ಬೇಸ್ ಮೆಂಟ್ ನಲ್ಲಿರುವ ವಾಣಿಜ್ಯ ಮಳಿಗೆಗಳಿಗೆ ಪಾಲಿಕೆಯಿಂದ ಶಾಕ್…!

0
59

ಬೆಳಗಾವಿ

ನಗರದಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಿರುವ ಬಹುಮಡಿ ಕಟ್ಟಡಗಳು ಹಾಗೂ ಪಾಲಿಕೆಯಿಂದ ಬೇಸ್ ಮೆಂಟ್ ಗೆ ಜಾಗೆ ಬಿಡುವುದಾಗಿ ಹೇಳಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿದವರಿಗೆ ಈಗ ನಡುಕ ಶುರುವಾಗಿದೆ.

ಎರಡನೇ ರಾಜ್ಯಧಾನಿ,ಸ್ಮಾಟ್೯ಸಿಟಿ ಎಂದು ಹೆಗ್ಗಳಿಕೆ ಪಾತ್ರವಗಿರುವ ಬೆಳಗಾವಿ ನಗರದಲ್ಲಿ ತಲೆ ಎತ್ತಿ ನಿಂತಿರುವ ಅಕ್ರಮ ಬಹುಮಡಿ ಕಟ್ಟಡ ಹಾಗೂ ಬೇಸ್ ಮೆಂಟ್ ನಿರ್ಮಿಸದೆ ಪಾಲಿಕೆಗೆ ತೆರಿಗೆ ವಂಚಿಸುತ್ತಿರುವವರಿಗೆ ಪಾಲಿಕೆಯಿಂದ ನೋಟಿಸ್ ನೀಡಲಾಗುತ್ತಿದೆ‌.

ಇದಕ್ಕೆಲ್ಲ ಕಾರಣ ಬೇಸ್‌ಮೆಂಟ್ ಕಾರ್ಯಾಚರಣೆ ಆಗದಿರುವುದು. ಬಹುದೊಡ್ಡ ಕಟ್ಟಡ ಹಾಗೂ ಮಳಿಗೆಗಳಲ್ಲಿ ಅಂಗಡಿ-ಮುಗ್ಗಟ್ಟು ಮೇಲೆದಿದ್ದೆ. ಮಹಾನಗರ ಪಾಲಿಕೆಯೇ ಇವುಗಳಿಗೆ ಅನುಮತಿ ನೀಡಿದ್ದರೆ ಇಂಥ ಅಕ್ರಮಕ್ಕೆ ಕಡಿವಾಣ ಹಾಕಬಹುದಾಗಿತ್ತು. ಆದರೆ ಅಧಿಕಾರಿಗಳ ಕೃಪಾಕಟಾಕ್ಷದಿಂದ ಬೇಸ್‌ಮೆಂಟ್ ವ್ಯಾಪಾರಿಗಳು ನಿರಾತಂಕವಾಗಿ ವ್ಯಾಪಾರ ನಡೆಸುತ್ತಿದ್ದಾರೆ.

ಬೆಳಗಾವಿ ನಗರದ ಮಾರುಕಟ್ಟೆ ಪ್ರದೇಶಗಳ ಬಹುತೇಕ ಬೇಸ್‌ಮೆಂಟ್‌ಗಳೆಲ್ಲ ವ್ಯಾಪಾರ ವಹಿವಾಟಿನಿಂದ ತುಂಬಿ ತುಳುಕುತ್ತಿವೆ. ಆದರೆ ವಾಹನ ನಿಲುಗಡೆ ಮಾತ್ರ ಅವಕಾಶವಿಲ್ಲದಿರುವುದು ಸಂಚಾರ ದಟ್ಟಣೆ ಹೆಚ್ಚಾಗಲು ಮೂಲ ಕಾರಣವಾಗಿವೆ.

ಬೇಸ್‌ಮೆಂಟ್ ವ್ಯವಹಾರ ಒಂದು ದೊಡ್ಡ ಲಾಬಿಯಾಗಿದ್ದು, ಇದನ್ನು ತೆರವುಗೊಳಿಸುವುದು ಅಸಾಧ್ಯ ಎನ್ನುವ ಮಟ್ಟಿಗೆ ಇಲ್ಲೊಂದು ವ್ಯೂಹ ರಚನೆಯಾಗಿದೆ. ಈ ವ್ಯೂಹ ಅಧಿಕಾರಿಗಳನ್ನು ಖರೀದಿಸುತ್ತಿದೆ. ಏಕೆಂದರೆ ಬೇಸ್‌ಮೆಂಟ್ ವ್ಯವಹಾರ ಲಾಭದಾಯಕವಾಗಿ ಕಂಗೊಳಿಸುತ್ತಿದೆ.

ಅಕ್ರಮವಾಗಿ ಬೇಸ್ ಮೆಂಟ್ ನಿರ್ಮಿಸದ ಕಟ್ಟಡಗಳಿಗೆ ಪಾಲಿಕೆಯಿಂದ ನೋಟಿಸ್ ನೀಡಲಾಗುತ್ತಿದ್ದು, ಬೇಸ್ ಮೆಂಟ್ ನಿರ್ಮಿಸದ ಕಟ್ಟಡವನ್ನು ನೆಲಸಮ ಮಾಡಲಾಗುವುದು ಎಂದು ಪಾಲಿಕೆ ಮೂಲಗಳು ತಿಳಿಸಿವೆ.

loading...