ಭಾರತ ದೇಶ ಪ್ರಗತಿ ಪಥದತ್ತ ಸಾಗುತ್ತಿದೆ: ಶಾಸಕ ಯಶವಂತರಾಯಗೌಡ ಪಾಟೀಲ

0
27

ಇಂಡಿ: ಸ್ವಾತಂತ್ರಕ್ಕಾಗಿ ನಮ್ಮ ಪೂರ್ವಜರು ತಮ್ಮ ಜೀವನ ತ್ಯಾಗ ಬಿಲಿದಾನ ಮಾಡುವ ಮೂಲಕ ಹೊರಾಟ ಮಾಡಿ ಸ್ವಾತಂತ್ರವನ್ನು ತಂದುಕೊಟ್ಟಿದ್ದಾರೆ. ಇಂದು ನಮ್ಮ ಭಾರತ ದೇಶ ಪ್ರಗತಿ ಪಥದತ್ತ ಸಾಗಿ ವಿಶ್ವಮಟ್ಟದಲ್ಲಿ ತನ್ನದೆಯಾದ ಛಾಪನ್ನು ಮೂಡಿಸುತ್ತಿರುವುದರ ಹಿಂದೆ ನಮ್ಮನ್ನಾಳಿದ ಪ್ರತಿಯೊಬ್ಬ ನಾಯಕರ ಕೊಡುಗೆ ಇದೇ. ವಿಶ್ವದಲ್ಲಿ ವಿವಿಧತೆಯಲ್ಲಿ ಏಕತೆ ಸಾಧಿಸಿದ ಏಕೈಕ ರಾಷ್ಟçವಾಗಿದ್ದು ಪ್ರಜಾ ಪ್ರಭುತ್ವದ ತಳಹದಿ ಮೇಲೆ ಸಾಗಿದ ರಾಷ್ಟçÀ ಯಾವುದಾದರು ಇದ್ದರೆ ಅದು ಭಾರತ ದೇಶವಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ತಾಲೂಕಾ ಕ್ರಿÃಡಾಂಗಣದಲ್ಲಿ ತಾಲೂಕಾ ಆಡಳಿತದ ವತಿಯಿಂದ ಏರ್ಪಡಿಸಿದ ೭೩ನೇ ಸ್ವಾತಂತ್ರೊö್ಯÃತ್ಸವ ದಿನಾಚರಣೆ ಕಾರ್ಯಕ್ರಮದ ಅದ್ಯಕ್ಷೆತೆ ವಹಿಸಿ ಮಾತನಾಡಿದ ಅವರು ಗಾಂಧಿಜಿಯವರ ಹಾಕಿಕೊಟ್ಟ ಶಾಂತಿಯ ಸನ್ಮಾರ್ಗದಲ್ಲಿ ಡಾ ಅಂಬೇಡ್ಕರವರ ರಚಿಸಿದ ಸಂವಿಧಾನ ತಳ ಹದಿ ಮೇಲೆ ನಾವು ಇಂದು ಸಾಗುತ್ತಿದ್ದು ಇಡಿ ವಿಶ್ವಕ್ಕೆ ಮಾದರಿ ರಾಷ್ಟçವಾಗಿ ಹೊರ ಹೊಮ್ಮಿ ಮುನ್ನಗುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಈ ಬಾರಿ ರಾಜ್ಯದ ೧೭ ಜಿಲ್ಲೆಗಳ ಬರ ಆವರಿಸಿ ೮೭ ತಾಲೂಕಗಳು ಬರದಿಂದ ತತ್ತರಿಸಿ ಹೊಗಿ ಕುಡಿಯುವ ನೀರಿಗೂ ಪರದಾಡು ಸ್ಥಿತಿ ಇದೇ. ಒಂದು ಕಡೆ ಬರದ ಹಾವಳಿ ಇದ್ದರೆ ಇನ್ನೊಂದು ಕಡೆ ನೆರೆಯ ಹಾವಳಿಯಿಂದ ತತ್ತರಿಸಿ ಹೊಗಿದ್ದಾರೆ. ಕೃಷ್ಣಾ ಹಾಗೂ ಭೀಮಾ ನದಿ ನೆರೆಯ ಹಾವಳಿಯಿಂದ ಸಾವಿರಾರು ಜನ ತಮ್ಮ ಮನೆ ಮಠಗಳನ್ನು ಕಳೆದುಕೊಂಡು ನಿರಾಶ್ರಿÃತರಾಗಿದ್ದಾರೆ. ರೈತರ ಹೊಲ ಗದ್ದೆಗಳ ಬೆಳೆ ಕೂಡಾ ಪ್ರವಾಹದಲ್ಲಿ ಕೊಚ್ಚಿಕೊಂಡು ಹೊಗಿ ಬೆಳಿ ಸಂಪೂರ್ಣ ನಾಶವಾಗಿ ತೀರಾ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ನೆರೆಯ ಸಂತ್ರಸ್ಥರÀ ನೆರವಿಗೆ ಸರಕಾರಗಳು, ಮಠ ಮಾನ್ಯಗಳು, ಜನ ಸಮೂದಾಯದವರು ಸಹಾಯ ಹಸ್ತ ಚಾಚಬೇಕಾದ ಅನಿವಾರ್ಯತೆ ಇದೆ. ಸಂತ್ರಸ್ಥರ ನೆರವಿಗೆ ಕೇವಲ ಸರಕಾರ ನಿಂತರೆ ಸಾಲದು ಪ್ರತಿಯೊಬ್ಬ ಜನ ಸಮುದಾಯ, ಸಂಘ ಸಂಸ್ಥೆಗಳು ಕೂಡಾ ಮುಂದೆ ಬರಬೇಕು ಎಂದ ಅವರು ಯಾರೆ ಏನೆ ಮಾಡಿದರು ನೆರೆ ಪಿಡಿತರ ಕಷ್ಟ ಪರಿಹರಿಸಲು ಅಸಾದ್ಯ ಆದರು ಸಂತ್ರಸ್ಥರ ಜೀವನ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಸಹಾಯ ಸಹಕಾರ ನೀಡುವುದು ಪ್ರತಿಯೊಬ್ಬ ಮಾನವನ ಧರ್ಮವಾಗಿದೆ ಎಂದರು.
ಪಟ್ಟಣದ ಜನತೆಯ ಬಹು ನಿರಿಕ್ಷಿÃತ ಮೇಘಾ ಮಾರುಕಟ್ಟೆಯನ್ನು ೩೦ ಕೊಟಿ ರೂಪಾಯಿ ವ್ಯಚ್ಚದಲ್ಲಿ ನಿರ್ಮಾಣ ಕಾರ್ಯಕ್ಕೆ ತ್ವರಿತವಾಗಿ ಚಾಲನೆ ನೀಡಲಾಗುವುದು. ಅಲ್ಲದೆ ನೂತನ ಬಸ್ ಡಿಪೋ ಸೇರಿದಂತೆ ಒಟ್ಟು ೨೫೯ ಕೊಟೀ ರೂಪಾಯಿಗಳ ವ್ಯಚ್ಚದಲ್ಲಿ ಮತಕ್ಷೆÃತ್ರದ ವಿವಿಧ ಅಭೀವೃದ್ದಿ ಕಾಮಗಾರಿಗಳಿಗೆ ಇಷ್ಟರಲ್ಲೆ ಚಾಲನೆ ನೀಡಲಾಗುವು ಎಂದರು.
ಧ್ವಜಾರೋಹಣ ನೆರವೇರಿಸಿ ಉಪವಿಭಾಗಾಧಿಕಾರಿ ಕೆ.ಆನಂದ ಮಾತನಾಡಿದರು.
ಕಳೆದ ಮೂರು ವರ್ಷಗಳ ಹಿಂದೆ ವಿರ ಮರಣವನ್ನಪ್ಪಿದ ತಾಲೂಕಿನ ಸವಳಸಂಗ ಗ್ರಾಮದ ಯೋದ ಸಹದೇವ ಮೋರೆ ಇವರ ಪಾಲಕರಿಗೆ ಸರಕಾರದಿಂದ ೪ ಎಕರೆ ಜಮಿನ ನೀಡಿದ ಪಹಣಿ ಪತ್ರಿಕೆಯನ್ನು ಶಾಸಕ ಯಶವಂತರಾಯರ್ಗವಡ ಪಾಟೀಲ ವಿತರಿಸಿದರು.
ವೇದಿಕೆ ಮೇಲೆ ತಾಪಂ ಅದ್ಯಕ್ಷ ಶೇಖರ ನಾಯಕ, ಡಿವೈಎಸ್‌ಪಿ ಎಮ್.ಬಿ.ಸಂಕದ, ತಹಸಿಲ್ದಾರ ಚಿದಾನಂದ ಗುರುಸ್ವಾಮಿ, ತಾಪಂ ಇಒ ಡಾ. ವಿಜಯಕುಮಾರ ಆಜೂರ, ಸಿಪಿಐ ಎಚ್.ಎಮ್.ಪಟೇಲ, ಕ್ಷೆÃತ್ರ ಶಿಕ್ಷಣಾಧಿಕಾರಿ ಎಸ್.ಬಿ.ಬಿಂಗೇರಿ, ಎಪಿಎಮ್‌ಸಿ ಅದ್ಯಕ್ಷ ಶಿವಯೋಗಿ ಚನಗೊಂಡ ಇದ್ದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕರಿ ಜಿ.ಜಿ.ವಾಲಿ, ಪಿಡಬ್ಲುಡಿ ಅಧಿಕಾರಿ ಆರ್.ಆರ್.ಕತ್ತಿ, ಸಣ್ಣ ನಿರಾವರಿ ಅಧಿಕಾರಿ ಬಿ.ವಾಯ್.ಬಿರಾದಾರ, ಕೃಷಿ ಅಧಿಕಾರಿ ಮಹಾದೇವಪ್ಪ ಏವೂರ, ಪಶುವೈದ್ಯಾಧಿಕಾರಿ ಡಾ. ಸಿ.ಬಿ.ಕುಂಬಾರ, ತಾಲೂಕಾ ಆರೋಗ್ಯಾಧಿಕಾರಿ ಡಾ.  ಅರ್ಚನಾ ಕುಲಕರ್ಣಿ, ಜಿಪಂ ಅಧಿಕಾರಿಗಳಾದ ರಾಜಕುಮಾರ ತೋರವಿ, ಬಿ.ಎಫ್.ನಾಯಕರ, ದೈಹಿಕ ಶಿಕ್ಷಣಾಧಿಕಾರಿ ಎ.ಬಿಕವಲಗಿ, ಶ್ರಿÃಕಾಂತ ಕೂಡಿಗನೂರ, ಪುರಸಭೆ ಸದಸ್ಯರಾದ ಅಂiÀÄÄಬ ಬಾಗವಾನ, ದೇವೇಂದ್ರ ಕುಂಬಾರ, ಧರ್ಮರಾಜ ವಾಲಿಕಾರ, ಅಣ್ಣಪ್ಪ ಅಹಿರಸಂಗ, ಗಣಪತಿ ಬಾಣಿಕೊಲ, ಪ್ರಶಾಂತ ಕಾಳೆ, ವೃತ್ತ ನಿರೀಕ್ಷಕ ಬಿ.ಎ.ರಾವೂರ ಮುಂತಾದವರು ಉಪಸ್ಥಿತರಿದ್ದರು. ಕ್ಷೆÃತ್ರ ಸಮನ್ವಯಾಧಿಕಾರಿ ಸಿ.ಎಮ್.ಬಂಡಗಾರ ಸ್ವಾಗತಿಸಿದರು.

loading...