ಭಾರತ ಆರ್ಥಿಕ ಕ್ಷೆÃತ್ರದಲ್ಲಿ ಮೊದಲ ಸ್ಥಾನ ಪಡೆಯಲಿದೆ : ಸಂಸದ ಸುರೇಶ ಅಂಗಡಿ

0
12

  ಭಾರತ ಆರ್ಥಿಕ ಕ್ಷೆÃತ್ರದಲ್ಲಿ ಮೊದಲ ಸ್ಥಾನ ಪಡೆಯಲಿದೆ : ಸಂಸದ ಸುರೇಶ ಅಂಗಡಿ  

ಕನ್ನಡಮ್ಮ ಸುದ್ದಿ-ಬೆಳಗಾವಿ: ಭಾರತ ದೇಶ ಅತಿ ವೇಗದಲ್ಲಿ ಬದಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಆರ್ಥಿಕ ಕ್ಷೆÃತ್ರದಲ್ಲಿ ಮೊದಲ ಸ್ಥಾನ ಪಡೆಯಲಿದೆ. ಇದರಿಂದಾಗಿ ವ್ಯಾಪಾರ ಮತ್ತು ಉದ್ಯಮ ಕ್ಷೆÃತ್ರದಲ್ಲಿ ವಾಣಿಜ್ಯ ಶಿಕ್ಷಣ ಪಡೆದವರಿಗೆ ವಿಪÅಲ ಅವಕಾಗಳಿವೆ ಎಂದು ಸಂಸದ ಸುರೇಶ ಅಂಗಡಿ ಹೇಳಿದರು.
ಸ್ಥಳೀಯ ಸನ್ಮತಿ ಶಿಕ್ಷಣ ಸಹಕಾರಿ ಸಮಿತಿಯ ಮಹಾವೀರ ಪಿ.ಮಿರ್ಜಿ ವಾಣಿಜ್ಯ ಮಹಾವಿದ್ಯಾಲಯ ಮತ್ತು ಜಗದೀಶ ಎ.ಸವದತ್ತಿ ಪದವಿ ಪÇರ್ವ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಆಚರಣೆ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಯ ಕಟ್ಟಡದ ಉದ್ಘಾಟನೆ ಹಾಗೂ ಇಂಗ್ಲಿÃಷ್ ಮಾಧ್ಯಮ ಶಾಲೆಗೆ ದಿ.ಸೌ ಶೋಭಾ ಜಗದೀಶ ಸವದತ್ತಿ ಇಂಗ್ಲಿಷ್ ಮಾಧ್ಯಮ ಶಾಲೆ ಎಂಬ ನಾಮಕರಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು.
ವಾಣಿಜ್ಯ ಕ್ಷೆÃತ್ರದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ವ್ಯಾಪಾರ ಉದ್ಯಮ ಕ್ಷೆÃತ್ರದ ಬಗ್ಗೆ ಹೆಚ್ಚಿನ ಒಲವು ತೋರಿಸಬೇಕು. ಮುಂಬರುವ ದಿನಗಳಲ್ಲಿ ಭಾರತ ದೇಶ ಕೃಷಿ ಮತ್ತು ವ್ಯಾಪಾರ ಕ್ಷೆÃತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಿದೆ.ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ ಎಂದು ಅವರು ಹೇಳಿದರು.
ಇದೀಗ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಎಸ.ಎಸ.ಎಸ. ಸಮಿತಿ ಸಂಸ್ಥೆಯು ಶೇಡಬಾಳ ಗ್ರಾಮದಲ್ಲಿ ಪ್ರಾರಂಭಗೊಂಡು ಬೆಳಗಾವಿಯಲ್ಲಿಯೂ ಸಹ ಮಹಾವಿದ್ಯಾಲಯಗಳನ್ನು ಪ್ರಾರಂಭಿಸಿ ಅನೇಕ ವಿದ್ಯಾರ್ಥಿ ಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ನಾನೂ ಸಹ ಈ ಮಹಾವಿದ್ಯಾಲಯದ ಮಾಜಿ ವಿದ್ಯಾರ್ಥಿಯಾಗಿದ್ದು ಇಲ್ಲಿನ ಶಿಕ್ಷಕರು ತಮಗೆ ಉತ್ತಮ ಶಿಕ್ಷಣ ನೀಡಿದ್ದರಿಂದ ಇಂದು ನಾನು ಓರ್ವ ಯಶಸ್ವಿ ಉದ್ದಿಮೆದಾರನಾಗಿ ಹಾಗೂ ಸಂಸದನಾಗಿದ್ಧೆನೆ. ಈ ಮಹಾವಿದ್ಯಾಲಯಕ್ಕೆ ಸಂಸದರ ನಿಧಿಯಿಂದ ರೂ. ೧೦ ಲಕ್ಷ ರೂ ಸಹಾಯ ಮಾಡುತ್ತೆÃನೆ ಎಂದು ಅವರು ಭರವಸೆ ನೀಡಿದರು.

ಡಾ.ಎ.ಆರ.ರೊಟ್ಟಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ವೇದಿಕೆ ಮೆಲೆ ಮಾಜಿ ಶಾಸಕ ಕಲ್ಲಪ್ಪಣ್ಣ ಮಗೆನ್ನವರ,ಎಂ.ಪಿ.ಮಿರ್ಜಿ ಮಹಾವಿದ್ಯಾಲಯದ ಪ್ರಾಶುಂಪಾಲರಾದ ನಿರ್ಮಲ ಗಡಾದ,ಪದವಿ ಪÇರ್ವ ಮಹಾವಿದ್ಯಾಲಯ ಪ್ರಾಂಶುಪಾಲ ವಿ.ಬಿ.ತುರಮರಿ ಸಂಸ್ಥೆಯ ನಿಕಟಪÇರ್ವ ಅಧ್ಯಕ್ಷ ಡಾ. ಎಸ.ಬಿ.ಪಾಟೀಲ ಮೊದಲಾದವರು ಉಪಸ್ಥಿತರಿದ್ದರು. ಪÇನಂ ಪಾಟೀಲ ವಂದಿಸಿದರು. ಡಾ.ಭರತ ಅಲಸಂದಿ ಮತ್ತು ನಾಗವೇಣಿ ಧರೆಣ್ಣವರ ಕಾರ್ಯಕ್ರಮ ನಿರೂಪಿಸಿದರು.

loading...