ಭಯೋತ್ಪಾದನೆ ಬೇರು ಸಹಿತ ನಿರ್ಮೂಲನೆಯಾಗಲಿ

0
0

ಕನ್ನಡಮ್ಮ ಸುದ್ದಿ, ಧಾರವಾಡ – ಭಯೋತ್ಪಾದನೆಯು ಜಗತ್ತಿನಾದ್ಯಂತ ಹಬ್ಬಿದ ಕ್ಯಾನ್ಸರ್ ರೋಗವಾಗಿದೆ. ಭಯೋತ್ಪಾದನೆ ಕಾರ್ಯವನ್ನು ವಿರೋಧಿಸದೇ ಅದನ್ನು ಬೇರು ಸಹಿತ ನಿರ್ಮೂಲನೆ ಮಾಡಲು ಸಮಸ್ತ ಭಾರತೀಯರು ಸದಾಕಾಲವೂ ಸಿದ್ಧವಾಗಬೇಕು ಎಂದು ಉತ್ತರ ಕರ್ನಾಟಕ ಸೈನಿಕರ ಕಲ್ಯಾಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೃಷ್ಣ ಜೋಶಿ ಹೇಳಿದರು.
ಜಿಲ್ಲಾಧಿಕಾರಿಗಳ ಕಛೇರಿಯ ಆವರಣದಲ್ಲಿರುವ ಕಾರ್ಗಿಲ್ ಸ್ತೂಪದ ಬಳಿ ಭಯೋತ್ಪಾದನಾ ವಿರೋಧಿ ನಿಗ್ರಹ ದಿನಾಚರಣೆಯ ಅಂಗವಾಗಿ ಉತ್ತರ ಕರ್ನಾಟಕ ಸೈನಿಕರ ಕಲ್ಯಾಣ ಸಮಿತಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಯೋತ್ಪಾಧನಾ ಕಾರ್ಯಕ್ಕೆ ಜಗತ್ತಿನಾದ್ಯಂತ ಉಗ್ರ ವಿರೋಧ ಕಂಡು ಬರುತ್ತಿದ್ದು, ಇದು ಸಮಾಜದ್ರೊÃಹಿ, ದೇಶವಿರೋಧಿ ಕಾರ್ಯವಾಗಿದ್ದು ಜಗತ್ತಿನಲ್ಲಿ ಭಯದ ವಾತಾವರಣ ಹುಟ್ಟಿಸುವ ಕುತಂತ್ರವಾಗಿದೆ. ಭಯೋತ್ಪಾದನೆ ಒಂದು ಅಸಾಂಪ್ರದಾಯಿಕ ಯುದ್ಧ. ಅಮೇರಿಕಾ ವಿಶ್ವವ್ಯಾಪಾರ ಕೇಂದ್ರದ ದ್ವಂಸ, ಮುಂಬೈ ತಾಜ್ ಹೊಟೇಲ್ ಮೇಲಿನ ದಾಳಿ ಹಾಗೂ ಭಾರತದ ಸಂಸತ್ ಮೇಲಿನ ದಾಳಿಗಳು ಉಗ್ರವಾದಿಗಳ ವಿದ್ವಂಸಕ ಹೀನ ಕೃತ್ಯಗಳಾಗಿವೆ ಎಂದರು.
ಭಾರತ ಶಾಂತಿ ಬಯಸುವ ರಾಷ್ಟçವಾಗಿದ್ದು, ಎಂದಿಗೂ ನಾವು ಇನ್ನೊಂದು ರಾಷ್ಟçದ ಭೂಪ್ರದೇಶವನ್ನು ಕಬಳಿಸುವ, ಆಕ್ರಮಿಸುವ ಕೃತ್ಯವನ್ನು ಎಸಗಿಲ್ಲ. ಶಾಂತಿ ಮತ್ತು ಸಹನೆಗಳೇ ನಮ್ಮ ಭಾರತೀಯ ಸಂಸ್ಕೃತಿಯ ಮೂಲಮಂತ್ರ ಇತ್ತಿÃಚೆಗೆ ಪುಲ್ವಾಮಾ ಭಯೋತ್ಪಾದಕರ ದಾಳಿಗೆ ಭಾರತ ತಕ್ಕ ಪ್ರತ್ಯುತ್ತರ ನೀಡಿ, ಭಾರತವನ್ನು ಕೆಣಕಿದರೆ ನಮಗಿನ್ನು ಉಳಿಗಾಲವಿಲ್ಲ ಎಂಬ ಎಚ್ಚರಿಕೆಯನ್ನು ಪಾಕಿಸ್ತಾನಕ್ಕೆ ನೀಡಿದೆ. ಪ್ರಾಣತೆತ್ತ ನಮ್ಮ ವೀರಸೈನಿಕರನ್ನು ನಾವು ಸದಾ ಕಾಲವೂ ಸ್ಮರಿಸಿಬೇಕಾದದ್ದು ನಮ್ಮ ಆದ್ಯ ಕರ್ತವ್ಯ, ಭಯೋತ್ಪಾಧನೆಯನ್ನು ನಿಗ್ರಹಿಸುವಲ್ಲಿ ನಮ್ಮನ್ನು ನಾವೇ ತೊಡಗಿಸಿಕೊಳ್ಳೊÃಣ ಎಂದರು.
ಉತ್ತರ ಕರ್ನಾಟಕ ಸೈನಿಕರ ಕಲ್ಯಾಣ ಸಮಿತಿ ಅಧ್ಯಕ್ಷ ಚಂದ್ರಶೇಖರ ಅಮಿನಗಡ ಅಧ್ಯಕ್ಷತೆವಹಿಸಿ ಮಾತನಾಡಿ, ಭಯೋತ್ಪಾದಕರು ಆತ್ಮಾಹುತಿ ದಾಳಿ, ವಿಮಾನ ಅಪಹರಣ, ಗುಂಡಿನ ಕಾಳಗ, ಮುಗ್ಧಜನರನ್ನು ಒತ್ತೆ ಇರಿಸುವಂತಹ ಹೀನ ಕೃತ್ಯಗಳಿಗೆ ಇಳಿದದ್ದು ನಾಗರಿಕ ಸಮಾಜದಲ್ಲಿ ಇದೊಂದು ಹೀನಕೃತ್ಯವಾಗಿದೆ ಎಂದರು.
ಕಾಶ್ಮಿÃರದ ಅನಂತನಾಗ ಜಿಲ್ಲೆಯಲ್ಲಿ ಭಯೋತ್ಪಾದಕರ ಗುಂಡಿಗೆ ಬಲಿಯಾದ ವೀರಯೋಧ ರಾಘವೇಂದ್ರ ಬಡಿಗೇರ ಈತನ ತಂದೆ ಮಹಾದೇವಪ್ಪ ತಾಯಿ ಇಂದಿರಾ ಅವರನ್ನು ಗೌರವಿಸಲಾಯಿತು.
ಉಪನ್ಯಾಸಕ ವೀರಣ್ಣ ಒಡ್ಡಿÃನ, ಪಂಡಿತ ಮುಂಜಿ, ಎಸ್.ಬಿ. ಗುತ್ತಲ, ಪ್ರಾಣೇಶ ಪಾಶ್ಚಾಪೂರ, ಭೀಮಪ್ಪ ಜಾಧವ, ಈರಪ್ಪಣ್ಣಾ ಅಮೀನಗಡ, ಬಾಬುರಾವ ರಾಠೋಡ, ನಜೀರ ಗೊರವನಕೊಳ್ಳ, ನಾಗರತ್ನಾ ಅಮೀನಗಡ, ಕೃಷ್ಣಪ್ಪ, ಪ್ರಕಾಶ ಕುಲಕರ್ಣಿ, ಎ.ಆರ್. ಜೋಶಿ, ಪಿ.ಎನ್. ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು.

loading...