ಭಾರತ ಕ್ರಿಕೆಟ್‌ ತಂಡ ಎದೆಗುಂದುವ ಅವಶ್ಯಕತೆ ಇಲ್ಲ- ಜಡೇಡಾ

0
2

ನವದೆಹಲಿ: ಐಸಿಸಿ ಪುರುಷರ ವಿಶ್ವಕಪ್ ಏಕದಿನ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ, ನ್ಯೂಜಿಲೆಂಡ್ ವಿರುದ್ಧ ಸೋಲು ಅನುಭವಿಸಿದೆ, ಈ ಮೂಲಕ ನಿರಾಸೆ ಅನುಭವಿಸಿದೆಯಾದರೂ ತಂಡ ಎದೆಗುಂದುವ ಅವಶ್ಯಕತೆ ಇಲ್ಲ ಎಂದು ಆಲ್ ರೌಂಡರ್ ರವೀಂದ್ರ ಜಡೇಜಾ ಅಭಿಪ್ರಾಯಪಟ್ಟಿದ್ದಾರೆ

ಈ ಪಿಚ್ ಬ್ಯಾಟ್ಸ್ ಮನ್ ಗಳಿಗೆ ಸಹಾಯಕವಾಗಿರಲಿಲ್ಲ. ತಂಡ ತನ್ನ ಬ್ಯಾಟಿಂಗ್ ಶಕ್ತಿಯನ್ನು ಪ್ರದರ್ಶಿಸಲು ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರಕ್ಕೆ ಮುಂದಾಯಿತು. ಚೆಂಡಿನ ಗತಿಯನ್ನು ಗುರುತಿಸುವ ಇರಾದೆ ತಂಡದ್ದಾಗಿತ್ತು ಎಂದು ರವೀಂದ್ರ ಜಡೇಜಾ ಹೇಳಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ ರವೀಂದ್ರ ಜಡೇಜಾ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಧಾರವಾದರು. ಈ ಮೂಲಕ ತಾನು ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಮಿಂಚ ಬಲ್ಲ ಆಟಗಾರ ಎಂದು ಸಾರಿ ಹೇಳಿದರು. ಇಂಗ್ಲೆಂಡ್ ನಂತಹ ಫ್ಲ್ಯಾಟ್ ಪಿಚ್‌ಗಳಲ್ಲಿ ಬ್ಯಾಟಿಂಗ್ ನಡೆಸಿ ವಿಕೆಟ್ ಕಬಳಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.
ಆಟಗಾರರ ಪ್ರದರ್ಶನವನ್ನು ಒಂದು ಪಂದ್ಯದಿಂದ ಅಳೆಯಲು ಸಾಧ್ಯವಿಲ್ಲ. ವಿಶ್ವಕಪ್ ಪಂದ್ಯದಲ್ಲಿ ಭಿನ್ನ-ವಿಭಿನ್ನ ಪಿಚ್‌ಗಳು ಸಿಗಲಿದ್ದು, ಭಾರತೀಯ ಬ್ಯಾಟ್ಸ್ ಮನ್ ಗಳು ಆರ್ಭಟಿಸಬಲ್ಲರು. ಅನುಭವಿ ಆಟಗಾರರು ತಂಡದ ನೆರವಿಗೆ ಬರಬಲ್ಲರು ಎಂದು ತಿಳಿಸಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಬ್ಯಾಟಿಂಗ್ ಗೆ ಇಳಿದಾಗ, ನನ್ನ ಬಳಿ ಹೆಚ್ಚಿನ ಕಾಲಾವಕಾಶ ವಿತ್ತು. ಪಿಚ್ ಮರ್ಮ ಅರಿತು ಮಾಡುವಲ್ಲಿ ಯಶಸ್ವಿಯಾಗಿದ್ದೇನೆ. ಐಪಿಎಲ್ ವೇಳೆ ಬ್ಯಾಟಿಂಗ್ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದೆ. ಇದರ ಸಲುವಾಗಿ ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದೇನೆ. ನನ್ನ ಪ್ರದರ್ಶನವನ್ನು ಮುಂದುವರೆಸುವ ವಿಶ್ವಾಸ ನನ್ನಲ್ಲಿದೆ ಎಂದು ಜಡೇಜಾ ಹೇಳಿದ್ದಾರೆ.

loading...