ಬೆಳಗಾವಿ ನಗರದ ಅಪರಾಧ (ಕ್ರೈಮ್) ಸುದ್ದಿ

0
39


ಚೂರಿ ಇರಿತಗೊಂಡ ವ್ಯಕ್ತಿ ಜಿಲ್ಲಾ ಆಸ್ಪತ್ರೆಗೆ ದಾಖಲು

ಬೆಳಗಾವಿ
ಚೂರಿ ಇರಿತದಿಂದ ಗಾಯಗೊಂಡಿದ್ದ ವ್ಯಕ್ತಿಯೋರ್ವ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ಘಟನೆ ಶುಕ್ರವಾರ ನಡೆದಿದೆ.
ಇಲ್ಲಿನ ವೈಭವನಗರದ ಇಮ್ರಾನ್ ಇಕ್ಬಾಲ್ ಪಿರ್ಜಾದೆ (30) ಚೂರಿ ಇರಿತಕ್ಕೊಳಗಾದವ. ಶುಕ್ರವಾರ ಮಧ್ಯಾಹ್ನ 1.30ರ ಸುಮಾರಿಗೆ ಮಾರ್ಕೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಖಂಜರಗಲ್ಲಿಯಲ್ಲಿ ನಡೆದಿದೆ. ಚೂರಿ ಇರಿತದಿಂದ ಗಾಯಗೊಂಡಿದ್ದ ಇಮ್ರಾನ್‌ನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚೂರಿ ಇರಿತಕ್ಕೆ ಕಾರಣ ತಿಳಿದು ಬಂದಿಲ್ಲ.
———-
ರೈಲ್ವೆ ಕಳ್ಳತನ ಬೇಧಿಸಿದ ರೈಲ್ವೆ ಪೊಲೀಸರು

ಬೆಳಗಾವಿ
ರೈಲಿನಲ್ಲಿ ಬ್ಯಾಗ ಕಳ್ಳತನ ಪ್ರಕರಣ ಬೇಧಿಸಿರುವ ರೈಲ್ವೆ ಪೊಲೀಸರು ಶುಕ್ರವಾರ ಓರ್ವ ಕಳ್ಳನನ್ನು ಬಂಧಿಸಿ, ಆತನಿಂದ 25 ಸಾವಿರ ಮೌಲ್ಯದ ಸ್ವತ್ತನ್ನು ವಶಕ್ಕೆ ಪಡದುಕೊಂಡಿದ್ದಾರೆ.
ಹುಬ್ಬಳ್ಳಿಯ ಮಂಟೂರು ರಸ್ತೆಯ ಶೀಲಾ ಕಾಲೋನಿಯ ಯೋಹನಕುಮಾರ ಉರ್ಫ್ ಕಟ್ ಪ್ರಾಂಚೀಸ್ ಕುಂದುರ್ತಿ (16) ಬಂಧಿತ. ಸೆ. 5 ರಂದು ಬೆಳಗಾವಿಯ ಅಮನ ನಗರದ ಮಹ್ಮದಇಸ್ಮಾಯಿಲ್ ಕುತ್ಬುದ್ದೀನ್ ಹವಾಲ್ದಾರ ಎಂಬುವರು ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ವೇಳೆ ಮೊಬೈಲ್ ಹಾಗೂ ೫ ಗ್ರಾಂ ಬಂಗಾರದ ಆಭರಣ ಇರುವ ಬ್ಯಾಗ ಕಳ್ಳತನ ಮಾಡಿ ಪರಾರಿಯಾಗಿದ್ದನು. ಈ ಕುರಿತು ಮಹ್ಮದ ಇಸ್ಮಾಯಿಲ್ ದೂರು ದಾಖಲಿಸಿದ್ದರು. ಈ ದೂರಿನನ್ವಯ ತನಿಖೆ ಕೈಕೊಂಡ ಪೊಲೀಸರು ಕಳ್ಳತನ ಮಾಡಿದ ವ್ಯಕ್ತಿಯನ್ನು ಬಂಧಿಸಿ, ಮೊಬೈಲ್, 5 ಗ್ರಾಂ ಬಂಗಾರ ಸೇರಿದಂತೆ ಒಟ್ಟು 25ಸಾವಿರ ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಬೆಳಗಾಗಿ ರೇಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
—-
ರೈಲಿನಲ್ಲಿ ಕಳ್ಳತನ ಮಾಡಿದ ವ್ಯಕ್ತ ಬಂಧನ

ಬೆಳಗಾವಿ

ಚಲಿಸುತ್ತಿದ್ದ ರೈಲಿನಲ್ಲಿ ಮೊಬೈಲ್ ಕಳ್ಳತನ ಮಾಡಿದ ವ್ಯಕ್ತಿಯನ್ನು ಬಂಧಿಸಿ, ಆತನಿಂದ 6ಸಾವಿರ ಮೌಲ್ಯದ ಮೊಬೈಲ್ ವಶಕ್ಕೆ ಪಡೆದುಕೊಂಡ ಘಟನೆ ಗುರುವಾರ ನಡೆದಿದೆ.
ರಾಯಬಾಗ ತಾಲೂಕಿನ ಪಾಲಭಾಂವಿ ಗ್ರಾಮದ ಭರಮಪ್ಪ ಶಂಕರ ಮುನವಳ್ಳಿ (22) ಬಂಧಿತ. ಬಾಗಲಕೊಟೆ ಜಿಲ್ಲೆಯ ಬೀಳಗಿ ತಾಲೂಕಿನ ಚಿಕ್ಕಲಕುಂದಿ ಗ್ರಾಮದ ಪ್ರಶಾಂತ ಅಶೋಕ ದೊಡಮನಿ ಎಂಬುವರು 2016 ಜುಲೈ 27ರಂದು ಹರಿಪ್ರೀಯಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಮೊಬೈಲ ಕಳ್ಳತನವಾಗಿತ್ತು. ಈ ಕುರಿತು ದೂರು ದಾಖಲಿಸಿದ್ದರು. ಈ ದೂರಿನನ್ವಯ ತನಿಖೆ ಕೈಗೊಂಡ ಪೊಲೀಸರು ಕಳ್ಳನನ್ನು ಬಂಧಿಸಿ, ಆತನಿಂದ ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಬೆಳಗಾವಿ ರೈಲಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...