ಭಾರತದಲ್ಲಿ ಒಂದೇ ದಿನ 2,003 ಕೊರೊನಾ ಪೀಡಿತರ ಸಾವು, ಒಟ್ಟು ಮೃತರ ಸಂಖ್ಯೆ 11,903

0
8

ನವದೆಹಲಿ:- ದೇಶದಲ್ಲಿ ಕೊರೊನಾ ಪೀಡಿತರು ಹಾಗೂ ಮೃತರ ಸಂಖ್ಯೆ ದಿನೇ ದಿನೇ ವೃದ್ಧಿಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಕೊರೊನಾ ವೈರಸ್ (ಕೋವಿಡ್ 19) ನಿಂದ 2,003 ಜನರು ಸಾವನ್ನಪ್ಪಿದ್ದು, ಈ ವೈರಸ್‌ನಿಂದ ಸಾವನ್ನಪ್ಪಿದವರ ಸಂಖ್ಯೆ 11,903 ಕ್ಕೆ ಏರಿದೆ.

ಇದೇ ಅವಧಿಯಲ್ಲಿ, 10,974 ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, 6,922 ಸೋಂಕಿತ ಜನರು ಚೇತರಿಸಿಕೊಂಡಿದ್ದಾರೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, 10,974 ಹೊಸ ಕೊರೊನಾ ವೈರಸ್ ಪ್ರಕರಣ ಬೆಳಕಿಗೆ ಬಂದಿದ್ದು, ಸೋಂಕಿತರ ಸಂಖ್ಯೆ 3,54,065 ಕ್ಕೆ ಏರಿದೆ. ಕೊರೊನಾ ವೈರಸ್‌ನಿಂದ ಸಾವನ್ನಪ್ಪಿದವರ ಸಂಖ್ಯೆಯೂ 11,903 ಕ್ಕೆ ಏರಿದೆ. ದೇಶದಲ್ಲಿ ಪ್ರಸ್ತುತ 1,55,227 ಸಕ್ರಿಯಾ ಕೊರೊನಾ ಪ್ರಕರಣಗಳಿದ್ದು, ಒಟ್ಟು 1,86,935 ಸೋಂಕಿತರು ಚೇತರಿಸಿಕೊಂಡಿದ್ದಾರೆ.

ಈ ಸಾಂಕ್ರಾಮಿಕ ರೋಗಕ್ಕೆ ಮಹಾರಾಷ್ಟ್ರವು ತಲ್ಲಣಗೊಂಡಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 2,701 ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿದ್ದು, 1,409 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,13,445 ಕ್ಕೆ ಏರಿದ್ದು, ಸತ್ತವರ ಸಂಖ್ಯೆ 5,537 ಕ್ಕೆ ಏರಿದೆ.

loading...