ಬೈಲಹೊಂಗಲನಲ್ಲಿಯೂ ವಿಜಯೋತ್ಸವ

0
1


ಬೈಲಹೊಂಗಲ- ಪ್ರಧಾನಿ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ 2019 ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಬೈಕ ರ್ಯಾಲಿ ನಡೆಸಿ, ಗುಲಾಲು ಎರಚಿ, ಸಿಹಿ ಹಂಚಿ ಸಂಭ್ರಮಿಸಿದರು.
ಬೆಳಗಾವಿ ಜಿಲ್ಲಾ ಭಾಜಪಾ ಗ್ರಾಮೀಣ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರು ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ದೇಶದ ಜನತೆಯ ಜನಮಾನಸವನ್ನು ಗೆದ್ದಿದ್ದು, ಭ್ರಷ್ಟಾಚಾರ ರಹಿತ ಆಡಳಿತ ನಡೆಸಿ ದಿನ ದಲಿತರ, ರೈತರ, ಬಡ ಮತ್ತು ಮಧ್ಯಮ ವರ್ಗದ ಜನಾಂಗಕ್ಕೆ ಹಲವಾರು ಯೋಜನೆ ಜಾರಿಗೆ ತಂದಿದ್ದಾರೆ.ಅವರ ಆಡಳಿತ ವೈಖರಿ ಮೆಚ್ಚಿ ವಿಶ್ವದ ಅಗ್ರಗಣ್ಯ ನಾಯಕರೇ ಭಾರತದತ್ತ ತಿರುಗಿ ನೋಡುವಂತೆ ಮಾಡಿ 21 ನೇ ಶತಮಾನ ಭಾರತೀಯ ಶತಮಾನ ಆಗುವದು ಶತಸಿದ್ದ ಎಂದರು.
ಬೆಳಗಾವಿ ಸಂಸದ ಸುರೇಶ ಅಂಗಡಿ ಅವರ ಅಭೂತಪೂರ್ವ ಗೆಲುವಿಗೆ ಶ್ರಮಿಸಿದ ಜಿಲ್ಲೆಯ ಶಾಸಕರು, ಮಾಜಿ ಶಾಸಕರು, ಪಧಾಧಿಕಾರಿಗಳು, ಕಾರ್ಯಕರ್ತರ, ಮತದಾರರಿಗೆ ಅಭಿನಂದನೆ ಸಲ್ಲಿಸಿದರು.
ಮಾಜಿ ಶಾಸಕ ಜಗದೀಶ ಮೆಟಗುಡ್ಡ ಮಾತನಾಡಿ, ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರು ದಿನದ 24 ಘಂಟೆಯಲ್ಲಿ 18 ತಾಸುಗಳ ಕಾಲ ನಿರಂತರವಾಗಿ ದೇಶದ ಅಭಿವೃದ್ದಿ ಪರ ಚಿಂತನೆ ಮಾಡುವುದು ಅತ್ಯಂತ ಶ್ಲಾಘನೀಯವಾಗಿದೆ. ಮತ್ತೊಮ್ಮೆ ಬಿಜೆಪಿ ನೇತೃತ್ವದ ಎನ್‍ಡಿಎ ಸರಕಾರಕ್ಕೆ ಜನತೆ ಆಶೀರ್ವಾದ ಮಾಡಿರುವುದು ಹರ್ಷದಾಯಕವಾಗಿದೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಫಲಿತಾಂಶ ಹೊರಬಿಳುತ್ತಿದ್ದಂತೆ ಮಾಜಿ ಶಾಸಕರುಗಳಾದ ಡಾ.ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್ಡ ಅಭಿಮಾನಿ ಬಳಗ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ನಡೆಸಿ, ಮೋದಿ ಅವರಿಗೆ ಜಯವಾಗಲಿ, ಭಾರತ ಮಾತಾ ಕೀ ಜೈ ಎಂದು ಮುಗಿಲು ಮುಟ್ಟುವಂತೆ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಸುಧೀರ ವಾಲಿ, ಗುರು ಮೆಟಗುಡ್ಡ, ಜಗದೀಶ ಜಂಬಗಿ, ಶಿವಾನಂದ ಕೋಲಕಾರ, ಸಾಗರ ಭಾವಿಮನಿ, ಬ್ಲಾಕ್ ಅಧ್ಯಕ್ಷ ಮಡಿವಾಳಪ್ಪ ಹೋಟಿ, ಶಿವಾನಂದ ಬಡ್ಡಿಮನಿ, ಬಸವರಾಜ ನೇಸರಗಿ, ಬಸವರಾಜ ಹಲಸಿ, ಮಲ್ಲಿಕಾರ್ಜುನ ವಕ್ಕುಂದಮಠ, ಮಲ್ಲು ಮತ್ತಿಕೊಪ್ಪ, ಮಾರುತಿ ತಿಗಡಿ, ಮಹೇಶ ಹರಕುಣಿ, ರಾಜು ನರಸನ್ನವರ, ವಿರೇಶ ಹೊಳೆಪ್ಪನವರ, ಕುಮಾರ ಭರಮನ್ನವರ, ಬಸನಗೌಡ ಪಾಟೀಲ, ಉಮೇಶ ಕಾದ್ರೋಳಿ, ಅಶೋಕ ಬೋರಕನವರ, ಅಶೋಕ ಜವಳಿ, ಜಗದೀಶ ಬೋರಕನವರ, ಬಸವರಾಜ ಭಜಂತ್ರಿ, ಪ್ರಶಾಂತ ಅಮ್ಮಿನಬಾವಿ, ಬಿರೇಶ ಬೂಸನ್ನವರ, ಪಿಂಟು ಕಾರಬಾರಿ, ಸಿ.ಬಿ.ವಿಭೂತಿಮಠ, ಅಭಿಷೇಕ ಹರಕುಣಿ, ಪರಶುರಾಮ ರಾಯಬಾಗ, ಕಿರಣ ಅರವಳ್ಳಿ ಸೇರಿದಂತೆ ಸಾವಿರಾರು ಕಾರ್ಯಕರ್ತರು ಇದ್ದರು.

loading...