ಭಾರತ ಪೊಲಿಯೋ ರಹಿತ ರಾಷ್ಟ್ತ್ರವಾಗಿ ಘೋಷಣೆ

0
49

ಅಥಣಿ.ಡಿ.31 : ರೋಟರಿ ಸಂಸ್ಥೆಯ ಸತತ ಪ್ರಯತ್ನದಿಂದ ವಿಶ್ವ ಆರೋಗ್ಯ ಸಂಸ್ಥೆ, ಭಾರತವನ್ನು ಪೊಲಿಯೋ ರಹಿತ ರಾಷ್ಟ್ತ್ರವನ್ನಾಗಿ ಘೋಷಣೆ ಮಾಡಲಿದೆ ಎಂದು ಗೋವಾದ ಜಾರ್ಸನ್ ಫರ್ನಾಂಡಿಸ್ ಹೇಳಿದರು.

ಡಾ. ಆರ್.ಎಚ್. ಕುಲಕರ್ಣಿ ಸಭಾ ಭವನದಲ್ಲಿ ಸ್ಥಳೀಯ ರೋಟರಿ ಸಂಸ್ಥೆಯ 15 ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮ್ನ ಉದ್ಘಾಟಿಸಿ ಮಾತನಾಡಿದರು. ವಿಶ್ವದಲ್ಲಿ 80 ಸಾವಿರಕ್ಕಿಂತಲೂ ಹೆಚ್ಚು ಪೊಲಿಯೋ ಪ್ರಕರಣಗಳು ದಾಖಲಾಗಿದ್ದವು, ಇದರ ಪೈಕಿ ಸುಮಾರು 40 ಸಾವಿರದಷ್ಟು ಪೊಲಿಯೋ ಪ್ರಕರಣಗಳು ಭಾರತವೊಂದರಲ್ಲಿಯೇ ಕಂಡು ಬಂದಿರುವುದರಿಂದ ಈಡೀ ವಿಶ್ವವೇ ಆತಂಕಕ್ಕೆ ಒಳಗಾಗಿತ್ತು. ಇಂದು ರೋಟರಿ ಸಂಸ್ಥೆಯ ಪ್ರಯತ್ನದಿಂದಾಗಿ ಭಾರತದಲ್ಲಿ ಈಚೆಗೆ ಒಂದು ಪ್ರಕರಣ ದಾಖಲಾಗದೇ ಇರುವುದು ವಿಶ್ವದ ಗಮನವನ್ನೇ ಸೆಳೆದಿದೆ ಎಂದು ತಿಳಿಸಿದರು.

ಮ್ಯಾಚಿಂಗ್ ಗ್ರ್ಯಾಂಟ್ ಯೋಜನೆಯಲ್ಲಿ ಶಿಕ್ಷಣ, ಕುಡಿಯುವ ನೀರು, ಆರೋಗ್ಯದಂತಹ ಅನೇಕ ಸಾಮಾಜಿಕ ಮತ್ತು ಜನಪರ ಯೋಜನೆಗಳಿಗೆ ಅನುದಾನ ನೀಡುತ್ತಿದ್ದು, ಅಥಣಿ ರೋಟರಿ ಕ್ಲಬ್ ದೀನ ದಲಿತರ ಸೇವೆ ಗೈಯ್ಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಮಾತನಾಡಿ, ರೋಟರಿ ಕ್ಲಬ್ ಅಂತರಾಷ್ಟ್ತ್ರೀಯ ಸಾಮಾಜಿಕ ಸಂಸ್ಥೆಯಾಗಿದ್ದು ಈ ಸಂಸ್ಥೆಯಡಿ ಗ್ರಾಮಗಳ ದತ್ತು ಸ್ವೀಕಾರ, ಶಾಲೆಗಳ ಸಾಮಾಜಿಕ ಕಳಕಳಿಯುಳ್ಳ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಜನಮಾನಸದಲ್ಲಿ ಸ್ಥಾನ ಮಾಡಿಕೊಂಡಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಿಮಿಕ್ರಿ ಕಲಾವಿದರಾದ ರಾಮದುರ್ಗದ ಮಹಾಂತೇಶ ಹಡಪದ ಮಿಮಿಕ್ರಿ ನಡೆಸಿಕೊಟ್ಟರು. ಸಂಕೇಶ್ವರದ ಅಜಯ ಸಾರಾಪೂರೆ ಅವರಿಂದ ಹಾಸ್ಯ ಭಾಷಣ ಮಾಡಿದರು.

ಈ ವೇಳೆ ರೋಟರಿ ಕ್ಲಬ್ನ ದುರ್ಗೇಶ ಹರಿತೆ, ಡಾ. ಪಿ.ಪಿ. ಮಿರಜ, ಚಂದ್ರಶೇಖರ ಹತ್ತಿ, ಪ್ರವೀಣ ಭಾಟೆ, ಅರುಣ ಯಲಗುದ್ರಿ, ಡಾ. ಪಿ.ಎಸ್. ಕುಲಕರ್ಣಿ, ಡಾ. ಆನಂದ ಕುಲಕರ್ಣಿ, ಡಾ.ಎ.ಎ. ಪಾಂಗಿತೆ ಅನೇಕರು ಇದ್ದರು.

loading...

LEAVE A REPLY

Please enter your comment!
Please enter your name here