ಬ್ಯಾಂಕ್ ಗೆ 1.60 ಲಕ್ಷ ಪಾವತಿಸಲು ಹೊರಟಿದ್ದ ವ್ಯಕ್ತಿಯಿಂದ ಹಣ ದೋಚಿದ ಕಳ್ಳರು

0
12

ಬೆಳಗಾವಿ

ಕೆಲಸ ಮಾಡುತ್ತಿದ್ದ ಕಂಪನಿಯ ಹಣವನ್ನು ಬ್ಯಾಂಕಿಗೆ ಜಮೆ ಮಾಡಲು ಹೊರಟ್ಟಿದ್ದ ವ್ಯಕ್ತಿಯಿಂದ ತಾವು ಸರಕಾರಿ ಅಧಿಕಾರಿಗಳು ಎಂದು ಹೇಳಿಕೊಂಡು ಬಂದ ಇಬ್ಬರು ಒತ್ತಾಯ ಪೂರ್ವಕವಾಗಿ 1.60ಲಕ್ಷ ರು. ಹಣ ದೋಚಿಕೊಂಡು ಪರಾರಿಯಾದ ಘಟನೆ ನಡೆದಿದೆ.

ನಗರದ ಉದ್ಯಮಬಾಗ ರಹವಾಸಿಯಾದ ಜಗನ್ನಾಥ ಪ್ರಭು (53) ಹಣ ಕಳೆದುಕೊಂಡ ವ್ಯಕ್ತಿ. ತಾನು ಕೆಲಸ ಮಾಡುವ ಖಾಸಗಿ ಕಂಪನಿಯ ಹಣವನ್ನು ಬ್ಯಾಂಕ್ ನ ಎಟಿಎಂಗೆ ಜಮೆ ಮಾಡಲು ಹೊರಟಾಗ ಗೋವಾವೇಸ್ ನಲ್ಲಿರುವ ಖಾಸಗಿ ಹೊಟೇಲ್ ಬಳಿ ಬೈಕ್ ನಲ್ಲಿ ಬಂದ ಇಬ್ಬರು ತಾವು ಸರಕಾರಿ ಅಧಿಕಾರಿಗಳು ಚುನಾವಣಾ ನೀತಿ ಸಂಹಿತೆ ಇರುವುದರಿಂದ ಇಷ್ಟೊಂದು ಹಣ ಇಟ್ಟುಕೊಂಡಿದ್ದು ಏಕೆ ಎಂದು ಜಗನ್ನಾಥರ ಜೇಬು ತಪಾಸಣೆ ನಡೆಸಿ 1.60 ಲಕ್ಷ ದೋಚಿಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...