ಭಾರತ ವಿರುದ್ಧದ ಪಂದ್ಯ; ಸರ್ಫರಾಜ್‌ಗೆ ಫೀಲ್ಡಿಂಗ್‌ನದ್ದೆ ತಲೆನೋವು

0
8

ಟಾಂಟನ್‌:- ಪ್ರಸಕ್ತ ಆವೃತ್ತಿಯ ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ಆಡಿರುವ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಜಯ, ಎರಡರಲ್ಲಿ ಸೋಲು ಮತ್ತೊಂದು ಪಂದ್ಯ ಮಳೆಯಿಂದ ರದ್ದಾಗಿದೆ. ಇದೀಗ ಭಾನುವಾರ ಬಲಿಷ್ಠ ಭಾರತ ತಂಡ ಎದುರಾಳಿಯಾಗಿದ್ದು, ಪಾಕ್‌ ನಾಯಕ ಸರ್ಫರಾಜ್‌ ಅಹಮದ್‌ ಅವರಿಗೆ ತನ್ನ ಆಟಗಾರರ ಫೀಲ್ಡಿಂಗ್‌ ಬಗ್ಗೆ ತಲೆ ನೋವಾಗಿದೆ.
ಕಳೆದ ಪಂದ್ಯದಲ್ಲಿ ಆಸಿಫ್‌ ಅಲಿ ಎರಡು ಕ್ಯಾಚ್‌ಗಳನ್ನು ಬಿಟ್ಟಿದ್ದರು. 33 ರನ್‌ ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದ ಫಿಂಚ್‌ ಅವರ ಕ್ಯಾಚ್‌ ಅನ್ನು ವಹಾಬ್‌ ರಿಯಾಜ್‌ ಕೈ ಚೆಲ್ಲಿದ್ದರು. ಬಳಿಕ ಅವರು 49 ಹೆಚ್ಚುವರಿ ರನ್‌ ಗಳಿಸಿದ್ದರು. ಡೇವಿಡ್‌ ವಾರ್ನರ್‌ 104 ರನ್‌ ಗಳಿಸಿದ್ದಾಗ ಅವರ ಕ್ಯಾಚ್‌ ಅನ್ನು ಮತ್ತೆ ವಹಾಬ್‌ ರಿಯಾಜ್‌ ಬಿಟ್ಟಿದ್ದರು. ಈ ಪಂದ್ಯದಲ್ಲಿ ಪಾಕ್‌ 41 ರನ್‌ಗಳಿಂದ ಸೋಲು ಅನುಭವಿಸಿತ್ತು.
“ಆಸೀಸ್‌ ವಿರುದ್ಧದ ಪಂದ್ಯದಲ್ಲಿ ನಾವು ಹಲವು ತಪ್ಪುಗಳನ್ನು ಮಾಡಿದ್ದೇವೆ. ವಿಶೇಷವಾಗಿ ಫೀಲ್ಡಿಂಗ್‌ನಲ್ಲಿ ನಾವು ಹಲವು ತಪ್ಪುಗಳನ್ನು ಮಾಡಿದ್ದೇವೆ. ಹಾಗಾಗಿ, ಭಾರತ ವಿರುದ್ಧದ ಪಂದ್ಯಕ್ಕೆ ಕ್ಷೇತ್ರ ರಕ್ಷಣೆ ಸುಧಾರಿಸಿಕೊಳ್ಳುವುದು ಅಗತ್ಯವಿದೆ. ಹಾಗಾಗಿ, ಕಠಿಣ ಪರಿಶ್ರಮದೊಂದಿಗೆ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವ ಅಗತ್ಯವಿದೆ ಎಂದು ಆತ್ಮಾವಲೋಕನ ಮಾಡಿಕೊಂಡರು.
” ಟೂರ್ನಿಯ ಮೊದಲ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಬಾಬರ್‌ ಅಜಾಮ್‌ ಪಾಯಿಂಟ್‌ನಲ್ಲಿ ಕ್ಯಾಚ್‌ ಕೈಚೆಲ್ಲಿಕೊಂಡಿದ್ದರು. ಒಟ್ಟಾರೆ, ಭಾನುವಾರ ನಡೆಯುವ ಇಂಡೊ-ಪಾಕ್‌ ಕಾದಾಟಕ್ಕೆ ನಾಯಕ ಸರ್ಫರಾಜ್‌ ಹೆಚ್ಚು ತಲೆ ನೋವಿಗೆ ಒಳಗಾಗಿದ್ದಾರೆ. ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಪಾಕ್‌ ಒಳಗಾಗಿದೆ.
ವಿಂಡೀಸ್‌ ವಿರುದ್ಧದ ಪಂದ್ಯದಲ್ಲಿ ಪಾಕ್‌ ಕೇವಲ 108 ರನ್‌ಗಳಿಗೆ ಆಲೌಟ್‌ ಆಗಿತ್ತು. ಈ ಪಂದ್ಯದಲ್ಲಿ ವಹಾಬ್‌ ಹಾಗೂ ಸರ್ಫರಾಜ್‌ ಜೋಡಿ ಎಂಟನೇ ವಿಕೆಟ್‌ಗೆ 64 ರನ್ ಕಲೆಹಾಕಿತ್ತು.

loading...