ಬೇಕಾಬಿಟ್ಟಿ ವಾಹನ ನಿಲುಗಡೆಗೆ ಕಡಿವಾಣ ಹಾಕಲು ಮನವಿ

0
3

ಬೇಕಾಬಿಟ್ಟಿ ವಾಹನ ನಿಲುಗಡೆಗೆ ಕಡಿವಾಣ ಹಾಕಲು ಮನವಿ

ಕನ್ನಡಮ್ಮ ಸುದ್ದಿ-ಗೋಕಾಕ: ನಗರದಲ್ಲಿ ಬೇಕಾಬಿಟ್ಟಿಯಾಗಿ ವಾಹನ ನಿಲುಗಡೆಗೊಳಿಸುವುದನ್ನು ತಡೆಗಟ್ಟುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಕಾರ್ಯಕರ್ತರು ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಮಂಗಳವಾರದಂದು ಮುಂಜಾನೆ ನಗರದ ಡಿ.ವಾಯ್.ಎಸ್.ಪಿ. ಕಚೇರಿ ಎದುರು ಸೇರಿದ ಕರವೇ ಕಾರ್ಯಕರ್ತರು, ಟ್ರಾಫಿಕ್ ತಡೆಗಟ್ಟುವಲ್ಲಿ ವಿಫಲವಾಗುತ್ತಿರುವ ಪೊಲೀಸ್ ಇಲಾಖೆಯ ಕ್ರಮವನ್ನು ಖಂಡಿಸಿ ಪಿ.ಎಸ್.ಐ. ಶ್ರಿÃಶೈಲ್ ಬ್ಯಾಕೂಡ ಮುಖಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಅರ್ಪಿಸಿದರು.ಇದಕ್ಕೆ ತಪ್ಪಿದಲ್ಲಿ ಮುಂಬರುವ ದಿನಗಳಲ್ಲಿ ಜಿಲ್ಲಾ ವರಿಷ್ಠಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಲಾಗುವುದೆಂದು ಈ ಮನವಿ ಮೂಲಕ ಎಚ್ಚರಿಸಿದೆ.
ಪ್ರತಿಭಟನೆಯಲ್ಲಿ ಕೃಷ್ಣಾ ಖಾನಪ್ಪನವರ, ಸಾಧಿಕ್ ಹಲ್ಯಾಳ, ದೀಪಕ್ ಹಂಜಿ, ಹನೀಪಸಾಬ ಸನದಿ, ರಮೇಶ ಕಮತಿ, ರೆಹಮಾನ ಮೊಕಾಶಿ, ಮುಗುಟ ಪೈಲವಾನ, ನಿಜಾಮ ನದಾಫ್, ಸುರೇಶ ಪತ್ತಾರ, ಮಲ್ಲು ಸಂಪಗಾರ, ನಿಯಾಜ್ ಪಟೇಲ್, ಮಹಾದೇವ ಮಕ್ಕಳಗೇರ, ದುರ್ಗಪ್ಪ ಗಾಡಿವಡ್ಡರ, ಬಸು ಹುಲಕುಂದ, ರಾಜೇಶ್ವರಿ ವಡೇರ, ಶೆಟ್ಟೆಪ್ಪ ಗಾಡಿವಡ್ಡರ, ದಸ್ತಗೀರ ಮುಲ್ಲಾ, ಫಕೀರಪ್ಪ ಗಣಾಚಾರಿ, ಬಸು ಗಾಡಿವಡ್ಡರ, ಅಮೀರಖಾನ ಜಗದಾಳೆ, ಚನ್ನಪ್ಪ ಬಂಡಿವಡ್ಡರ, ಶಿವಾನಂದ ತಹಶೀಲ್ದಾರ, ಶಿವಾನಂದ ಬಂಡಿವಡ್ಡರ, ಅಜಿತ್ ಮಲ್ಲಾಪೂರೆ, ಶಂಕರ ಬಂಡಿವಡ್ಡರ, ಹನಮಂತ ಕಮತೆ, ಯಲ್ಲಪ್ಪ ಧರ್ಮಟ್ಟಿ, ಮಹಾಂತೇಶ ಮರಿಕಟ್ಟಿ, ಅಪ್ಪಯ್ಯ ತಿಗಡಿ, ವಿಠ್ಠಲ ಕಮತಿ, ಸಂತು ಕೋಲಕಾರ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.

loading...