ಬೊಲಿವಿಯಾ: ಬಸ್ ಪಲ್ಟಿಯಾಗಿ ಏಳು ಮಂದಿ ಸಾವು

0
13
ಲಾ ಪಾಜ್- ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿದ್ದ ಬಸ್ ಪಲ್ಟಿ ಹೊಡೆದು ಉರುಳಿ ಬಿದ್ದ ಪರಿಣಾಮ ಏಳು ಮಂದಿ ಪ್ರಯಾಣಿಕರು ಮೃತಪಟ್ಟು, 30 ಜನರು ಗಾಯಗೊಂಡ ಘಟನೆ ನೈರುತ್ಯ ಬೊಲಿವಿಯಾದಲ್ಲಿ ಗುರುವಾರ ಸಂಭವಿಸಿದೆ.
ಟ್ರಾನ್ಸ್ ತುಪಿಜಾ ಕಂಪನಿಗೆ ಸೇರಿದ ಬಸ್, ಪಾನ್ ಅಮೆರಿಕನ್ ಹೆದ್ದಾರಿಯಲ್ಲಿ ಚಲಿಸುವಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿ ಬಿದ್ದು ಅದರಲ್ಲಿದ್ದ ಏಳು ಮಂದಿ ಮೃತಪಟ್ಟಿದ್ದಾರೆ. ಬಸ್ ನಲ್ಲಿದ್ದ ಇನ್ನುಳಿದ 30 ಜನ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಲ್ಲಪತ ಹಾಗೂ ಓರುರೊ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಬಸ್ ಎಡಕ್ಕೆ ಉರುಳಿ ಬಿದ್ದ ಪರಿಣಾಮ ಅದರ ಎಡಭಾಗ ನುಜ್ಜುಗುಜ್ಜಾಗಿ ಆ ಕಡೆ ಕುಳಿತುಕೊಂಡಿದ್ದ ಪ್ರಯಾಣಿಕರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ ಎಂದು ಅಲ್ಲಿನ ಮಾಧ‍್ಯಮಗಳು ವರದಿ ಮಾಡಿವೆ.
loading...