ಬೆಳಗಾವಿ ಪೋರಿಯರ ಸಾಧನೆಗೆ ಡಾ.ಕೋರೆ ಅಭಿನಂದನೆ

0
14

ಬೆಳಗಾವಿ: ನವದೆಹಲಿಯಲ್ಲಿ ಜುಲೈ ೭ ಮತ್ತು ೮ ರಂದು ಜರುಗಿದ ಪುರುಷರ ಹಾಗೂ ಮಹಿಳೆಯರ ಕಾಮನ್‌ವೆಲ್ತ್ ಜುಡೋ ಚಾಂಪಿಯನ್‌ಶಿಫ್ ಹಾಗೂ ಏಶಿಯನ್ ಜುಡೋ ಚಾಂಪಿಯನ್‌ಶಿಫ್ ಪಂದ್ಯಾಳಿಯಲ್ಲಿ ಸಾಧನೆಗೈದ ಮಲ್ಲಪ್ರಭಾ ಜಾಧವ ಹಾಗೂ ವಸುಂಧರಾ ಅವರಿಗೆ ರಾಜ್ಯ ಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಅಭಿನಂದಿಸಿದರು.
ಬೆಳಗಾವಿಯ ಮಲ್ಲಪ್ರಭಾ ಜಾಧವ ೪೪ ಕೆಜಿಯಲ್ಲಿ ಬೆಳ್ಳಿಯ ಪದಕವನ್ನು ಹಾಗೂ ವಸುಂಧರಾ ೬೩ ಕೆಜಿಯಲ್ಲಿ ಚಿನ್ನದ ಪದಕವನ್ನು ಪಡೆದು ಸಾಧನೆಯನ್ನು ಗೈದಿದ್ದಾರೆ.
ಸೆಪ್ಟೆಂಬರ್ ೨೫ರಿಂದ ೨೯ ರವರೆಗೆ ಲಂಡನ್‌ನಲಿ, ಹಾಗೂ ಅಗಸ್ಟ್ ೧ ೨೦೧೯ ರಿಂದ ೫ ಅಗಸ್ಟ್ ೨೦೧೯ರವರೆಗೆ ಚೀನಾ ತೈಪೆಯಲ್ಲಿ ಜರುಗಲಿರುವ ಜುಡೋ ಪಂದ್ಯವಳಿಗಳಿಗೆ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ತರಬೇತುದಾರ ರವಿ ಎಂ., ಸಂಜಯ ನಾಯಕ, ದೈಹಿಕ ನಿರ್ದೇಶಕ ಸಿ.ರಾಮರಾವ್, ಬಸವರಾಜ ಭೂಸಣ್ಣನವರ ಅವರು ಉಪಸ್ಥಿತರಿದ್ದರು.

loading...