ಭಾರತ ಬಂದ್‌ಗೆ ಮುಂಡಗೋಡನಲ್ಲಿ ನೀರಸ ಪ್ರತಿಕ್ರಿಯೆ

0
10

ಮುಂಡಗೋಡ: ತೈಲ ಬೆಲೆ ಏರಿಕೆ ಖಂಡಿಸಿ ಸೋಮವಾರ ಕಾಂಗ್ರೆಸ್‌ ನವರು ನೀಡಿದ ಭಾರತ್‌ ಬಂದ್‌ ಕರೆಗೆ ಮುಂಡಗೋಡನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ಸಾರಿಗೆ ಸಂಸ್ಥೆ ಬಸ್‌ ಸಂಚಾರ ಹೊರತುಪಡಿಸಿ ಉಳಿದಂತೆ ಆಟೋ ರಿಕ್ಷಾ, ಮ್ಯಾಕ್ಷಿ ಕ್ಯಾಬ್‌ ಸೇರಿದಂತೆ ಖಾಸಗಿ ವಾಹನಗಳ ಸಂಚಾರ ಎಂದಿನಂತಿತ್ತು. ಸೋಮವಾರ ಪಟ್ಟಣದಲ್ಲಿ ವಾರದ ಸಂತೆ ಇದ್ದರೂ ಕೂಡ ಬಂದ್‌ ಕರೆ ಸಂತೆ ಮೇಲೂ ಯಾವುದೇ ಪರಿಣಾಮ ಬೀರಲಿಲ್ಲ. ಅಂಗಡಿ ಮುಗ್ಗಟ್ಟುಗಳಲ್ಲಿ ವ್ಯಾಪಾರ ವಹಿವಾಟು ಸರಾಗವಾಗಿ ನಡೆಯಿತು. ವ್ಯಾಪಾರಸ್ಥರು ಹಾಗೂ ಗ್ರಾಹಕರು ಯಾವುದೇ ಆತಂಕವಿಲ್ಲದೇ ವ್ಯಾಪಾರ ನಡೆಸಿದರು.
ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ರಾಜ್ಯ ಸಾರಿಗೆ ಸಂಸ್ಥೆ ಬಸ್‌ ಗಳು ಬೆಳಿಗ್ಗೆ ಯಿಂದ ಮಧ್ಯಾಹ್ನದವರೆಗೆ ಪಟ್ಟಣದ ಬಸ್‌ ನಿಲ್ದಾಣದಲ್ಲಿಯೇ ಮುಕ್ಕಾಂ ಹೂಡಿ ನಿಂತಿದ್ದವು. ಮಧ್ಯಾಹ್ನದ ನಂತರ ಸಾರಿಗೆ ಸಂಸ್ಥೆ ಬಸ್‌ ಸಂಚಾರ ಕೂಡ ಆರಂಬಿಸಲಾಯಿತು.
ಕಾಂಗ್ರೆಸ್‌ ಸೇರಿದಂತೆ ವಿವಿದ ಸಂಘಟನೆಗಳು ತೈಲ ಬೆಲೆ ಏರಿಕೆ ಖಂಡಿಸಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ ಮೂಲಕ ಮನವಿ ಸಲ್ಲಿಸಿದರು. ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ. ಶಾಂತಿಯುತವಾದ ವಾತಾವರಣವಿತ್ತು. ಪೊಲೀಸರು ಅಲರ್ಟ ಆಗಿ ಕಾರ್ಯನಿರ್ವಹಿಸಿದರು.

loading...