆಯಾಗಿದೆ, ೧೮ ವಿಧಾನಸಭಾ ಕ್ಷೇತ್ರಗಳನ್ನು, ೧೪ ತಾಲೂಕುಗಳನ್ನು ಹೊಂದಿರುವ ಈ ಬೃಹತ್ ಜಿಲ್ಲೆಯನ್ನು ವಿಭಜನೆ ಮಾಡಬೇಕು ಎಂದು ತಿಳಿಸಿದರು.
ಗಡಿಭಾಗದಲ್ಲಿರುವ ಬೆಳಗಾವಿ ಜಿಲ್ಲೆಯಲ್ಲಿ ಗಡಿ ವಿವಾದ ಇದೆ. ಈ ವಿವಾದ ಬಗೆ ಹರಿಯುವ ವರೆಗೂ ಬೆಳಗಾವಿ ಜಿಲ್ಲೆ ವಿಭಜನೆ ಬೇಡ ಎಂದು ಕನ್ನಡಪರ ಸಂಘಟನೆಗಳು ಹೋರಾಟಗಳನ್ನು ಮಾಡಿ ಒತ್ತಾಯ ಮಾಡಿದ್ದರಿಂದಲೇ ಜೆ ಹೆಚ್ ಪಟೇಲರು ಮುಖ್ಯಮಂತ್ರಿ ಆಗಿದ್ದಾಗ ಹಲವಾರು ಜಿಲ್ಲೆಗಳನ್ನು ವಿಭಜಿಸಿ ಬೆಳಗಾವಿಯನ್ನು ಕೈಬಿಟ್ಟಿದ್ದರು.
ಗಡಿ ವಿವಾದ ಈಗ ಇಲ್ಲವೇ ಇಲ್ಲ, ಬೆಳಗಾವಿ ಜಿಲ್ಲೆಯ ವ್ಯಾಪ್ತಿ ದೊಡ್ಡದಾಗಿದ್ದು, ಅಭಿವೃದ್ಧಿಯ ಹಿತದೃಷ್ಟಿಯಿಂದ ಬೆಳಗಾವಿ ಜಿಲ್ಲೆಯನ್ನು ಈಗ ವಿಭಜನೆ ಮಾಡಲೇಬೇಕು ಎಂದು ಅವರು ಒತ್ತಾಯಿಸಿದ ಅವರು, ಸರಕಾರಕ್ಕೆ ಬೆಳಗಾವಿ ಜನರ ಕೂಗು ಕೇಳಿಸುತ್ತಿಲ್ಲ ಅನಿಸುತ್ತದೆ. ಬೆಳಗಾವಿ ಜಿಲ್ಲೆ ವಿಭಜನೆ ಕುರಿತು ಹಲವು ಹೋರಾಟಗಳು ನಡೆದಿವೆ ಆದರೆ, ಯಾವ ಸರಕಾರವು ಈವರೆಗೆ ಯಾವ ಹೋರಾಟಕ್ಕೂ ಸ್ಪಂದನೆ ನೀಡದೆ ಬೆಳಗಾವಿ ನಿರ್ಲಕ್ಷಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
———————–
ಲೋಕಸಭೆಗೆ ಆಸಕ್ತಿ ಇಲ್ಲ
ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಸ್ಪರ್ಧಿಸಲು ನನಗೆ ಆಸಕ್ತಿ ಇಲ್ಲ ಅಂತಾ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು. ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕುರಿತು ಮುಂದಿನ ತಿಂಗಳಿನ ಮೊದಲ ವಾರದಲ್ಲಿ ಎರಡನೇ ಸುತ್ತಿನ ಸಭೆ ನಡೆಸಲಾಗುತ್ತದೆ. ಈ ವೇಳೆ ಅಭ್ಯರ್ಥಿ ಆಯ್ಕೆ ಮಾಡಲಾಗುವುದು ಎಂದರು.
ಕಾAಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳ ಕೊರತೆ ಇಲ್ಲ. ಮುಂದಿನ ದಿನಗಳಲ್ಲಿ ಸಭೆ ನಡೆಸಿ, ಮೂವರು ಅಭ್ಯರ್ಥಿಗಳ ಹೆಸರು ಶಿಪಾರಸ್ಸು ಮಾಡಬೇಕು. ಸಮರ್ಥ ಅಭ್ಯರ್ಥಿ ನೇಮಕ ಮಾಡಲಾಗುವುದೆಂದರು.
ಇನ್ನೂ ಉಪಚುನಾವಣೆಗೆ ಸ್ಪರ್ಥಿಸುವ ವಿಚಾರವಾಗಿ ಮಾತನಾಡಿ, ವಯಕ್ತಿವಾಗಿ ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ಇಲ್ಲ. ರಾಜ್ಯ, ಜಿಲ್ಲೆಯಲ್ಲಿಯೇ ಇನ್ನು ತುಂಬಾ ಕೆಲಸ ಮಾಡಬೇಕಾಗಿದೆ. ಆದರೆ ಉಪಚುನಾವಣೆಗೆ ನನ್ನ ಹೆಸರು ಕೇಳಿ ಬಂದಿದೆ ಎಂದು ತಿಳಿಸಿದರು.ಕರ್ನಾಟಕ ಬಂದ್ ಗೆ ಕಾಂಗ್ರೆಸ್ ಬೆಂಬಲ ಇಲ್ಲ. ಸಮುದಾಯ ಹಾಗೂ ನಿಗಮ ಮಂಡಳಗಳಿಗೆ ಬೋರ್ಡ್ ಮಾಡಿರುವುದರಕ್ಕೆ ವಿರೋಧ ಇಲ್ಲ. ಅದನ್ನು ಬಜೆಟ್ ನಲ್ಲಿ ಘೋಷಣೆ ಮಾಡಬೇಕಿತ್ತು ಎಂದು ಹೇಳಿದರು.
ಧಾರವಾಡದಲ್ಲಿಯೂ ಮೊದಲು ೧೮ ವಿಧಾನಸಭಾ ಕ್ಷೇತ್ರಗಳಿದ್ದವು. ಆಗ ಧಾರವಾಡ ಜಿಲ್ಲೆ ವಿಭಜನೆ ಮಾಡಲಾಗಿಯಿತು. ಅದೇ ರೀತಿ ಬೆಳಗಾವಿ ಜಿಲ್ಲೆಯನ್ನೂ ಸಹ ಗೋಕಾಕ್, ಚಿಕ್ಕೋಡಿ, ಬೆಳಗಾವಿ ಮೂರು ಜಿಲ್ಲೆಯಾಗಲೇ ಬೇಕು. ಈ ಬಗ್ಗೆ ಮೊದಲಿಂದಲೂ ಜಿಲ್ಲೆಯ ವಿಭಜನೆಗೆ ಒತ್ತಾಯಿಸುತ್ತಿದ್ದೇವೆ ಎಂದರು.
ಬೆಳಗಾವಿ ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ನಗರಾಧ್ಯಕ್ಷ ರಾಜು ಸೇಠ್ ಇದ್ದರು.

loading...