ಭಾವೈಕ್ಯತೆಯ ಸಂಕೇತದ ಹೊಸೂರ `ಉರುಸು’

0
53

ರಬಕವಿ-ಬನಹಟ್ಟಿ: ಸಮೀಪದ ಹೊಸೂರ ಗ್ರಾಮದಲ್ಲಿ ಹಿಂದು ಮುಸ್ಲಿಂ ಭಾವೈಕ್ಯತೇಯ ಸಂಕೇತವಾಗಿರುವ ಹಜರತ ಪೀರ ಶಿರಾಜಸಾಬ ಮುರಾದಸಾಬ ದರ್ಗಾದ `ಉರುಸು’ ಇಂದು ಶುಕ್ರವಾರ ವಿಜ್ರಂಭಣೆಯಿಂದ ನಡೆಯಿತು.
ಗುರುವಾರ ರಾತ್ರಿ ಗಂಧ ಕಾರ್ಯ ಮುಗಿದ ನಂತರ ರಾತ್ರಿಯಿಂದ ಶುಕ್ರವಾರ ಮುಂಜಾನೆವರೆಗೆ ಜಾತಿ ಬೇದವಿಲ್ಲದೇ ಎಲ್ಲ ಜನಾಂಗದವರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ದೀಡ ನಮಸ್ಕಾರ ಹಾಕಿದರು.

ಪ್ರಾಚೀನ ಕಾಲದಿಂದಲೂ ಹಿಂದೂ ಮುಸ್ಲಿಂರೂ ಕೂಡಿಕೊಂಡು ಆಚರಿಸುತ್ತಾ ಬಂದಿರುವ ಉರುಸು ಆಗಿದ್ದು, ಉರುಸು ಕಾರ್ಯಕ್ರಮಕ್ಕೆ ಸುತ್ತಮುತ್ತಲೀನ ಗ್ರಾಮದ ಜೊತೆಗೆ ಮಹಾರಾಷ್ಟçದ ಪುಣೆ, ಕೋಲ್ಲಾಪೂರ ಸೇರಿದಂತೆ ವಿವಿಧ ಪ್ರಮುಖ ನಗರಗಳಿಂದ ಸಾವಿರಾರು ಜನ ಆಗಮಿಸಿ ದರ್ಶನ ಪಡೆದರು.
ಅಲ್ಲದೇ ಬಂದಂತಹ ಜನ ತಮ್ಮ ಬೇಡಿಕೆಯಂತೆ ಅಪಾರ ಪ್ರಮಾಣದ ಮೆದು ಸಕ್ಕರೆಯನ್ನು ರಾತ್ರಿವರೆಗೂ ಹಂಚಿದರು. ಈ ಉರುಸು ಕಾರ್ಯಕ್ರಮದಲ್ಲಿ ಹಿಂದುಗಳು ಅಪಾರ ಪ್ರಮಾಣದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

loading...