ಭಾರಿ ಮಳೆಯಿಂದಾಗಿ ಜನಜೀವನ ಅಸ್ಥವ್ಯಸ್ಥ

0
11

 

ಮುಂಡಗೋಡ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಭಾಗದಲ್ಲಿ ಶನಿವಾರ ಸಂಜೆ ಗಾಳಿ, ಗುಡುಗು ಸಹಿತ ರಭಸದ ಮಳೆಯಿಂದಾಗಿ ಲಕ್ಷಾಂತರ ರೂಪಾಯಿಯ ಬೆಳೆ ನಷ್ಟವಾಗಿದ್ದು, ಜನಜೀವನ ಅಸ್ಥವ್ಯಸ್ಥಗೊಂಡಿತ್ತು. ಅರಶಿಣಗೇರಿ ಭಾಗದಲ್ಲಿ ತೋಟದಲ್ಲಿನ ವಿವಿಧ ಬೆಳೆಗಳು ಹಾಗೂ ಮನೆಗಳು ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. ತೋಟಗಳಲ್ಲಿ ಬಾಳೆ, ಮಾವು, ಅಡಿಕೆ, ಗೋವಿನ ಜೋಳ, ಕಬ್ಬಿನ ಬೆಳೆ ನೆಲ ಕಚ್ಚಿದ್ದು, ೫ ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಬೆಳೆ ಆಸ್ತಿ ಪಾಸ್ತಿ ಹಾನಿ ಸಂಭವಿಸಿದೆ. ಅರಶಿಣಗೇರಿ ಗ್ರಾಮದ ರಾಮಣ್ಣ ಲಾಲಪ್ಪ ಲಮಾಣಿ ಎಂಬ ರೈತನ ೪ ಎಕರೆ ಗದ್ದೆಯಲ್ಲಿ ಬೆಳೆದ ಮಾವು ಹಾಗೂ ಅಡಿಕೆ ಬಾಳೆ ಸಂಪೂರ್ಣ ನೆÉಲಕ್ಕುರುಳಿ ಸಂಪೂರ್ಣ ಹಾನಿಗೊಳಗಾಗಿದೆ. ಇದೇ ಗ್ರಾಮದ ಗ್ರಾಮದ ಸುಮಾರು ೫೦ಕ್ಕೂ ಅಧಿಕ ಮನೆಗಳ ಮೇಲ್ಚಾವಣಿಗಳ ಹಂಚು, ತಗಡ ಸೀಟ್ ಹಾರಿ ಹೋಗಿದ್ದು, ಗ್ರಾಮಕ್ಕೆ ಗ್ರಾಮವೇ ಸಂಕಷ್ಟಕ್ಕೊಳಗಾಗಿದೆ. ಗದ್ದೆಯಲ್ಲಿ ಬೆಳೆದ ಶುಂಠಿ ಸಹಿತ ಮಳೆಯ ರಭಸಕ್ಕೆ ಹರಿದು ನೀರು ಪಾಲಾಗಿದೆ. ರಸ್ತೆಯ ಬದಿಗಳಲ್ಲಿನ ಗಿಡಗಳು ಸಹ ಮುರಿದು ಬಿದ್ದಿವೆ. ಮಳೆಯ ಮೊದಲ ಹಂತದಲ್ಲೆÃ ರಭಸದ ಗಾಳಿ ಮಳೆಗೆ ಬಾಚಣಕಿ ಗ್ರಾ.ಪಂ.ವ್ಯಾಪ್ತಿಯ ಅರಶಿಣಗೇರಿ ಗ್ರಾಮದಲ್ಲಿ ಧಾರಾಕಾರವಾಗಿ ಸುರಿದ ಮಳೆಗೆ ನಲುಗಿಬಿಟ್ಟಿದೆ.
ಸಿಡಿಲಿಗೆ ಜಾನುವಾರು ಬಲಿ: ಸಿಡಿಲು ಬಡಿದು ತಾಲೂಕಿನ ಹುನಗುಂದ ಗ್ರಾಮದಲ್ಲಿ ಬಾರೀ ಹೋರಿಯೊಂದು ಮೃತಪಟ್ಟಿದೆ. ತಹಶೀಲ್ದಾರ ಕಛೆರಿಯ ಕಂದಾಯ ಇಲಾಖೆಯವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

loading...