ಭಾರಿ ಪ್ರಮಾಣದ ಅಕ್ರಮ ಮರಳು ವಶ

0
3

ರಬಕವಿ-ಬನಹಟ್ಟಿ: ಸಮೀಪದ ಕುಲಹಳ್ಳಿ-ಹಿಪ್ಪರಗಿ ಸಮೀಪದ ಕೃಷ್ಣಾನದಿ ತಟದ ತೋಟದ ಹತ್ತಿರ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಅಂದಾಜು ೧೦೦೦ ಮೆಟ್ರಿಕ್‌ಟನ್ ಪ್ರಮಾಣದ ಮರಳ(ಉಸುಕು)ನ್ನು ರಬಕವಿ-ಬನಹಟ್ಟಿ ತಹಶೀಲ್ದಾರ ಕೆ. ರಾಘವೆಂದ್ರರಾವ್ ನೇತೃತ್ವದಲ್ಲಿ ದಾಳಿ ನಡೆಸಿ ಸೋಮವಾರ ಸಂಜೆ ವಶಪಡಿಸಿಕೊಳ್ಳಲಾಗಿದೆ.
ಪತ್ರಿಕೆಯೊಂದಿಗೆ ಮಾತನಾಡಿದ ರಬಕವಿ-ಬನಹಟ್ಟಿ ತಹಶೀಲ್ದಾರ ಕೆ. ರಾಘವೆಂದ್ರರಾವ್ ಅವರು, ಇಲ್ಲಿ ಕಾನೂನು ವಿರುದ್ಧವಾಗಿ ಮರಳನ್ನು ಸಂಗ್ರಹಿಸಲಾಗಿತ್ತು ಅದನ್ನು ಇಂದು ವಶಪಡಿಸಿಕೊಂಡು ಇಲ್ಲಿಂದ ಸಾಗಿಸಲಾಗುತ್ತಿದೆ ಪ್ರಮಾಣ ಇನ್ನೂ ನಿಖರವಾಗಿ ತಿಳಿದು ಬಂದಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಾಗಲಕೋಟೆಯ ಮೈಂಡ್ಸ್ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಕೃಷ್ಣವೇಣಿ, ವಿಶೇಷ ತಹಶೀಲ್ದಾರ ಮೆಹಬೂಬಿ, ಕಂದಾಯ ನಿರೀಕ್ಷಕ ಶ್ರಿÃಕಾಂತ ಮಾಯನ್ನವರ, ಕಂದಾಯ ಅಧಿಕಾರಿಗಳಾದ ಬಿ. ಪಿ. ಚೌದರಿ, ಸೂಡಿ, ಮಂಜು ನೀಲನ್ನವರ ಗ್ರಾಮ ಸಹಾಯಕರು, ಪೊಲೀಸ ಅಧಿಕಾರಿಗಳು ಇದ್ದರು.

loading...